Saturday, March 2, 2024

Latest Posts

ಕೊಂಚ ಗ್ಯಾಪ್ ಬಳಿಕ ಮತ್ತೆ ನಟನೆಗೆ ಮರಳಿದ ಕರುನಾಡ ಚಕ್ರವರ್ತಿ..!

- Advertisement -


ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಅಂದ್ರೇನೆ ಹಾಗೇ ಉತ್ಸಾಹ ಚಿಲುಮೆ. ಈಗಿನ ಯೂತ್ಸ್​ಗೆ ರೋಲ್​ ಮಾಡೆಲ್​. 55 ಹರೆಯದ ಈ ಎನರ್ಜಿಟಿಕ್ ಸ್ಟಾರ್​ 2 ತಿಂಗಳಿನಿಂದ ಚಿತ್ರೀಕರಣದಿಂದ ದೂರವೇ ಉಳಿದಿದ್ರು. ಬಿಕಾಸ್​ ಬಲಕೈ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಯಶಸ್ವಿ ಶಾಸ್ತ್ರ ಚಿಕಿತ್ಸೆ ಬಳಿಕ ರೆಸ್ಟ್​ ಮೂಡ್​ಗೆ ಜಾರಿದ್ರು. ಆದ್ರೀಗ ಕೊಂಚ ಗ್ಯಾಪ್ ಬಳಿಕ ಮತ್ತೆ ನಟನೆಗೆ ಮರಳಲಿದ್ದಾರೆ.


ಈ ವರ್ಷ ಹ್ಯಾಟ್ರಿಕ್ ಹೀರೋ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಹೆಚ್ಚು ಕಮ್ಮಿ 4 ಸಿನಿಮಾಗಳಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ. ಒಂದ್ಕಡೆ ದ್ರೋಣಾ, ಮತ್ತೊಂದ್ಕಡೆ ಆಯುಷ್ಮನ್​ಭವ, ಇದರ ಜೊತೆಗೆ ಭಜರಂಗಿ-2 ಸಿನಿಮಾಗಳು ಸದ್ಯ ಶಿವಣ್ಣನ ಭತ್ತಳಿಕೆಯಲ್ಲಿವೆ. ಇಂದಿನಿಂದ ಭಜರಂಗಿ-2 ಚಿತ್ರದ ಶೂಟಿಂಗ್​ ಆರಂಭವಾಗಲಿದ್ದು, ಶಿವಣ್ಣ ಶೂಟಿಂಗ್​ನಲ್ಲಿ ಭಾಗಿಯಾಲಿದ್ದಾರೆ. ಅಂದಹಾಗೇ ಭಜರಂಗಿ-2 ಗೆ ಎ.ಹರ್ಷ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

- Advertisement -

Latest Posts

Don't Miss