Hubli News: ಹುಬ್ಬಳ್ಳಿ: ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ. ಎಲ್ಲ ಮಗ್ಗಲುಗಳಲ್ಲಿಯೂ ತನಿಖೆ ಮಾಡಲು ಸೂಚಿಸಿದ್ದೇನೆ. ಇದೊಂದು ದುರದೃಷ್ಟ ಘಟನೆ. ಸಿಐಡಿ ಗೆ ಕೋಟ್ಟಿದ್ದೇವೆ. ಆರೋಪಿಯನ್ನು ಬಂಧಿಸಿದ್ದೇವೆ. ಸಿಐಡಿ ತನಿಖೆ ಆರಂಭಗೊಂಡಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ನೇಹಾ ಹಿರೇಮಠ ಮನೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿ ರಾಜಕೀಯ ಮಾಡ್ತಿದೆ. ಒಂದು ಪ್ರಕಣವನ್ನಾದ್ರೂ ಅವ್ರು ಸಿಬಿಐಗೆ ಕೊಟ್ಟಿದ್ದರಾ..? ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಗೆ ಕೊಟ್ಟಿದ್ದೆವು ಎಂದರು.
ನೇಹಾ ಕುಟುಂಬದ ಜೊತೆಗೆ ನಾವಿರುತ್ತೇವೆ. ಅವರಿಗೆ ರಕ್ಷಣೆ ಬೇಕಿದ್ದರೆ ಕೊಡುತ್ತೇವೆ. ಸಿಐಡಿ ಅಧಿಕಾರಿಗಳು ತನಿಖೆ ಮಾಡ್ತಾರೆ. ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ನಂತರ ಕೋರ್ಟ್ ನಲ್ಲಿ ಟ್ರಯಲ್ ನಡೆಯುತ್ತದೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಗರಿಷ್ಠ ಮಟ್ಟದಲ್ಲಿ ಶಿಕ್ಷೆ ಆಗುತ್ತೆ. ಧೈರ್ಯ ವಾಗಿ ಇರಿ, 120 ದಿನದ ಒಳಗೆ ನ್ಯಾಯ ಕೊಡಿಸೋಣ ಎಂದು ನಿರಂಜನ್ ಹಿರೇಮಠ್ ಬೆನ್ನು ತಟ್ಟಿ ಸಾಂತ್ವನ ಹೇಳಿದರು.
ಪದೇ ಪದೇ ಐಶ್ವರ್ಯಾ ರೈ, ಅಮಿತಾಬ್ ಬಚ್ಚನ್ ಹೆಸರು ಉಲ್ಲೇಖ: ರಾಹುಲ್ ವಿರುದ್ಧ ಬಿಗ್‌ಬಿ ಫ್ಯಾನ್ಸ್ ಗರಂ
ಪಾಟ್ನಾ ರೈಲ್ವೆ ನಿಲ್ದಾಣದ ಬಳಿ ಹೊಟೇಲ್‌ನಲ್ಲಿ ಅಗ್ನಿ ಅವಘಡ: 6 ಮಂದಿಯ ದುರ್ಮರಣ, ಹಲವರಿಗೆ ಗಾಯ