ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಉಂಟಾಗಿರೋ ಅಲ್ಲೋಲ ಕಲ್ಲೋಲದಿಂದಾಗಿ ಕಂಗೆಟ್ಟಿರುವ ದೋಸ್ತಿಗಳು ಇದೀಗ ಮತ್ತೊಂದು ಪ್ಲ್ಯಾನ್ ಮಾಡಿದ್ದಾರೆ. ಶಾಸಕರು ಹಾಗೂ ಸಚಿವರಿಗೆ ಉಪಹಾರ ಕೂಟ ಏರ್ಪಡಿಸಿರೋ ಕೈ ನಾಯಕರು ಭುಗಿಲೆದ್ದಿರೋ ಭಿನ್ನಮತಕ್ಕೆ ಫುಲ್ ಸ್ಟಾಪ್ ಹಾಕೋದಕ್ಕೆ ಶತಪ್ರಯತ್ನ ಮಾಡ್ತಿದ್ದಾರೆ.
ಹಾಲಿ ಸಚಿವರ ತಲೆದಂಡ ಮಾಡಿ ಅತೃಪ್ತ ಶಾಸಕರಿಗೆ ಮಂತ್ರಿಗಿರಿ ನೀಡೋ ಮೂಲಕ ಬಂಡಾಯ ಶಮನ ಮಾಡುವ ಹಾದಿಹಿಡಿದಿದ್ದಾರೆ ದೋಸ್ತಿಗಳು. ಹೀಗಾಗಿ ಇಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ನಿವಾಸದಲ್ಲಿ ಇಂದು ಶಾಸಕರು ಮತ್ತು ಸಚಿವರುಗಳಿಗೆ ಉಪಹಾರ ಕೂಟ ಏರ್ಪಡಿಸಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯಲಿರೋ ಉಪಹಾರ ಕೂಟದಲ್ಲಿ ಸರ್ಕಾರದ ಅಸ್ಥಿತ್ವ ಕುರಿತಾದ ಚರ್ಚೆ ನಡೆಯಲಿದ್ದು, ಸ್ಥಾನ ಕಳೆದುಕೊಳ್ಳಲಿರೋ ಸಚಿವರ ಪಟ್ಟಿಯ ಬಗ್ಗೆಯೂ ಮಾತುಕತೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಸೇರಿದಂತೆ ಮತ್ತಿತರ ನಾಯಕರು ಭಾಗಿಯಾಗಲಿದ್ದಾರೆ.
ಈ ಮೂಲಕ ಹೇಗಾದ್ರೂ ಮಾಡಿ ರಾಜೀನಾಮೆ ನೀಡಿರೋ ಶಾಸಕರನ್ನ ಮತ್ತೆ ಕರೆತರುವ ಸಲುವಾಗಿ ತಲೆಕೆಡಿಸಿಕೊಂಡಿರೋ ನಾಯಕರು ಈ ತಂತ್ರ ಅನುಸರಿಸಲು ಸಿದ್ಧರಿದ್ದಾರೆ. ಆದ್ರೆ ಈಗಾಗಲೇ ನಾನಾ ಕಾರಣಗಳನ್ನು ನೀಡಿ ದೋಸ್ತಿಗಳಿಂದ ವಿಮುಖರಾಗಿರೋ ಶಾಸಕರು ಈ ತಂತ್ರಕ್ಕೆ ಮಣಿಯುತ್ತಾರಾ. ಅಥವಾ ತಲೆದಂಡದಿಂದಾಗಿ ದೋಸ್ತಿಯಲ್ಲಿ ಇನ್ನಷ್ಟು ಕಗ್ಗಂಟು ಎಗುರಾಗುತ್ತಾ ಅನ್ನೋದು ಸದ್ಯಕ್ಕೆ ಮೂಡಿರುವ ಮಿಲಿಯನ್ ಡಾಲರ್ ಪ್ರಶ್ನೆ.
ಜೋಡೆತ್ತಿನ ಸರ್ಕಾರ ಉಳಿಯುತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ