ಹೊಸದಿಲ್ಲಿ: ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ತೆರೆಳು ಅಥ್ಲೀಟ್‍ಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂತಸದೊಂದಿಗೆ ವರ್ಚುವಲ್ ಸಂವಾದ ನಡೆಸಿದರು.
ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಯಾವುದೇ ನಿರೀಕ್ಷೆಗಳಿಲ್ಲದೇ ಈ ಮನೋಭಾವದೊಂದಿಗೆ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಎಂದು ಕಿವಿಮಾತು ಹೇಳಿದರು.
ಜು. 28ರಿಂದ ಆ. 8ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 215 ಭಾರತೀಯ ಅಥ್ಲೀಟ್‍ಗಳು 19 ಕ್ರೀಡೆಯ 141 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
ನಿಮ್ಮ ವಿಭಾಗಗಳಲ್ಲಿ ಸವಾಲುಗಳೇನು ಎಂದು ಅಥ್ಲೀಟ್‍ಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸ್ಟೀಪಲ್ ಚೇಸ್ ಅಥ್ಲೀಟ್ ಅವಿನಾಶ್ ಸೇಬ್ಲ್, ನಾನು 2012ರಲ್ಲಿ ಭಾರತೀಯ ಸೇನೆ ಸೇರಿದೆ.ನಾಲ್ಕು ವರ್ಷಗಳ ಕಾಲ ಸಾಧಾರಣ ವಾಗಿ ಕೆಲಸ ಮಾಡಿದೆ. ನಂತರ ನಾನು ಅಥ್ಲೆಟಿಕ್ಸ್ ತೆಗೆದುಕೊಂಡೆ. ಕೂಟಗಳಿರುವ ಸಮಯದಲ್ಲಿ ಸೇನೆಯ ಕಠಿಣ ತರಬೇತಿ ಮತ್ತು ಸಿಯಾಚಿನ್ ಹಿಮಾನದಿಯ ಪೋಸ್ಟಿಂಗ್ ಸಾಕಷ್ಟು ಸಹಾಯ ಮಾಡಿದೆ ಎಂದರು.
ನನ್ನ ವಿಭಾಗದಲ್ಲಿ ಸಾಕಷ್ಟು ಅಡೆತಡೆಗಳಿವೆ. ಸೇನೆಯ ತರಬೇತಿಯಂತೆ ಹರ್ಡಲ್ಸ್‍ಗಳನ್ನು ದಾಟಿ ಓಡಬೇಕು ಎಂದರು. ತೂಕ ಕಡಿಮೆ ಮಾಡಿಕೊಂಡ ಕುರಿತು ಪ್ರಧಾನಿ ಮೋದಿ ಪ್ರಶ್ನಿಸಿದರು.
ನಾನು ಸೇನೆಯಲ್ಲಿದ್ದಾಗ ತುಂಬ ತೂಕ ಹೊಂದಿದ್ದೆ. ನನ್ನ ಸೇನೆಯ ತಂಡ ಕ್ರೀಡೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಿತು. ನಾನು 74 ಕೆ.ಜಿ.ಇದ್ದೆ ವರ ಸಹಾಯದಿಂದ ಹೆಚ್ಚುವರಿ ತರಬೇತಿ ಪಡೆದು 53 ಕೆ.ಜಿ ತೂಕ ಇಳಿಸಿಕೊಂಡೆ ಎಂದು ಅವಿನಾಶ್ ಉತ್ತರಿಸಿದರು.
ಅಂಡಮಾನ್ ನಿಕೋಬಾರ್‍ನ ಸೈಕ್ಲೀಸ್ಟ್ ಟ್ರ್ಯಾಕ್ ಸೈಕ್ಲಿಂಗ್‍ನಲ್ಲಿ ಸಮಯ ಕಳೆಯುತತೇನೆ ಎಂದು ಉತ್ತರಿಸಿದರು. ಕ್ರೀಡಾಕೂಟದ ನಂತರ ಮತ್ತೆ ಭೇಟಿ ಮಾಡಿ ಗೆಲುವನ್ನು ಸಂಭ್ರಮಿಸೋಣ ಎಂದು ಅಥ್ಲೀಟ್‍ಗಳಿಗೆ ಹೇಳಿದರು. ಯುವ ಬ್ಯಾಡ್ಮಿಂಟನ್ ಆಟಗಾರ್ತಿ ಟ್ರೆಸ್ಸಾಗೆ, ಪ್ರಧಾನಿ ಮೋದಿ, ಒಲಿಂಪಿಕ್ಸ್ ನಂತರ ಪಿ.ವಿ.ಸಿಂಧು ಐಸ್ ಕ್ರೀಮ್ ತಿಂದಿದ್ದರು ನಿಮ್ಮ ಯೋಜನೆ ಏನು ಎಂದು ಹಾಸ್ಯವಾಗಿ ಪ್ರಶ್ನಿಸಿದರು. ಮೊದಲ ಬಾರಿ ಸ್ರ್ಪಸುತ್ತಿರುವುದರಿಂದ ಒಳ್ಳೆಯ ಪ್ರದರ್ಶನ ನೀಡುವುದಾಗಿ ಭರವಸೆ ನೀಡಿದರು.
ಸಂವಾದದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ತರಬೇತುದಾರರು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಭಾರತ ಒಲಿಂಪಿಕ್ ಹಂಗಾಮಿ ಅಧ್ಯಕ್ಷ ಅನಿಲ್ ಖನ್ನ , ಕಾರ್ಯದರ್ಶಿ ರಾಜೀವ್ ಮೆಹ್ತಾ. ಪಿ.ವಿ.ಸಿಂಧು, ಮೀರಾಬಾಯಿ ಚಾನು, ಹಾಕಿ ನಾಯಕಿ ಸವೀತಾ ಪೂನೀಯಾ ಸಾಕ್ಷಿ ಮಲ್ಲಿಕ್ , ಬಾಕ್ಸರ್ ಶಿವಥಾಪಾ, ಸುಮೀತ್ ಶ್ರೀಕಾಂತ್, ಲಕ್ಷ್ಯ ಸೇನ್ ಉಪಸ್ಥಿತರಿದ್ದರು.