- Advertisement -
News: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಬಿಜೆಪಿಯ ಪ್ರಕಾಶ್ ಬೆಳಗಲಿ ವಿರುದ್ಧ ಬ್ಯಾಂಕ್‌ನ 8 ಜನ ಸದಸ್ಯರು ಅಸಮಾಧಾನ ಹೊರಹಾಕಿದ್ದು, ಪ್ರಕಾಶ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.
ಲಕ್ಷ್ಮಣ್ ಸವದಿ, ಎಂ.ಸಿ.ಸುಧಾಕರ್, ಅರೆಬೈಲು ಶಿವರಾಮ್ ಹೆಬ್ಬಾರ್, ಮಂಜುನಾಥ್ ಗೌಡ, ರವಿ ಸೇರಿ ಒಟ್ಟು 8 ಜನ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ದೇವರಾಜು ಅವರಿಗೆ ತಮ್ಮ ಅವಿಶ್ವಾಸ ನಿರ್ಣಯ ಪತ್ರಿಕೆಯನ್ನು ಸಲ್ಲಿಕೆ ಮಾಡಿದ್ದಾರೆ.
ಈ ಹಿನ್ನೆಲೆ ಮುಂದಿನ 15 ದಿನಗಳಲ್ಲಿ ಅಧ್ಯಕ್ಷರು ಮರು ಆಯ್ಕೆಯಾಗುವ ಸಂಭವವಿದೆ. ಬೆಳ್ಳಿ ಪ್ರಕಾಶ್ ಅವರು ಅಧಿಕಾರದಿಂದ ಇಳಿಯುವುದು ಬಹುತೇಕ ಖಚಿತವಾಗಿದೆ. ಎಂಎಲ್‌ಸಿ ರವಿ ಮತ್ತು ಲಕ್ಷ್ಮಣ್ ಸವದಿ ಅವರು ಅಧ್ಯಕ್ಷ ಸ್ಥಾನ ಹೊಂದಲು ಬಯಸಿದ್ದಾರೆನ್ನಲಾಗಿದೆ.
- Advertisement -