Tuesday, December 24, 2024

Latest Posts

“ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್” ಸಿನಿಮಾ ಥಿಯೇಟ್ರಿಕಲ್ ಹಕ್ಕನ್ನು ಬಾಚಿಕೊಂಡ ಕೆಆರ್‌ಜಿ ಸ್ಟುಡಿಯೋಸ್

- Advertisement -

Movie News: ಮಲಯಾಳಂ ಸಿನೆಮಾ “ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್” ದ ಥಿಯೇಟ್ರಿಕಲ್ ಹಕ್ಕನ್ನು ಕೇರಳ ರಾಜ್ಯ ಹೊರತು ಪಡಿಸಿ ವಿಶ್ವದಾದ್ಯಂತ ಕೆಆರ್‌ಜಿ ಸ್ಟುಡಿಯೋಸ್ ಬಾಚಿಕೊಂಡಿದೆ.

ವಾಲಟ್ಟಿ ಚಿತ್ರವು ಅದ್ಭುತವಾಗಿ ಸಾಗುವ ಸಾಕು ನಾಯಿಗಳ ಗ್ಯಾಂಗ್ ಬಗ್ಗೆ ಹೃದಯ ಬೆಚ್ಚಗಾಗುವ ಕಥೆಯಾಗಿದ್ದು, ಅಮೋಘ ಸಾಹಸಮಯ ದೃಶ್ಯಗಳನ್ನು ಹೊಂದಿದೆ. ಈ ಚಿತ್ರದ ರೋಚಕ ವಿಷಯವೆಂದರೆ ಅದು ಮಲಯಾಳಂನ ಜನಪ್ರಿಯ ನಟರಾದ ರೋಷನ್ ಮ್ಯಾಥ್ಯೂ, ಸೌಬಿನ್ ಶಾಹಿರ್, ಇಂದ್ರನ್ಸ್, ಸನ್ನಿ ವೇಯ್ನ್, ಸೈಜು ಕುರುಪ್ ಮತ್ತು ಇತರರು ನಾಯಿ ಪಾತ್ರಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ಇಡೀ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಕ್ಯಾನೈನ್ ಮತ್ತು ಇತರ ಸಾಕುಪ್ರಾಣಿಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರೋ ಸಿನೆಮಾ. ನೋಡುಗರ ಮನಸೆಳೆಯುವ ತಾಜಾ ದೃಶ್ಯಗಳಲ್ಲದೇ, ಪ್ರೀತಿ, ಕಾಮಿಡಿ ಹಾಗೂ ಅಡ್ವೆಚರಸ್ ಎಲಿಮೆಂಟ್ಸ್ ಹೊಂದಿದೆ.

ಕೆಆರ್‌ಜಿ ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ, ಈ ಚಿತ್ರವು ಖಚಿತವಾಗಿದೆ ಎಂದು ಹೇಳುತ್ತಾರೆ. ಅನನ್ಯ ಮತ್ತು ತಾಜಾ ಕಥೆ ಹೇಳುವ ಮೂಲಕ ಕಿರಿಯ ಮತ್ತು ಹಿರಿಯ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.
ದಿಲ್ ರಾಜು ಅವರು ತೆಲುಗಿನಲ್ಲಿ, ಅನಿಲ್ ತದಣಿ ಹಿಂದಿಯಲ್ಲಿ ಹಂಚಿಕೆಯ ಜವಾಬ್ದಾರಿಯನ್ನು ಹೊತ್ತಿದ್ದು, ಓವರ್ ಸೀಸ್ ಡಿಸ್ಟ್ರಿಬ್ಯುಶನ್ ಅನ್ನು ಹೋಮ್ ಸ್ಕ್ರೀನ್ ಎಂಟರ್ಟೇನ್ಮೆಂಟ್ ವಹಿಸಿಕೊಂಡಿದೆ.

ವಾಲಟ್ಟಿಯನ್ನು ವಿಜಯ್ ಬಾಬು ಪ್ರಸ್ತುತಪಡಿಸಿದ್ದು ಫ್ರೈಡೇ ಫಿಲ್ಮ್ ಹೌಸ್ ನಿರ್ಮಿಸಿದ್ದಾರೆ. ನಿರ್ದೇಶಕ ದೇವನ್ ರವರು ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದಾಗಿದೆ. ಚಿತ್ರವು ಜುಲೈ 14 ರಂದು ಮಲಯಾಳಂನಲ್ಲಿ ಬಿಡುಗಡೆಯಾಗುತ್ತದೆ ಮತ್ತು ಒಂದು ವಾರದ ನಂತರ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳುತ್ತಿದೆ.

ಪಸಂದಾಗಿದೆ “ಗರಡಿ” ಚಿತ್ರದ ಮೊದಲ ಹಾಡು: “ಹೊಡಿರೆಲೆ ಹಲಗಿ” ಎಂದ ಯೋಗರಾಜ್ ಭಟ್ .

ಗಿನ್ನಿಸ್ ದಾಖಲೆ ಮಾಡುವತ್ತ “ದೇವರ ಆಟ ಬಲ್ಲವರಾರು “: ಕನ್ನಡದಲ್ಲಿ ಮತ್ತೊಂದು ಹೊಸ ಪ್ರಯತ್ನ

ಟೈಟಲ್ ಟೀಸರ್ ನಲ್ಲೇ ನೋಡುಗರ ಮನ ಗೆಲ್ಲುತ್ತಿದೆ “ಆಟ ಸಾಮಾನು” ..

- Advertisement -

Latest Posts

Don't Miss