Wednesday, July 2, 2025

Latest Posts

Odisha : ಪ್ರಾಥಮಿಕ ಶಾಲಾ ಶಿಕ್ಷಕರ ವೇತನವನ್ನು 50% ರಷ್ಟು ಹೆಚ್ಚಿಸಿದ ಒಡಿಶಾ ಸರ್ಕಾರ..!

- Advertisement -




Odisha: ಹೊಸ ವರ್ಷದ ಉಡುಗೊರೆಯಾಗಿ, ಒಡಿಶಾ ಸರ್ಕಾರ ಸೋಮವಾರ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನವನ್ನು 50% ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ನಿರ್ಧಾರ ಮಾಡಿದ್ದಾರೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತೆಗೆದುಕೊಂಡ ನಿರ್ಧಾರವನ್ನು ಜನವರಿ 1, 2022 ರಿಂದಲೇ ಜಾರಿಗೆ ತರಲಾಗುತ್ತದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ 33,038 ಕಿರಿಯ ಶಿಕ್ಷಕರಿಗೆ ಪ್ರಯೋಜನವಾಗಲಿದೆ.

“ರಾಜ್ಯ ಸರ್ಕಾರ ಮಾಡಿರುವ ವೇತನ ಹೆಚ್ಚಳದ ನಿರ್ಧಾರದಿಂದ 13,324 ಗುತ್ತಿಗೆ ಮತ್ತು 19,714 ನಿಯಮಿತ ಶಿಕ್ಷಕರು ಹೆಚ್ಚಿನ ವೇತನವನ್ನು ಪಡೆಯುತ್ತಾರೆ” ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.

ಪ್ರಸ್ತುತ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಶಿಕ್ಷಕರ ವೇತನ 7,400 ಇದ್ದು, ಸರ್ಕಾರದ ನಿರ್ಧಾರದಿಂದಾಗಿ 11,000 ರೂ.ಗೆ ಏರಿಕೆಯಾಗಲಿದೆ. ಸಾಮಾನ್ಯ ಕಿರಿಯ ಶಿಕ್ಷಕರ ವೇತನ ಪ್ರಸ್ತುತ 9,200 ಇದ್ದು, 13,800 ರೂ.ಗೆ ಹೆಚ್ಚಾಗಲಿದೆ. ರಾಜ್ಯ ಸರ್ಕಾರದ ಈ ಘೋಷಣೆಯ ಅನುಷ್ಠಾನಕ್ಕಾಗಿ ಸರ್ಕಾರವು ವರ್ಷಕ್ಕೆ 168 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯನ್ನು ಹೊರಬೇಕಾಗುತ್ತದೆ.

- Advertisement -

Latest Posts

Don't Miss