Hubli News: ಹುಬ್ಬಳ್ಳಿ: ಬಾಲಕನೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದ ವ್ಯಕ್ತಿಯನ್ನು ನಗರದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿಯ ಸಿರಾಜ್ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ಸಿರಾಜ್ ಎಂಬಾತ ಬಾಲಕನೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದ. ಈ ಬಗ್ಗೆ ಈ ಹಿಂದೆಯೇ ಬಾಲಕನ ಪೋಷಕರು ಆರೋಪಿಗೆ ಬೈದಿದ್ದರು. ಆದರೂ ಆ ವ್ಯಕ್ತಿ ಅದೇ ಚಾಳಿ ಮುಂದುವರಿಸಿದ್ದ. ಹೀಗಾಗಿ ಬಾಲಕನ ಕುಟುಂಬಸ್ಥರು ಆತನ ವಿರುದ್ಧ ದೂರು ನೀಡಿದ್ದರು.
ದೂರಿನನ್ವಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇಸ್ಪೆಕ್ಟರ್ ನೇತೃತ್ವದ ತಂಡ ಆರೋಪಿ ಸಿರಾಜ್‌ನನ್ನು ಇದೀಗ ಕಂಬಿ ಹಿಂದೆ ತಳ್ಳಿದ್ದಾರೆ. ಬಾಲಕನನ್ನು ಕೆಎಂಸಿಆರ್‌ಐಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಪ್ರಕರಣ..?
ಹಳೇ ಹುಬ್ಬಳ್ಳಿಯ ಮಾರುತಿ ನಗರದ ನಿವಾಸಿ 55 ವರ್ಷದ ಸಿರಾಜ್ ಎಂಬಾತ, 5 ವರ್ಷದ ಪುಟ್ಟ ಬಾಲಕ ಶ್ರೀನಾಥ್ ಎಂಬುವವನನ್ನು ಜ್ಯೂಸ್ ಕೊಡಿಸುವುದಾಗಿ ಹೇಳಿ, ಆಸೆ ತೋರಿಸಿ, ಕರೆದೊಯ್ದಿದ್ದಾನೆ. ಬಳಿಕ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಿಸಿದ್ದಾನೆ. ಮಗುವಿನ ಕಿರುಚಾಟ ಕೇಳಿ ಕುಟುಂಬಸ್ಥರು ಮಗುವಿನ ರಕ್ಷಣೆ ಮಾಡಿದ್ದಾರೆ.
ಮಾರುತಿ ನಗರದ ಚೌಹಾನ್ ಲೇಔಟ್ ಬಳಿ ಸರೌನಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗುವಿನ ಬಾಯಿಗೆ ತನ್ನ ಮರ್ಮಾಂಗವಿಟ್ಟು ವಿಕೃತಿ ಮೆರೆದಿದ್ದಾನೆಂದು ಸಿರಾಜ್ ವಿರುದ್ಘಧ ಆರೋಪ ಕೇಳಿ ಬಂದಿದೆ. ಅಲ್ಲದೇ, ಮಗು ಇದಕ್ಕೆ ಒಪ್ಪದಿದ್ದಕ್ಕೆ, ಅದರ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಮಗುವಿನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಮಗುವಿನ ತಾಯಿ ಆತನನ್ನು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.