Saturday, July 27, 2024

Latest Posts

ಶ್ರೀ ಕೃಷ್ಣ ಜನ್ಮಾಷ್ಠಮಿಗೆ ಮಾಡಬಹುದು ಈ ಅವಲಕ್ಕಿ ಲಾಡು ಪ್ರಸಾದ..

- Advertisement -

ಶ್ರೀಕೃಷ್ಣನ ಸ್ನೇಹಿತ ಮತ್ತು ಪರಮ ಭಕ್ತ ಕುಚೇಲ, ಕೃಷ್ಣನಿಗಾಗಿ ಅವಲಕ್ಕಿಯನ್ನ ತಂದು ಕೊಟ್ಟ. ಮತ್ತು ಕೃಷ್ಣ ಅದನ್ನು ಇಷ್ಟಪಟ್ಟು ತಿಂದ. ಅಂದಿನಿಂದಲೇ, ಶ್ರೀಕೃಷ್ಣನಿಗೆ ಅವಲಕ್ಕಿ ಪ್ರಸಾದ ನೈವೇದ್ಯ ಮಾಡಿದರೆ, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಇಂದು ನಾವು ಅವಲಕ್ಕಿಯ ಲಾಡು ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಈ ಬಾರಿ ಕೃಷ್ಣ ಜನ್ಮಾಷ್ಠಮಿಗೆ ಈ ಲಾಡು ತಯಾರಿಸಿ, ನೈವೇದ್ಯಕ್ಕಿಡಿ.

ಮಂಗಳೂರು ಶೈಲಿಯ ಸಜ್ಜಿಗೆ ಬಜಿಲ್ ರೆಸಿಪಿ..

ಬೇಕಾಗುವ ಸಾಮಗ್ರಿ: 2 ಕಪ್ ಜರಡಿ ಮಾಡಿದ ದಪ್ಪ ಅವಲಕ್ಕಿ ಅಥವಾ ಗಟ್ಟಿ ಅವಲಕ್ಕಿ, 1 ಕಪ್ ಒಣ ಕೊಬ್ಬರಿ ತುರಿ, 5 ಸ್ಪೂನ್ ತುಪ್ಪ, ಅವಶ್ಯಕತೆ ಇದ್ದಷ್ಟು ಬೆಲ್ಲ, ಗೋಡಂಬಿ ಮತ್ತು ದ್ರಾಕ್ಷಿ, ಕೊಂಚ ಏಲಕ್ಕಿ ಪುಡಿ.

ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ..

ಮೊದಲು ಪ್ಯಾನ್ ಬಿಸಿ ಮಾಡಲು ಇಟ್ಟು, ಅದಕ್ಕೆ 4 ಸ್ಪೂನ್ ತುಪ್ಪ ಹಾಕಿ, ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್‌ಗೆ ಮತ್ತೊಂದು ಸ್ಪೂನ್ ತುಪ್ಪ ಹಾಕಿ, ಅವಲಕ್ಕಿ ಹುರಿದುಕೊಳ್ಳಿ. ಈಗ ಗ್ಯಾಸ್ ಆಫ್ ಮಾಡಿ. ಈಗ ಮಿಕ್ಸಿ ಜಾರ್‌ಗೆ ಹುರಿದ ಅವಲಕ್ಕಿ ಹಾಕಿ, ಪುಡಿ ಮಾಡಿಕೊಳ್ಳಿ.

ಈ ಕೃಷ್ಣ ಜನ್ಮಾಷ್ಠಮಿಗೆ ಮಾಡಿ ಸಿಹಿ ಅವಲಕ್ಕಿ ಪ್ರಸಾದ..

ಈಗ ಒಂದು ಪಾತ್ರೆಗೆ ಬೆಲ್ಲ ಮತ್ತು ನೀರು ಸೇರಿಸಿ ಬೆಲ್ಲದ ಪಾಕ ರೆಡಿ ಮಾಡಿಕೊಳ್ಳಿ. ಈ ಪಾಕಕ್ಕೆ ಏಲಕ್ಕಿ ಪುಡಿ ಸೇರಿಸಿ. ಈಗ ಒಣ ಕೊಬ್ಬರಿ ತುರಿ, ಪುಡಿ ಮಾಡಿಕೊಂಡ ಅವಲಕ್ಕಿ, ಹುರಿದುಕೊಂಡ ದ್ರಾಕ್ಷಿ, ಗೋಡಂಬಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದೆರಡು ನಿಮಿಷವಾದ್ರೂ ಇದನ್ನ ಬಾಡಿಸಿ, ಗ್ಯಾಸ್ ಆಫ್ ಮಾಡಿ, ತಣ್ಣಗಾಗಲು ಬಿಡಿ. ಇದೇ ಮಿಶ್ರಣದಿಂದ ಲಾಡು ತಯಾರಿಸಿದ್ರೆ, ನೈವೇದ್ಯಕ್ಕೆ ಬೇಕಾಗಿರುವ ಅವಲಕ್ಕಿ ಲಾಡು ಸಿದ್ಧ.

ಬದನೆ ಗೊಜ್ಜು ಹೀಗೆ ಮಾಡಿದ್ರೆ ಸಖತ್ ಟೇಸ್ಟಿಯಾಗಿರತ್ತೆ..

- Advertisement -

Latest Posts

Don't Miss