Health Tips: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋ ವಿಷಯ, ಡಿವೋರ್ಸ್ ಅನ್ನೋ ಪದ ಅದೆಷ್ಟರ ಮಟ್ಟಿಗೆ ಸದ್ದು ಮಾಡಿತ್ತಿದೆ ಎಂದರೆ, ಚಿಕ್ಕ ಮಕ್ಕಳಿಗೂ ಡಿವೋರ್ಸ್ ಅಂದ್ರೆ ಏನು ಅಂತಾ ಗೊತ್ತಾಗುತ್ತಿದೆ. ಕೆಲವು ಸೆಲೆಬ್ರಿಟಿಗಳಂತೂ, ಮದುವೆಯಾಗೋದೇ ಡಿವೋರ್ಸ್ ತೆಗೆದುಕೊಳ್ಳೋಕ್ಕೆ ಅನ್ನೋ ರೀತಿ ಆಡುತ್ತಿದ್ದಾರೆ.
ಮದುವೆಯಾಗಿ, ಸಂಸಾರ ನಡೆಸಲು ಇಷ್ಟವಿಲ್ಲದಿದ್ದಾಗ, ಕಾನೂನು ಪ್ರಕಾರವಾಗಿ ದೂರವಾಗುವುದನ್ನು ಡಿವೋರ್ಸ್ ಎನ್ನಲಾಗುತ್ತದೆ. ಆದರೆ ನೀವು ಸ್ಲೀಪ್ ಡಿವೋರ್ಸ್ ಬಗ್ಗೆ ಕೇಳಿದ್ದೀರಾ..? ಅಮೆರಿಕದ ಒಂದು ಸಂಸ್ಥೆ ಪತಿ-ಪತ್ನಿ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಸ್ಲೀಪ್ ಡಿವೋರ್ಸ್ ಎಂಬ ಕಾನ್ಸೆಪ್ಟ್ ತಂದಿದೆ. ಈ ಕಾನ್ಸೆಪ್ಟ್ ಪ್ರಕಾರ, ಪತಿ ಪತ್ನಿ ಕಾನೂನು ಪ್ರಕಾರವಾಗಿ ಡಿವೋರ್ಸ್ ತೆಗೆದುಕೊಳ್ಳುವ ಬದಲು, ಸ್ಲೀಪ್ ಡಿವೋರ್ಸ್ ತೆಗೆದುಕೊಂಡರೆ, ವೈವಾಹಿಕ ಜೀವನ ಉತ್ತಮವಾಗಿಸಬಹುದು ಎಂದು ಸಾಬೀತಾಗಿದೆ.
ಸ್ಲೀಪ್ ಡಿವೋರ್ಸ್ ಎಂದರೆ, ಡಿವೋರ್ಸ್ ಪಡೆಯುವ ಹಂತಕ್ಕೆ ಹೋಗಿರುವ ದಂಪತಿಗಳು, ಬೇರೆ ಬೇರೆ ಮನೆ ಮಾಡದೇ, ಒಂದೇ ಮನೆಯಲ್ಲಿ ಬೇರೆ ಬೇರೆ ಕೋಣೆಯಲ್ಲಿ ನಿದ್ರಿಸಬೇಕು. ಇದರಿಂದ ದೈಹಿಕ ಸುಖದ ಕೊರತೆಯುಂಟಾಾಗುತ್ತದೆ ನಿಜ. ಆದರೆ ದಾಂಪತ್ಯ ಉಳಿಯುತ್ತದೆ. ಜಗಳ ಕಡಿಮೆಯಾಗುತ್ತದೆ. ಬಳಿಕ ಜೀವನ ಸರಿಯಾಗುತ್ತದೆ ಅಂತಾ ಸಾಬೀತಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿಯಲು ವೀಡಿಯೋ ನೋಡಿ.