Hubli Political News: ಹುಬ್ಬಳ್ಳಿ: ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನೂತನ ಮೇಯರ್, ಉಪ ಮೇಯರ್ ಗೆ ಅಭಿನಂದಿಸಿದ‌್ದಾರೆ.
ಅಲ್ಲದೇ, ಹುಬ್ಬಳ್ಳಿ ಧಾರವಾಡ ಅವಳಿ ನಗರ ಅಭಿವೃದ್ಧಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರ ಪಾಲಿಕೆಗೆ ನೀಡಬೇಕಾದ ಅನುದಾನ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದು, ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ಕೈಬಿಟ್ಟ ಅನುದಾನ ನೀಡಬೇಕು. ಇಲ್ಲದಿದ್ದರೆ ಈಭಾಗದ ಜನರು ನಿಮ್ಮನ್ನು ಮನೆಗೆ ಕಳಿಸ್ತಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ, ಇಂದಿರಾ ಕ್ಯಾಂಟಿನ್ ಗು ದುಡ್ಡಿ ಕೊಟ್ಟಿಲ್ಲ. ರಾಜ್ಯದ ರೈಲ್ವೆ ಯೋಜನೆಗೆಳಿಗೆ ಸರಾಸರಿ ವರ್ಷಕ್ಕೆ 8500 ಕೋಟಿ ನೀಡಿದ್ದೇವೆ.ಬೆಂಗಳೂರ ಅಭಿವೃದ್ಧಿಗೆ, ಮೆಟ್ರೊ ಅಭಿವೃದ್ಧಿಗೆ ಅನುದಾನ ಕೇಂದ್ರ ನೀಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆರ್ಥಿಕ ಸ್ಥಿತಿಗತಿ ಸರಿಯಿಲ್ಲ, ಅದನ್ನು ಅವರದ್ದೇ ಶಾಸಕರು ಹೇಳುತ್ತಿದ್ದಾರೆ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.
ಇನ್ನು ಸಂತೋಷ್ ಲಾಡ್ ವಿರುದ್ಧ ವಾಗ್ದಾಳಿ ನಡೆಸಿರುವ ಜೋಶಿ, ಹುಬ್ಬಳ್ಳಿ ಧಾರವಾಡ ಬಗ್ಗೆ ಮಾತನಾಡಿ ಅಂದ್ರೆ, ಅವರ ಮೋದಿ ಟ್ರಂಪ್ ಬಗ್ಗೆ ಮಾತನಾಡ್ತಾರೆ. ರಸ್ತೆ ರಿಪೇರಿ ಮಾಡಿ ಅಂದ್ರೆ ಮೋದಿ- ಟ್ರಂಪ್ ಕೇಳಿ ಅಂತಾರೆ. ಭ್ರಷ್ಟಾಚಾರ ಕಾಂಗ್ರೆಸ್ ಡಿಎನ್ ಎ ದಲ್ಲಿಯೇ ಇದೆ. ಸರ್ಕಾರ ಗ್ಯಾರಂಟಿ ಹೆಸರಲ್ಲಿ ನಡೆಯುತ್ತಿದೆ. ಗ್ಯಾರಂಟಿ ದುಡ್ಡು ಕೂಡಾ ಸರಿಯಾಗಿ ನೀಡ್ತಿಲ್ಲಾ. ಕಾಕಾಸಾಹೇಬ್ ಪಾಟೀಲ್ ಹೆಸರು ತಗೊಂಡು ಹೇಳಿದ್ದರು. ಪಾಪ ಅವರೇ ತೀರಿಕೊಂಡರು, ವಿದ್ಯುತ್ ಫ್ರೀ ಅಂತ ಹೇಳ್ತಿದ್ದರು. ಆದ್ರೆ ಇದೀಗ ವಿದ್ಯುತ್ ಕಟ್ ಮಾಡ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ಕರ್ನಾಟಕದ ಬಗ್ಗೆಯೂ ಚರ್ಚೆಯಾಗಿದೆ, ರಾಷ್ಟ್ರೀಯ ಅಧ್ಯಕ್ಷ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ರಾಜ್ಯ ಅಧ್ಯಕ್ಷ ಆಯ್ಕೆ ನಡೆಯಲಿದೆ. ನಮ್ಮದು ಪ್ರಜಾಪ್ರಭುತ್ವದ ಪಕ್ಷವಾಗಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚರ್ಚೆ ಸದ್ಯ ಅಪ್ರಸ್ತುತ ಎಂದು ಜೋಶಿ ಹೇಳಿದ್ದಾರೆ.