Chanakya Neeti: ಹೊಗಳುವಿಕೆ ಅಂದ್ರೆ ಯಾರಗೆ ತಾನೇ ಪ್ರಿಯವಲ್ಲ. ಎಲ್ಲರೂ ಹೊಗಳಿಕೆಯನ್ನು ಪ್ರೀತಿಸುವವರೇ. ಹೊಗಳಿಸಿಕ“ಂಡು ಹಿಗ್ಗುವವರೇ. ಆದರೆ ಅಪ್ಪಿ ತಪ್ಪಿ ನೀವೇನಾದರೂ ಪುರುಷನಾಗಿದ್ದು, ಅದರಲ್ಲೂ ಪತಿಯಾಗಿದ್ದು, ನಿಮ್ಮ ಪತ್ನಿಯ ಎದುರು ಇವರನ್ನೇನಾದರೂ ಹೊಗಳಿದಿರೋ, ನಿಮ್ಮ ಕಥೆ ಮುಗೀತು. ನಿಮ್ಮ ನೆಮ್ಮದಿಯೂ ದಿ ಎಂಡ್ ಆದ ಹಾಗೆ. ಹಾಗಾದ್ರೆ ಪತ್ನಿಯ ಎದುರು ಯಾರನ್ನು ಪತಿ ಹೊಗಳಬಾರದು ಅಂತಾ ತಿಳಿಯೋಣ ಬನ್ನಿ..
ಪತ್ನಿಗೆ ಕಂಡರಾಗದ ಜನ: ಮನುಷ್ಯ ಅಂದ ಮೇಲೆ ದ್ವೇಷ, ಅಸೂಯೆ ಎಲ್ಲವೂ ಇರುತ್ತದೆ. ಅದೇ ರೀತಿ ನಿಮ್ಮ ಪತ್ನಿಗೆ ಕಂಡರಾಗದ ಕೆಲವರು ಇರುತ್ತಾರೆ. ಆದರೆ ನಿಮಗೆ ಅವರು ಪ್ರೀತಿಪಾತ್ರರೇ ಆಗಿರಬಹುದು. ಆ ಪ್ರೀತಿ ಮನಸ್ಸಿನಲ್ಲಿರಲಿ, ಆದರೆ ಆಕೆಯ ಮುಂದಲ್ಲ. ಆಕೆಯ ಮುಂದೆ ಅಂಥವರನ್ನು ನೀವು ಯಾವುದೇ ಕಾರಣಕ್ಕೂ ಹೊಗಳಬೇಡಿ.
ಬೇರೆ ಸ್ತ್ರೀ: ಯಾವುದೇ ಹೆಣ್ಣಿಗೆ ಆಗಲಿ, ತನ್ನ ಪತಿ ತನ್ನನ್ನು ಮಾತ್ರ ಪ್ರೀತಿಸಬೇಕು, ತನ್ನನ್ನು ಮಾತ್ರ ಕಾಳಜಿ ಮಾಡಬೇಕು, ತನ್ನನ್ನು ಮಾತ್ರ ಹೊಗಳಬೇಕು ಅಂತಾ ಮನಸ್ಸಿರುತ್ತದೆ. ಅಪ್ಪಿತಪ್ಪಿ ನೀವು ಆಕೆಯ ಎದುರು ಬೇರೆ ಹೆಣ್ಣು ಮಕ್ಕಳನ್ನು ಹೊಗಳಿದರೆ, ಆಕೆಯ ರೌದ್ರಾವತಾರಕ್ಕೆ ನೀವು ಗುರಿಯಾಗಬೇಕಾಗುತ್ತದೆ.
ನಿಮಗೆ ಕೆಲಸ ನೀಡಿದವರು: ನಿಮಗೆ ಕೆಲಸ ನೀಡಿರುವ ನಿಮ್ಮ ಬಾಸ್ ಉತ್ತಮರೇ ಆಗಿರಬಹುದು. ಆದರೆ ನೀವು ನಿಮ್ಮ ಮಡಿಯ ಜತೆ ಸಮಯ ಕಳೆಯುವಾಗ, ನೀವು ಆಫೀಸು ವಿಷಯ ಮಾತನಾಡಿ, ಬಾಸ್‌ನನ್ನು ಹೊಗಳಿದರೆ, ಆಕೆಗೆ ಬೇಸರವಾಗುತ್ತದೆ. ಎಲ್ಲಿ ಹೋದರೂ, ಬಾಸ್ , ಆಫೀಸ್‌ದೇ ಧ್ಯಾನ ಎಂದು ಬೈಯ್ಯಬಹುದು.
ಪ್ರತಿಸ್ಪರ್ಧಿ: ನೀವು ಪತಿಯಾಗಿದ್ದು ಪತ್ನಿಯ ಪ್ರತಿಸ್ಪರ್ಧಿಯನ್ನು ಎಂದಿಗೂ ಹೊಗಳಬೇಡಿ. ಆ ಪ್ರತಿಸ್ಪರ್ಧಿ ಆಕೆಯ ಆಫೀಸಿನಲ್ಲೇ ಇರಬಹುದು. ಅಥವಾ ಸಂಬಂಧಿಕರಲ್ಲೇ ಇರಬಹುದು. ಅಥವಾ ಅಕ್ಕ ಪಕ್ಕದ ಮನೆಯಲ್ಲೇ ಇರಬಹುದು. ಅದು ಸ್ತ್ರೀ ಆಗಿರಬಹುದು, ಪುರುಷನೇ ಆಗಿರಬಹುದು. ಅಂಥವರನ್ನು ನೀವು ಹೊಗಳಿದರೆ, ಆಕೆಗೆ ಬೇಸರವಾಗುತ್ತದೆ.

