Sunday, November 16, 2025

Latest Posts

ಮನೆಯಲ್ಲಿ 7 ಕುದುರೆಗಳ ಫೋಟೋ : ಇದರ ಹಿಂದಿನ ಉದ್ದೇಶವೇನು ?

- Advertisement -

ಹಿಂದಿನಿಂದಲೂ ಸಾಕಷ್ಟು ಮನೆಗಳಲ್ಲಿ ಏಳು ಓಡುವ ಕುದುರೆ ಇರುವ ಫೋಟೋ (Photo)ಇರೋದನ್ನ ನಾವೆಲ್ರೂ ನೋಡಿದ್ದೀವಿ, ಆದ್ರೆ ಅದು ಯಾಕೆ ಅಂತ ನೀವ್ಯಾವತ್ತಾದ್ರು ಯೋಚ್ನೆ ಮಾಡಿದ್ದೀರಾ ? ಇಲ್ಲ ಅಂದ್ರೆ ಇವತ್ತು ತಿಳ್ಕೊಳೋಣ ಬನ್ನಿ,ಮನೆಯಲ್ಲಿ ಓಡುತ್ತಿರುವ ಏಳು ಕುದುರೆಗಳ(Horse)ಫೋಟೋ ಇಡುವುದು ವಾಸ್ತು ಪ್ರಕಾರ ಅತ್ಯಂತ ಶುಭಕರ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಈ ಚಿತ್ರ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕುಟುಂಬದಲ್ಲಿ ನೆಮ್ಮದಿ, ಮಕ್ಕಳಲ್ಲಿ ವಿದ್ಯಾಭ್ಯಾಸದ ಆಸಕ್ತಿ, ಹಾಗೂ ಆರ್ಥಿಕ ಸಬಲತೆ ಉಂಟಾಗುತ್ತದೆ. ವಿಶೇಷ ಪೂಜೆ ಅಥವಾ ಹೂವಿನ ಅಲಂಕಾರ ಅಗತ್ಯವಿಲ್ಲ — ಕೇವಲ ದರ್ಶನದಿಂದಲೇ ಶುಭ ಫಲ ಲಭಿಸುತ್ತದೆ ಎಂದು ಶಾಸ್ತ್ರಜ್ಞರು ತಿಳಿಸಿದ್ದಾರೆ.

ಏಳು ಕುದುರೆಗಳು ಸೂರ್ಯನ ರಥವನ್ನು ಎಳೆಯುವ ಸಂಕೇತವಾಗಿವೆ. ಅವು ಶ್ರಮ, ವೇಗ ಮತ್ತು ಯಶಸ್ಸಿನ ಪ್ರತೀಕ. ಈ ಚಿತ್ರವನ್ನು ದಿನನಿತ್ಯ ನೋಡುವುದರಿಂದ ಮನಸ್ಸಿಗೆ ಚೈತನ್ಯ, ಶಕ್ತಿ ಮತ್ತು ಪ್ರೇರಣೆ ದೊರೆಯುತ್ತದೆ. ಮನೆಯಲ್ಲಿ ಕಲಹ, ಅಶಾಂತಿ, ಆಸಕ್ತಿಯ ಕೊರತೆ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ.

ವಾಸ್ತು ಪ್ರಕಾರ, ಈ ಚಿತ್ರವನ್ನು ಮನೆಯ ದಕ್ಷಿಣದ ಗೋಡೆಗೆ ಇಡುವುದು ಅತ್ಯಂತ ಶುಭಕರ. ಹಾಲ್, ಬೆಡ್‌ರೂಮ್ ಅಥವಾ ಕಚೇರಿಗಳಲ್ಲಿಯೂ ದಕ್ಷಿಣ ದಿಕ್ಕು ಆಯ್ಕೆ ಮಾಡಬಹುದು. ಆದರೆ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಬೇಕು. ಬೆಳ್ಳಿ ಅಥವಾ ಬಂಗಾರದ ಫ್ರೇಮ್ ಅಗತ್ಯವಿಲ್ಲ — ಸರಳ ಛಾಯಾಚಿತ್ರವೂ ಸಾಕು.

ಏಳು ಎಂಬ ಸಂಖ್ಯೆಯು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ. ಸಪ್ತ ಋಷಿಗಳು, ಸಪ್ತ ನದಿಗಳು, ಸಪ್ತ ಬಣ್ಣಗಳು — ಎಲ್ಲೆಡೆ ಏಳರ ಮಹತ್ವವಿದೆ. ಇದೇ ರೀತಿಯಾಗಿ ಏಳು ಕುದುರೆಗಳ ಚಿತ್ರ ಮನೆಯಲ್ಲಿ ಧೈರ್ಯ, ಕೀರ್ತಿ, ಹಾಗೂ ಆರ್ಥಿಕ ಪ್ರಗತಿಯನ್ನು ತರುತ್ತದೆ. ಮಹಿಳೆಯರಲ್ಲಿ ಪ್ರಶಾಂತತೆ, ಮಕ್ಕಳಲ್ಲಿ ಆಸಕ್ತಿ ಮತ್ತು ಕುಟುಂಬದಲ್ಲಿ ಸೌಹಾರ್ದತೆಯನ್ನು ನಿರ್ಮಿಸುತ್ತದೆ ಎಂದು ಶಾಸ್ತ್ರಜ್ಞರು ಹೇಳಿದ್ದಾರೆ.

ವರದಿ : ಗಾಯತ್ರಿ ಗುಬ್ಬಿ 

- Advertisement -

Latest Posts

Don't Miss