ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮಹಿಳಾ ಆಯೋಗದಿಂದ ನೊಟೀಸ್

Movie News: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಸಿನಿಮಾ 50ನೇ ದಿನದ ಸಂಭ್ರಮದ ವೇಳೆ ಮಾತನಾಡಿದ್ದ ಮಾತಿಗೆ, ಮಹಿಳಾ ಸಂಘಟನೆಗಳು ತೀವ್‌ರ ಆಕ್ರೋಶ ಹೊರಹಾಕಿದ್ದು, ಮಹಿಳಾ ಆಯೋಗ ನೋಟೀಸ್ ನೀಡಿದೆ. 10 ದಿನದೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್ ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕಾಗಿ, ದೂರು ದಾಖಲಾಗಿತ್ತು. ಗೌಡತಿಯರ ಸೇನೆಯ ಹೆಣ್ಣು ಮಕ್ಕಳು ಈ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರ ಪರಿಣಾಮ, ಮಹಿಳಾ ಆಯೋಗ ದರ್ಶನ್‌ಗೆ ನೊಟೀಸ್ ನೀಡಿದೆ.

ಇನ್ನು ದರ್ಶನ್ ಹೇಳಿದ್ದೇನು ಎಂದರೆ, ಇಂದು ಇವಳು ಇರುತ್ತಾಳೆ, ನಾಳೆ ಅವಳು ಬರುತ್ತಾಳೆ ಎಂದು ಭಾಷಣದ ವೇಳೆ ವೇದಿಕೆ ಮೇಲೆ ಹೇಳಿದ್ದರು. ಈ ಮಾತನ್ನು ವಿರೋಧಿಸಿ, ಗೌಡತಿಯರ ಸಂಘದವರು ದೂರು ನೀಡಿದ್ದರು.

ದೇಶದ ಜನ ಬಿಜೆಪಿಗೆ ಯಾಕೆ ಓಟ್ ಹಾಕಬೇಕು..? ಸಿ.ಟಿ.ರವಿ ಹೇಳಿದ್ದೇನು..?

ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು

ಇಂಥ ಆದೇಶ ನೀಡಿರುವ ಕಾಂಗ್ರೆಸ್ ವಿಕೃತ ಮನಸ್ಥಿತಿಯ ಪ್ರತೀಕ: ಸಂಸದ ತೇಜಸ್ವಿ ಸೂರ್ಯ

About The Author