Political News: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನಯ್ಯ ಅವರ ಪುತ್ರಿ ನೇಹಾ ಕೊಲೆಯಾಗಿದ್ದು, ಆರೋಪಿ ಫಯಾಜ್ ನನ್ನು ಅರೆಸ್ಟ್ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿ ಸಾಂತ್ವನ ಹೇಳಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಿರಂಜನಯ್ಯ ಬಳಿ ಹೋದಾಗ, ನಿರಂಜನ್ ಅವರು, ನನ್ನ ಮಗಳ ಆತ್ಮಕ್ಕೆ ಶಾಂತಿ ಕೊಡಿಸುವ ಶಕ್ತಿ ನಿಮ್ಮ ಬಳಿಯಷ್ಟೇ ಇದೆ. ನಿಮ್ಮನ್ನು ಬಿಟ್ಟು ಬೇರೆ ಯಾರ ಬಳಿಯೂ ಈ ಶಕ್ತಿ ಇಲ್ಲ. ನೀವೇ ನಮಗೆ ಸಹಾಯ ಮಾಡಬೇಕು. ಯಾವ ಊಹಾಪೋಹ ಇಲ್ಲದೇ, ನಾನು ನೇರವಾಗಿಯೇ ಹೇಳುತ್ತೇನೆ. ಆರೋಪಿಗೆ ತಕ್ಕ ಶಿಕ್ಷೆ ಕೊಡಿಸಲು ನಿಮ್ಮಿಂದ ಮಾತ್ರ ಸಾಧ್ಯ, ನೀವು ನಮಗೆ ಸಹಾಯ ಮಾಡಲೇಬೇಕು ಎಂದು ನೇಹಾ ತಂದೆ, ಜೋಶಿ ಬಳಿ ಮನವಿ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಆರೋಪಿಗೆ ಬೇಲ್ ಸಿಗಲೇಬಾರದು. ಗಲ್ಲು ಶಿಕ್ಷೆಯಾಗಲೇಬೇಕು. ನೀವು ನನಗೇನು ನ್ಯಾಯ ಕೊಡಿಸುತ್ತೀರೋ ಗೊತ್ತಿಲ್ಲ. ಆಕೆಯ ಆತ್ಮಕ್ಕೆ ಶಾಂತಿ ಕೊಡಿಸಬೇಕು. ನಮ್ಮ ಸಮಾಜದವರು ಹೌದು ಅನ್ನಬೇಕು. ಹಾಗೆ ನೀವು ನನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿರುವ ಜೋಶಿ, ಖಂಡಿತ ಸಹಾಯ ಮಾಡೋಣವೆಂದಿದ್ದಾರೆ.
ಆರೋಪಿ ಪ್ರಕಾರ ಬಿಸಿಎ ಓದುವಾಗಿನಿಂದ ನೇಹಾ (Neha Hiremath) ಮತ್ತು ಫಯಾಜ್ ಲವ್ ಮಾಡುತ್ತಿದ್ದರು. ಇತ್ತೀಚೆಗೆ ಯುವತಿ ಆತನನ್ನು ಅವೈಡ್ ಮಾಡುತ್ತಿದ್ದಳಂತೆ. ಇದೇ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಫಯಾಜ್ ತಿಳಿಸಿದ್ದಾನೆ. ಸಂಜೆ 4.45ರ ಸುಮಾರಿಗೆ ನೇಹಾ ಕೊಲೆಯಾಗಿದೆ. ಆಕೆ ಕಾಲೇಜಿನಿಂದ ಹೊರಬರುತ್ತಿದ್ದಂತೆಯೇ ಆರೋಪಿ ಫಯಾಜ್ ಏಕಾಏಕಿ ಆಕೆಯ ಮೇಲೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಕೂಡಲೇ ಕಾಲೇಜಿನ ಆಡಳಿತ ಮಂಡಳಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಆಕೆ ಸಾವನ್ನಪ್ಪಿದ್ದಾಳೆ. ಘಟನೆ ನಡೆದ 1 ಗಂಟೆಯೊಳಗೆ ಆರೋಪಿ ಅರೆಸ್ಟ್ ಆಗಿದ್ದಾನೆ.
ನಟಿ ಹರ್ಷಿಕಾ ಮತ್ತು ಭುವನ್ ಮೇಲೆ ಹಲ್ಲೆ ಯತ್ನ: ನಾವೇನು ಪಾಕಿಸ್ತಾನದಲ್ಲಿದ್ದೇವಾ..? ಎಂದು ಬೇಸರ..
ಇಂಥ ಕೆಲಸಕ್ಕೆ ಎನ್‌ಕೌಂಟರ್ ಕಾನೂನು ಬರಲೇಬೇಕು: ಸಚಿವ ಸಂತೋಷ್ ಲಾಡ್ ಆಗ್ರಹ