International News: ಸದ್ಯ ಭಾರತ- ಪಾಕಿಸ್ತಾನ ಸಂಘರ್ಷ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಹಲವು ಭಾರತೀಯರು ಈ ಉಗ್ರರ ದೇಶಕ್ಕೆ ಬೆಂಬಲಿಸುತ್ತಿರುವ ದೇಶಗಳಾದ ಚೀನಾ ಮತ್ತು ಟರ್ಕಿ ದೇಶ ಬೇಡ ಎಂದು ಅಭಿಯಾನ ಶುರು ಮಾಡಿದ್ದಾರೆ.
ಭಾರತೀಯ ಮಾರುಕಟ್ಯಲ್ಲಿ ಟರ್ಕಿ ಮತ್ತು ಚೀನಾ ವಸ್ತುಗಳು ಮಾರಾಟವಾಗುತ್ತದೆ. ಅಂಥ ವಸ್ತುಗಳನ್ನು ಇಲ್ಲಿವರೆಗೆ ಭಾರತೀಯರು ಖರೀದಿಸುತ್ತಿದ್ದರು. ಆದರೆ ಈಗ ಈ ಎರಡೂ ದೇಶಗಳು ಪಾಕಿಸ್ತಾನವನ್ನು ಬೆಂಬಲಿಸುವ ಕೆಲಸ ಮಾಡಿದ್ದು, ಈ ಕಾರಣಕ್ಕೆ ಈ ಎರಡೂ ದೇಶಗಳ ಉತ್ಪನ್ನಗಳನ್ನು ನಾವು ಬಾಯ್ಕಾಟ್ ಮಾಡಬೇಕು ಎಂದು ಭಾರತೀಯರು ಅಭಿಯಾನ ಶುರು ಮಾಡಿದ್ದಾರೆ.
ನಮಗೆ ದೇಶ ಮ“ದಲು ವ್ಯವಹಾಾರ ನಂತರ. ಹಾಗಾಗಿ ನಾವು ಪಾಪಿಗಳನ್ನು ಬೆಂಬಲಿಸುವ ದೇಶವನ್ನು ಬೆಂಬಲಿಸುವುದಿಲ್ಲವೆಂದು ಭಾರತೀಯರು ಹೇಳಿದ್ದಾರೆ. ಹಾಗಾಗಿಯೇ ಈಗ ಸೋಶಿಯಲ್ ಮೀಡಿಯಾದಲ್ಲಿ ಟರ್ಕಿ ಬ್ಯಾನ್ ಚೀನಾ ಬ್ಯಾನ್ ಎನ್ನುವ ಅಭಿಯಾನ ಶುರು ಮಾಡಿದ್ದಾರೆ.
ಚೀನಾ ಮತ್ತು ಟರ್ಕಿಯಿಂದ ಬರುವ ಪ್ರಾಡಕ್ಟ್ಗಳನ್ನು ಗುರುತಿಸಿ ಬ್ಯಾನ್ ಮಾಡಬೇಕು ಎಂದು ಭಾರತೀಯರು ಆಗ್ರಹಿಸಿದ್ದಾರೆ. ಅಲ್ಲದೇ, ಚೀನಾ ಮತ್ತು ಟರ್ಕಿ ದೇಶಗಳಿಗೆ ಯಾರ್ಯಾರು ಪ್ರವಾಸಕ್ಕಾಗಿ ಬುಕ್ ಮಾಡಿದ್ದರೋ, ಅವರೆಲ್ಲ ಫ್ಲೈಟ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ನಮ್ಮ ದೇಶವನ್ನು ವಿರೋಧಿಸಿ, ಪಾಕಿಸ್ತಾನಕ್ಕೆ ಬೆಂಬಲಿಸುವ ದೇಶಗಳ ಪ್ರವಾಸ ನಾವು ಮಾಡುದಿಲ್ಲ ಎಂದಿದ್ದಾರೆ. ಹೀಗಾಗಿಯೇ ಈ ಎರಡೂ ದೇಶದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಾಕಷ್ಟು ನಷ್ಟ ಸಂಭವಿಸಿದೆ
ಪಹಲ್ಗಾಮ್ ನ ಬೈಸರನ್ ವ್ಯಾಲಿಯಲ್ಲಿ ಪ್ರವಾಸಕ್ಕೆಂದು ಬಂದಿದ್ದ 26 ಪ್ರವಾಸಿಗರನ್ನು, ಉಗ್ರರು ಧರ್ಮ ಕೇಳಿ ಹತ್ಯೆ ಮಾಡಿದ್ದರು. ಬಳಿಕ ಅಲ್ಲಿದ್ದ ಮಹಿಳೆಯರಿಗೆ ಹೋಗಿ ಮೋದಿಗೆ ಹೇಳಿ ಎಂದು ವ್ಯಂಗ್ಯವಾಡಿ ಹೋಗಿದ್ದರು. ಇಂಥ ಕೆಲಸಕ್ಕೆ ತಕ್ಕ ಪ್ರತೀಕಾರ ನೀಡಲೇಬೇಕೆಂದು ನಿರ್ಧರಿಸಿದ್ದ ಭಾರತ ಸರ್ಕಾರ, ಭಾರತೀಯ ಸೇನೆಗೆ ಪರಮಾಧಿಕಾರವನ್ನು ನೀಡಿತ್ತು. ಹೀಗಾಗಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ದಾಳಿ ಮಾಡಿ, ನೂರಕ್ಕೂ ಹೆಚ್ಚು ಉಗ್ರರನ್ನು ಮತ್ತು ಅವರ ಅಡಗು ತಾಣಗಳನ್ನು ಫಿನಿಶ್ ಮಾಡಿದ್ದರು. ಮತ್ತು ಈ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಆಪೇರಷನ್ ಸಿಂಧೂರ ಎಂದು ಹೆಸರಿರಿಸಿದರು.
ಆಪರೇಷನ್ ಸಿಂಧೂರ್ ಕಾರ್ಯ ಇನ್ನು ಮುಂದುವರಿದಿದೆ. ಅಲ್ಲಿನ ಉಗ್ರರು, ಪ್ರತೀದಾಳಿ ಮಾಡಲು ಬಂದ ಪಾಕ್ ಸೈನಿಕರನ್ನು ಭಾರತೀಯ ಸೇನೆ ಸದೆಬಡೆದಿದೆ. ಆದರೆ ಇದರಲ್ಲಿ ಭಾರತೀಯ ಸೇನೆಯ ಹಲವು ಸೈನಿಕರು ಹುತಾತ್ಮರಾಗಿದ್ದಾರೆ ಅನ್ನೋದು ಬೇಸರದ ಸಂಗತಿ. ಇನ್ನು ಪಾಕ್ ಗಡಿಯಲ್ಲಿರುವ ಅಮಾಯಕ ಜನರನ್ನು, ದೇವಸ್ಥಾನ, ಗುರುದ್ವಾರವನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ನಮ್ಮ ಭಾರತೀಯ ಸೇನೆ ಕೂಡ ಪ್ರತ್ಯುತ್ತರ ನೀಡುತ್ತಿದೆ.