- Advertisement -
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಸೋಲಿನಿಂದ ಬೇಸರಗೊಂಡ ಅಭಿಮಾನಿಯೊಬ್ಬ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸೋತಿರುವ ನಿಖಿಲ್ ಗೌಡ ಅಭಿಮಾನಿಯೊಬ್ಬ ನಿಖಿಲ್ ಸೋತಿದ್ದಾರೆ, ಹೀಗಾಗಿ ಅವರಿಗಾಗಿ ಮತದಾನ ಮಾಡಿ ಶಾಹಿ ಹಾಕಿಸಿಕೊಂಡ ಬೆರಳೇ ಇರಬಾರದು ಅಂತ ತಮ್ಮ ಬೆರಳನ್ನೇ ಕತ್ತರಿಸಿಕೊಂಡಿದ್ದಾನಂತೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಂಡ್ಯ ಜನರಿಗೆ ಯಶ್- ದಚ್ಚು ಮೇಲಿರೋ ನಂಬಿಕೆಗಳೇನು ಗೊತ್ತಾ.. ? ಈ ವಿಡಿಯೋ ತಪ್ಪದೇ ನೋಡಿ.
- Advertisement -