- Advertisement -
ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಅಪ್ಕಮ್ಮಿಂಗ್ ಸಿನಿಮಾ ಪೈಲ್ವಾನ್ ಇದೇ ತಿಂಗಳು 12ರಂದು ಐದು ಭಾಷೆಯಲ್ಲಿ ವರ್ಡ್ವೈಡ್ ಬಿಗ್ ಸ್ಕ್ರೀನ್ಗೆ ಲಗ್ಗೆ ಇಡ್ತಿದೆ. ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಲಿರೋ ಸುದೀಪ್ ಪೈಲ್ವಾನ್ ಅವತಾರ ನೋಡೋದಿಕ್ಕೆ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ. ಈಗಾಗ್ಲೇ ಬುಕ್ ಮೈ ಶೋದಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬೀಳ್ತಿದ್ದಾರೆ.
ಕನ್ನಡ, ತಮಿಳು ಎರಡು ಭಾಷೆಯಲ್ಲಿ ಬುಕಿಂಗ್ ಆರಂಭವಾಗಿದ್ದು, ಮಧ್ಯರಾತ್ರಿಯಿಂದಲ್ಲೇ ಪೈಲ್ವಾನ್ ಹವಾ ಶುರುವಾಗಲಿದೆ. ಹೆಬ್ಬುಲಿ ಕೃಷ್ಣ ನಿರ್ದೇಶನ ಈ ಸಿನಿಮಾದಲ್ಲಿ ಸುದೀಪ್ಗೆ ಜೋಡಿಯಾಗಿ ಚೆಂದುಳ್ಳಿ ಚೆಲುವೆ ಆಕಾಂಕ್ಷ ಸಿಂಗ್ ಅಭಿನಯಿಸಿದ್ದಾರೆ. ಅಲ್ಲದೇ ಬಿಟೌನ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಅಭಿನಯಿಸಿದ್ದಾರೆ.
- Advertisement -