ನಿವೃತ್ತ ಶಿರಸ್ತೇದಾರನ ಕೊಲೆ ಪ್ರಕರಣ ಭೇಧಿಸಿದ ರಾಯಚೂರಿನ ಪಶ್ಚಿಮ ಠಾಣಾ ಪೋಲಿಸರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ . ಅಖಿಲೇಶ್ ಮತ್ತು ಗೌತಮ್ ಬಂಧಿತ ಆರೋಪಿಗಳಾಗಿದ್ದರೆ.
ನವೆಂಬರ್ 21 ರಂದು ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ಶಿರಸ್ತೇದಾರನ ಕೊಲೆಯಾಗಿತ್ತು ,ಹೊಸ ಮೊಬೈಲ್ ಕೊಳ್ಳಲು ಹಣ ಬೇಕಾಗಿತ್ತು ಈ ಕಾರಣಕ್ಕಾಗಿ ಮೊಮ್ಮೊಕ್ಕಳೆ ತಾತನ ಕೊಲೆಗೆ ಸ್ಕೆಚ್ ಹಾಕಿದ್ದರು . ಅಜ್ಜಿ ಮನೆಯಿಂದ ಹೊರ ಹೋದ ಮೇಲೆ ಇಬ್ಬರು ಮೊಮ್ಮಕ್ಕಳು ತಾತನ ಕೈಕಾಲು ಕಟ್ಟಿ ಕತ್ತನ್ನು ಸೀಳಿ ಹತ್ಯೆ ಮಾಡಿದ್ದರು , ಇದರಲ್ಲಿ ಎ-1 ಆರೋಪಿ ಆಖಿಲೇಶ್ ಎ -2 ಆರೋಪಿ ಗೌತಮ್ ಎಂದು ತಿಳಿದು ಬಂದಿದೆ .ನಂತರ ಮನೆಯಲ್ಲಿದ್ದ 25 ಸಾವಿರ ನಗದು
,1 ಚೈನ್ , 4 ಉಂಗುರ ,1 ಕಿವಿ ಒಳೆ ಯನ್ನು ಕದ್ದು ಕಂಟಪೂರ್ತಿ ಕುಡಿದು . ಎಸ್ಕೇಪ್ ಆಗಿದ್ದರು , ಎರಡನೇ ಆರೋಪಿ ಗರ್ಲ್ ಫ್ರೆಂಡ್ ಗೆ 18 ಸಾವಿರ ಮೊಬೈಲ್ ಕೊಡಿಸಿದ್ದ ಜೊತೆಗೆ ತನ್ನ ಪ್ಯಾರಾಮೆಡಿಕಲ್ ಫೀಸ್ ಸಹ ಕಟ್ಟಿದ್ದ ಎನ್ನಲಾಗಿದೆ . ಇನ್ನು ರಾಯಚೂರಿನ ಪಶ್ಚಿಮ ಠಾಣಾ ಪೋಲಿಸರು ಆಭರಣ ,ದೋಚಿದ ಹಣವನ್ನೆಲ್ಲ ವಶಪಡಿಸಿಕೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ .
ಪಂಪಾಪತಿ ಕೊಲೆ ಹಂತಕರು ಅರೆಸ್ಟ್
- Advertisement -
- Advertisement -