Uttara Pradesh news: ಹೆಲ್ಮೆಟ್ ಹಾಕದಿದ್ದರೆ ಏನು ನಷ್ಟ ಅನ್ನೋದನ್ನ ಅಪಘಾತವಾಗಿ, ತೆಲೆಗ ಪೆಟ್ಟು ಬಿದ್ದಿರುವವರಿಗೆ ಚೆನ್ನಾಗಿ ತಿಳಿದಿರುತ್ತದೆ. ಹೆಲ್ಮೆಟ್ ಹಾಕದೇ, ಎಷ್ಟೋ ಜನರ ಜೀವ ಹೋಗಿದೆ. ಹಾಗಾಗಿ ಇಂಥ ಸಾವುಗಳ ಸಂಖ್ಯೆ ಕಡಿಮೆ ಆಗಬೇಕು ಅಂದ್ರೆ, ಕೆಲವು ರೂಲ್ಸ್ ಜಾರಿ ಮಾಡಲೇಬೇಕೆಂದು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ.
ಆ ರೂಲ್ಸ್ ಏನಂದ್ರೆ, ಯಾರು ಹೆಲ್ಮೆಟ್ ಧರಿಸಿರುವುದಿಲ್ಲವೋ, ಅಂಥವರ ಗಾಡಿಗೆ ಪೆಟ್ರೋಲ್ ಹಾಕಲಾಗುವುದಿಲ್ಲ ಎಂಬ ನಿಯಮವನ್ನು ಯೋಗಿ ಆದಿತ್ಯನಾಥ್ ಸರ್ಕಾರ ಜಾರಿ ಮಾಡಿದೆ. ರಸ್ತೆ ಅಪಘಾತದಿಂದ ತಲೆಗೆ ಪೆಟ್ಟು ಬೀಳುವುದು, ಸಾವು ನೋವು ಸಂಭವಿಸುವ ಸಾಧ್ಯತೆ ಇರುವ ಕಾರಣಕ್ಕೆ, ಅಂಥ ಸಾವಿನ ಸಂಖ್ಯೆ ಕಡಿಮೆ ಮಾಡಲು ಈ ರೂಲ್ಸ್ ಜಾರಿಗೆ ತರಲಾಗಿದೆ.
ಸಾಮಾನ್ಯ ರೂಲ್ಸ್‌ನಂತೆ, ಮುಂಬದಿ, ಹಿಂಬದಿ ಇಬ್ಬರೂ ಸವಾರರೂ ಹೆಲ್ಮೆಟ್ ಧರಿಸಿರಬೇಕು. ಇಬ್ಬರಲ್ಲಿ ಒಬ್ಬರು ಹೆಲ್ಮೆಟ್ ಹಾಕದಿದ್ದರೂ, ಪೆಟ್ರೋಲ್ ಹಾಕಬಾರದು ಎಂದು ರೂಲ್ಸ್ ಮಾಡಲಾಗಿದೆ. ಎಲ್ಲಾ ಪೆಟ್ರೋಲ್ ಬಂಕ್‌ಗಳಿಗೆ ಸಾರಿಗೆ ಇಲಾಖೆ ಈ ಬಗ್ಗೆ ಸೂಚನೆ ನೀಡಿ, ಪತ್ರ ಬರೆದಿದ್ದು, 75 ಡಿಸಿಗಳಿಗೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.