Tuesday, May 30, 2023

Latest Posts

ಪತಿಯ ಚಿತಾಭಸ್ಮ ಕಳವು- ವೃದ್ಧೆಗೆ ಆಘಾತ..!

- Advertisement -

ಇಂಗ್ಲೆಂಡ್: ಪತಿಯನ್ನು ಕಳೆದುಕೊಂಡು ಒಂಟಿ ಜೀವನ ಸಾಗಿಸ್ತಿದ್ದ ಆ ವಯೋವೃದ್ಧೆಗೆ ತನ್ನ ಪತಿ ಇನ್ನೂ ತಮ್ಮ ಜೊತೆಗಿದ್ದಾರೆ ಅನ್ನೋ ನಂಬಿಕೆ ಇತ್ತು. ಮೃತಪಟ್ಟಿದ್ದ ತನ್ನ ಪತಿಯ ಚಿತಾಭಸ್ಮವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಆಕೆ ತಾನು ಒಂಟಿ ಅಂತ ಎಂದೂ ಭಾವಿಸಿರಲಿಲ್ಲ. ಆದ್ರೆ ಇಂಥಹ ಚಿತಾ ಭಸ್ಮವನ್ನೂ ಕಳ್ಳರು ಬಿಡದೆ ಕಳವು ಮಾಡಿರೋದು ವೃದ್ಧೆಗೆ ಆಘಾತ ತಂದಿದೆ.

ಬಾಬ್ಲಿಂಗ್ಟನ್ ನ ಸೌತ್ ಸ್ಟಾಫೋರ್ಡ್ ಶೈರ್ ನಲ್ಲಿ ವಾಸಿಸುತ್ತಿರುವ 71 ವರ್ಷದ ವಯೋವೃದ್ಧೆಯ ಮನೆಯಲ್ಲಿ ಇಂದು ಮಧ್ಯಾಹ್ನ ಕಳ್ಳತನ ನಡೆದಿದೆ. ನಗದು ಮತ್ತು ಬೆಲೆಬಾಳುವ ಒಡವೆಗಳನ್ನು ಕದ್ದೊಯ್ದಿರುವ ಕಳ್ಳರು, ಮನೆಯಲ್ಲಿದ್ದ ಚಿತಾಭಸ್ಮವಿದ್ದ ಪೆಟ್ಟಿಯನ್ನೂ ಹೊತ್ತೋಯ್ದಿದ್ದಾರೆ. ಅದರಲ್ಲಿದ್ದ ಚಿತಾಭಸ್ಮವನ್ನು ಮಾತ್ರ ನಾಪತ್ತೆಯಾಗಿದ್ದು, ಮರದ ಪೆಟ್ಟಿಗೆಯನ್ನು ಬೀದಿಯಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ.

ಆದ್ರೆ ಆ ವಯೋವೃದ್ಧೆ ಇದೀಗ ತನ್ನ ಪತಿಯ ಚಿತಾಭಸ್ಮ ನಾಪತ್ತೆಯಾಗಿದ್ರಿಂದ ತೀವ್ರ ಆಘಾತವಾಗಿದೆ. ನನಗೆ ಹಣ ಒಡವೆ ಏನೂ ಬೇಡ, ನನ್ನ ಪತಿಯ ಚಿತಾ ಭಸ್ಮವನ್ನು ಹೇಗಾದ್ರೂ ಮಾಡಿ ಪತ್ತೆ ಹಚ್ಚಿ ನನಗೆ ತಲುಪಿಸಿ ಅಂತ ಪೊಲೀಸರ ಬಳಿ ಕಣ್ಣೀರಿಡುತ್ತಿದ್ದಾರೆ. ಇನ್ನು ಚಿತಾಭಸ್ಮಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ವೃದ್ಧೆಗೆ ಕಳ್ಳರನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ.

ಇನ್ಮುಂದೆ ಇಂಟರ್ನೆಟ್ ಬಲು ದುಬಾರಿ!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=wgU7B5w86BA
- Advertisement -

Latest Posts

Don't Miss