Sunday, June 1, 2025

Latest Posts

ಕ್ರೀಡಾಳುಗಳಿಗೆ ಪ್ರಧಾನಿ ಮೋದಿ ಸ್ಫೂರ್ತಿ:ಪಾಕ್ ಪತ್ರಕರ್ತ

- Advertisement -

ಹೊಸದಿಲ್ಲಿ :ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತೀಯ ಸ್ರ್ಪಗಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸ್ಫೂರ್ತಿಯಾಗಿ ನಿಂತಿದ್ದು, ಪಾಕಿಸ್ಥಾನದಲ್ಲಿ ನಾಯಕರಿಗೆ ಪದಕ ಗೆದ್ದವರ ಹೆಸರಾದರೂ ಗೊತ್ತಿದೆಯೇ ಎಂಬುದಾಗಿ ಪಾಕ್ ಪತ್ರಕರ್ತನೊಬ್ಬ ಆ ದೇಶದ ನಾಯಕರನ್ನು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.

ಬರ್ಮಿಂಗ್‍ಹಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಕುಸ್ತಿಯಲ್ಲಿ ಕಂಚು ಗೆದ್ದಿದ್ದ ಪೂಜಾ ಗೆಹ್ಲೋಟ್ ಅವರು , ತಾನು ಚಿನ್ನದ ಪದಕ ಗೆಲ್ಲದೆ ಭಾರತೀಯರಿಗೆ ನಿರಾಶೆ ಮಾಡಿದೆ.ಅಲ್ಲಿ ನಾನು ಭಾರತದ ರಾಷ್ಟ್ರಗೀತೆಯನ್ನು ಮೊಳಗಿಸಬೇಕೆಂದಿದ್ದೆ . ಆದರೆ ಆಗಲಿಲ್ಲ.ಇದಕ್ಕಾಗಿ ನಾನು ದೇಶದ ಜನತೆಯ ಕ್ಷಮೆ ಕೇಳುವೆ ಎಂಬುದಾಗಿ ತಿಳಿಸಿದ್ದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿಯವರು , ನೀವು ಪಡೆದ ಪದಕ ಸಂಭ್ರರಮಕ್ಕಾಗಿಯೇ ವಿನಾ ಕ್ಷಮೆಗಾಗಿ ಅಲ್ಲ. ನಿಮ್ಮ ಪಯಣ ನಮಗೆ ಸ್ಫೂರ್ತಿ. ನಿಮ್ಮ ಯಶಸ್ಸು ನಮಗೆ ಸಂತೋಷ ತಂದಿದೆ.ನೀವು ಜೀವನದಲ್ಲಿ ಇನ್ನಷ್ಟು ಮಹತ್ತರವಾದುದನ್ನು ಸಾಧಿಸಬೇಕು. ನೀವು ಯಾವಾಗಲೂ ಹೀಗೆ ಹೊಳೆಯುತ್ತಿರಿ ಎಂಬುದಾಗಿ ಆಕೆಗೆ ಸಾಂತ್ವನ ಹೇಳುವ ಜೊತೆಗೆ  ಸ್ಫೂರ್ತಿ ತುಂಬಿದ್ದರು.

ಭಾರತದ ಪ್ರಧಾನಿ ಮೋದಿಯವರ ಈ ಸ್ಫೂರ್ತಿಯುತ ನಾಯಕತ್ವಕ್ಕಾಗಿ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಅಚ್ಚರಿ ಎಂದರೆ ಪಾಕಿಸ್ಥಾನದ ಜನತೆ ಕೂಡಾ ಮೋದಿಯವರು ದೇಶದ ಕ್ರೀಡಾ ಪ್ರತಿಕ್ರಿಯೆಗಳಿಗೆ ಪ್ರೇರಣೆ ನೀಡುವ ರೀತಿಯನ್ನು ಶ್ಲಾಘಿಸಿದ್ದಾರೆ. ಆದರೆ ಪಾಕಿಸ್ಥಾನದ ನಾಯಕರ ವಿರುದ್ಧ ಅಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಾಕ್ ನಾಯಕರಿಗೆ ದೇಶದ ಪದಕ ವಿಜೇತರ ಹೆಸರಾದರೂ ಗೊತ್ತೇ? ಎಂದು ಅವರು ಕಿಡಿಕಾರಿದ್ದಾರೆ.

ಪಾಕ್ ನಾಯಕರಿಗೆ ವಿಜೇತರ ಹೆಸರಾದರೂ ಗೊತ್ತೇ?

ಮೋದಿಯವರ ಈ ಸ್ಫೂರ್ತಿಯುತ ನಡೆಯನ್ನು ಮೆಚ್ಚಿಕೊಂಡಿರುವ ಪಾಕಿಸ್ಥಾನದ ಪತ್ರಕರ್ತ ಶಿರಾಜ್ ಹಸ್ಸನ್ ಅವರು, ಮೋದಿಯವರ ಕಾರ್ಯಶೈಲಿಯ ಜೊತೆಗೆ ಪಾಕಿಸ್ತಾನಿ ನಾಯಕರ ನಡವಳಿಕೆಯನ್ನು ಹೋಲಿಸಿ ಪಾಕ್ ನಾಯಕರನ್ನು ವ್ಯಂಗ್ಯವಾಡಿದ್ದಾರೆ.ಭಾರತ ಹೇಗೆ ತನ್ನ ಕ್ರೀಡಾಳುಗಳನ್ನು ಎತ್ತಿ ಹಿಡಿದಿದೆ.

ಪೂಜಾ ಗೆಹ್ಲೋಟ್ ಕಂಚು ಗೆದ್ದು ಚಿನ್ನ ಗೆಲ್ಲಲಾಗದುದಕ್ಕೆ ದುಃಖಿಸಿದರೆ ಭಾರತದ ಪ್ರಧಾನಿ ಮೋದಿಯವರು ಆಕೆಗೆ  ಧೈರ್ಯ ತುಂಬುತ್ತಾರೆ.ಆದರೆ ಎಂದಾದರೂ ಪಾಕ್ ಪ್ರಧಾನಿ, ರಾಷ್ಟ್ರಪತಿ ಅಥವಾ ಇತರ ನಾಯಕರಿಂದ  ಇಂತಹ ನಡವಳಿಕೆ ವ್ಯಕ್ತವಾದುದು ಇದೆಯೇ ?ಅವರಿಗೆ ಕನಿಷ್ಠ ಪದಕ ಗೆದ್ದ ಪಾಕ್ ಕ್ರೀಡಾಳುಗಳ ಹೆಸರಾದರೂ ಗೊತ್ತೇ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಮೋದಿ ಈಸ್ ಬೆಸ್ಟ್ ಎಂದ ನೆಟ್ಟಿಗರು

ಇನ್ನೊಬ್ಬ ನೆಟ್ಟಿಗ , ಪ್ರಧಾನಿ “ಮೋದಿ ಈಸ್ ದ ಬೆಸ್ಟ್ ”ಎಂದು ಶ್ಲಾಘಿಸಿದರೆ, ಇಂತಹ ಸ್ಫೂರ್ತಿ ತುಂಬಿರುವ ಪ್ರಧಾನಿ ಮೋದಿಜಿ ಇತರೆಲ್ಲ ನಾಯಕರಿಗಿಂತ ಭಿನ್ನವಾಗಿರುವ ವಿಶಿಷ್ಟ ನಾಯಕ . ಈ ಹಿಂದೆಯೂ ಅನೇಕ ಪ್ರಧಾನಿಗಳು ಆಗಿಹೋಗಿದ್ದಾರೆ. ಆದರೆ ಮೋದಿಯವರ ರೀತಿ ಕ್ರೀಡಾಳುಗಳಿಗೆ ಸೂರ್ತಿ ತುಂಬಿದವರು ಮತ್ತೊಬ್ಬರಿಲ್ಲ ಎಂಬುದಾಗಿ ಮಹಿಳಾ ನೆಟ್ಟಿಗರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಗದೊಬ್ಬರು ರಾಜಕೀಯ ಏನೇ ಇರಲಿ, ಮೋದಿಯವರ ನಾಯಕತ್ವವನ್ನು ಮೆಚ್ಚಲೇ ಬೇಕು ಎಂದಿದ್ದಾರೆ.ಪ್ರಧಾನಿ ಮೋದಿಯವರು ಭಾರತೀಯ ಕ್ರೀಡಾಳುಗಳ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಿ ತಂದೆಯ ಸಮಾನವಾಗಿ ಅವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವುದು ಅನನ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

 

 

 

 

 

- Advertisement -

Latest Posts

Don't Miss