Movie News: ನಟ ದರ್ಶನ್ ಮನೆಯ ನಾಯಿ, ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಗೆ ಕಚ್ಚಿದ ಕೇಸ್‌ಗೆ ಸಂಬಂಧಿಸಿದಂತೆ, ದರ್ಶನ್ ಇಂದು ಆರ್ ಆರ್ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಇನ್ಸ್‌ಪೆಕ್ಟರ್ ಶಿವಕುಮಾರ್ ಅವರು ದರ್ಶನ್‌ಗೆ 15 ನಿಮಿಷ ವಿಚಾರಣೆ ನಡೆಸಿದ್ದಾರೆ.
ಅಕ್ಟೋಬರ್ 28ಕ್ಕೆ ಖಾಸಗಿ ಆಸ್ಪತ್ರೆಯಲ್ಲಿದ್ದ ಕಾರ್ಯಕ್ರಮಕ್ಕೆ ಈ ದೂರುದಾರೆ ಅಮಿತಾ ಜಿಂದಾಲ್ ತೆರಳಿದ್ದು, ದರ್ಶನ್ ಮನೆಯ ಬಳಿ ಖಾಲಿ ಸ್ಥಳವಿದ್ದ ಜಾಗದಲ್ಲಿ ತನ್ನ ಕಾರು ಪಾರ್ಕ್ ಮಾಡಿದ್ದಾರೆ. ಅಲ್ಲೇ 3 ನಾಯಿಗಳಿದ್ದು, ಅದನ್ನು ದರ್ಶನ್ ಮನೆಯ ಕೆಲಸದವನು ನೋಡಿಕೊಳ್ಳುತ್ತಿದ್ದನು. ಆಗ ಆ ಮಹಿಳೆ, ತಾನು ಕಾರ್ ತೆಗೆಯಬೇಕು, ಆ ನಾಯಿಗಳನ್ನು ದೂರವಿರಿಸಿ ಎಂದಿದ್ದಾರೆ. ಅದಕ್ಕೆ ಕೆಲಸದವನು ವಿರೋಧಿಸಿ, ಜಗಳ ಮಾಡಿದ್ದಾನೆ ಎಂದು ಅಮಿತಾ ಆರೋಪಿಸಿದ್ದಾರೆ.
ಈ ವೇಳೆ ಕಾರ್ ತೆಗೆಯಲು ಬಂದಿದ್ದ ಅಮಿತಾಗೆ ನಾಯಿ ಕಚ್ಚಿದ್ದು, ಈ ಕಾರಣಕ್ಕೆ ದರ್ಶನ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೂಡ ಕಳಿಸಲಾಗಿತ್ತು. ಆದರೆ ದರ್ಶನ್ ಎರಡು ಬಾರಿ ವಿಚಾರಣೆಗೆ ಗೈರಾಗಿದ್ದರು. ಈ ಕಾರಣಕ್ಕಾಗಿ, ಎರಡನೇಯ ಬಾರಿ ದರ್ಶನ್‌ಗೆ ನೊಟೀಸ್ ನೀಡಲಾಗಿದ್ದು, ಇಂದು ಆರ್.ಆರ್.ನಗರ ಪೊಲೀಸ್ ಠಾಣೆಗೆ ಇಂದು ನಟ ದರ್ಶನ್ ವಿಚಾರಣೆಗೆ ಹಾಜರಾಗಿದ್ದರು.
15 ನಿಮಿಷಗಳ ಕಾಲ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್, ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ಘಟನೆ ನಡೆದಾಗ ನಾನು ಮನೆಯಲ್ಲಿ ಇರಲಿಲ್ಲ. ಗುಜರಾತ್‌ಗೆ ಶೂಟಿಂಗ್‌ಗೆ ತೆರಳಿದ್ದೆ. ಮನೆಯಲ್ಲಿ ಕೆಲಸ ಮಾಡುವ ಹುಡುಗರಿಗೆ ಸರಿಯಾಗಿ ನೋಡಿಕೊಳ್ಳಲು ಹೇಳಿದ್ದೆ. ಏಕೆಂದರೆ, ಅಕ್ಕಪಕ್ಕದ ಮನೆಯವರಿಗೆ, ರಸ್ತೆಯಲ್ಲಿ ಓಡಾಡುವವರಿಗೆ, ಮನೆಯ ಬಳಿ ಬರುವ ಅಭಿಮಾನಿಗಳಿಗೆ ತೊಂದರೆಯಾಗಬಾರದು ಎಂದು ಹೇಳಿದ್ದೆ.
ನಮ್ಮ ಕೆಲಸದವರು ಎಚ್ಚರ ವಹಿಸಬೇಕಿತ್ತು. ಅಮಿತಾ ಅವರಿಗೆ ಪೆಟ್ಟಾದಾಗ, ಆಸ್ಪತ್ರೆ ಖರ್ಚು ಭರಿಸಲು ಕೂಡ ಹೇಳಿದ್ದೆ. ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸುತ್ತೇನೆ ಎಂದು ನಟ ದರ್ಶನ್ ಹೇಳಿದ್ದಾರೆ.
”ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ’ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ’
ಗಾಜಾದಲ್ಲಿರುವ ಹಮಾಸ್ ಉಗ್ರರ ಸಂಸತ್ತ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್ ಸೇನೆ
ಪ್ರಧಾನಿ ಮೋದಿಯವರೇ, ನಿಮಗೆ ನಾಚಿಕೆ ಆಗತ್ತೋ ಇಲ್ಲವೋ?: ಸಿಎಂ ಸಿದ್ದರಾಮಯ್ಯ