Tuesday, August 5, 2025

Latest Posts

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರ್‌ಗೆ ಆಹ್ವಾನ..

- Advertisement -

Movie News: ಜನವರಿ 22ಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆಯಲಿದ್ದು, ನಟ, ರಾಜಕಾರಣಿ ನಿಖಿಲ್ ಕುಮಾರ್‌ಗೂ ಆಹ್ವಾನ ನೀಡಲಾಗಿದೆ.

ರಾಮಜನ್ಮಭೂಮಿ ಟ್ರಸ್ಟ್ ವತಿಯಿಂದ ನಿಖಿಲ್‌ಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದ್ದು, ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮಾಜಿ ಸಿಎಂ ಹೆಚ್,ಡಿ,ಕುಮಾರಸ್ವಾಮಿ ಅವರು ಕೂಡ, ತಮಗೆ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ ಎಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.

ಇನ್ನು ನಿಖಿಲ್ ಕುಮಾರ್‌ಗೆ ಜನವರಿ 22ರಂದು ಎರಡೆರಡು ವಿಶೇಷವಾಗಿದೆ. ಒಂದು ರಾಮಮಂದಿರ ಉದ್ಘಾಟನೆಯಾದರೆ, ಅದೇ ದಿನ ನಿಖಿಲ್ ಹುಟ್ಟುಹಬ್ಬ. ಈ ದಿನವೇ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಇದ್ದು, ಈ ಬಾರಿಯ ಹುಟ್ಟುಹಬ್ಬದ ಖುಷಿ ದುಪ್ಪಟ್ಟಾಗಿದೆ ಎಂದು ನಿಖಿಲ್ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ನಿಖಿಲ್ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಎಲ್ಲ ಸಾಧ್ಯತೆಗಳಿದೆ.

ದುಬೈನಲ್ಲಿ ಹುಲಿ ಜೊತೆ ಪೋಸ್ ಕೊಟ್ಟ ಡಿ ಬಾಸ್ ದರ್ಶನ್..

ರಾಮಮಂದಿರಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ ನಟಿ ಪ್ರಣಿತಾ..

ಸಂಗೀತ ಮಾಂತ್ರಿಕ ಉಸ್ತಾದ್ ರಷೀದ್ ಖಾನ್‌ ಇನ್ನಿಲ್ಲ..

- Advertisement -

Latest Posts

Don't Miss