Political News: ಕೆಲವು ಕಾಂಗ್ರೆಸ್ಸಿಗರು ಗೆದ್ದಾಗ, ತಮ್ಮ ಪ್ರಯತ್ನದಿಂದಲೇ ಗೆದ್ದೆವು ಎಂದು ಸೋತಾಗ, ಇವಿಎಂ ಹ್ಯಾಕ್ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಾರೆ. ಈ ವಿಷಯದ ಬಗ್ಗೆ ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಮಾತನಾಡಿದ್ದು, ಸೋತರೆ ಇವಿಎಂ ಮೇಲೆ ಆರೋಪಿಸುವ ಕಾಂಗ್ರೆಸ್ ಚಾಳಿಗೆ ಟಾಂಟ್ ಕೊಟ್ಟಿದ್ದಾರೆ.
ಚುನಾವಣೆಯಲ್ಲಿ ಗೆದ್ದಾಗ ಸಂಭ್ರಮಿಸುತ್ತೀರಿ. ಸೋತಾಗ ಇವಿಎಂ ಕಾರಣ ಎನ್ನುತ್ತೀರಿ. ಇದು ಹೇಗೆ ಸಾಧ್ಯ ಎಂದು ಓಮರ್ ಪ್ರಶ್ನಿಸಿದ್ದಾರೆ. ಇದೇ ಇವಿಎಂ ಸಹಾಯದಿಂದ ನಿಮ್ಮ ಸ್ವಂತ ಪಕ್ಷದಿಂದಲೇ ನೂರಕ್ಕೂ ಹೆಚ್ಚು ಮಂದು ಗೆಲುವು ಸಾಧಿಸುತ್‌ತಾರೆ. ಆವಾಗ ಆ ಗೆಲುವನ್ನು ಸಂಭ್ರಮಿಸುತ್ತೀರಿ. ಬಳಿಕ ನೀವು ನಿರೀಕ್ಷಿಸಿದ ಫಲಿತಾಂಶ ಬಾರದೇ ಇದ್ದಲ್ಲಿ, ಇವಿಎಂ ಅನ್ನು ದೂರುತ್ತೀರಿ ಎಂದು ಕಾಂಗ್ರೆಸ್ ಹೆಸರು ಹೇಳದೇ ಪರೋಕ್ಷವಾಗಿ ಅಮರ್ ಅಬ್ದುಲ್ಲಾ ಟಾಂಟ್ ಕೊಟ್ಟಿದ್ದಾರೆ.
ಅಲ್ಲದೇ ತಾವು ಸೋತಾಗ ಎಂದಿಗೂ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಲಿಲ್ಲ. ಗೆದ್ದಾಗ ಮಾತ್ರ ಸಂಭ್ರಮಿಸಿದ್ದೆ. ಜನರು ಒಮ್ಮೆ ಗೆಲ್ಲಿಸುತ್ತಾರೆ. ಒಮ್ಮೆ ಸೋಲಿಸುತ್ತಾರೆ. ಅದು ಪ್ರಜಾತಂತ್ರ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.