Wednesday, June 12, 2024

Latest Posts

ಪ್ರಯಾಣಿಕರ ಅನುಕೂಲಕ್ಕಾಗಿ ಪಾಯಿಂಟ್ ಟು ಪಾಯಿಂಟ್ ಬಸ್ ಸಂಚಾರ ಆರಂಭ

- Advertisement -

Hubli News: ಹುಬ್ಬಳ್ಳಿ: ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಿಗೆ ಪಾಯಿಂಟ್ ಟು ಪಾಯಿಂಟ್, ತಡೆ ರಹಿತ ಬಸ್‌ಗಳ ಸಂಚಾರ ಆರಂಭಿಸಲಾಗಿದೆ ಎಂದು ವಾ.ಕ.ರ.ಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತೊಂದರೆಮುಕ್ತ ಹಾಗೂ ಮತ್ತಷ್ಟು ಆರಾಮದಾಯಕವಾಗಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅದರ ಭಾಗವಾಗಿ ಹುಬ್ಬಳ್ಳಿಯಿಂದ ನೆರೆಯ ಜಿಲ್ಲಾ ಕೇಂದ್ರಗಳಾದ ಬೆಳಗಾವಿ, ಗದಗ ಹಾಗೂ ಹಾವೇರಿ ನಡುವೆ ಹಲವಾರು ವರ್ಷಗಳಿಂದ ತಡೆ ರಹಿತ ಬಸ್ ಗಳು ಸಂಚರಿಸುತ್ತಿವೆ. ಮಾರ್ಗ ಮಧ್ಯದ ಊರುಗಳ ಬಸ್ ನಿಲ್ದಾಣಗಳಿಗೆ ಹೋಗದೆ, ನೇರವಾಗಿ ಸಂಚರಿಸುವುದಿಂದ ತ್ವರಿತ ಪ್ರಯಾಣ, ಸಮಯದ ಉಳಿತಾಯದೊಂದಿಗೆ ಹೆಚ್ಚು ಅನುಕೂಲಕರವಾಗಿರುವುದರಿಂದ ಈ ಬಸ್ ಗಳು ಜನಪ್ರಿಯತೆ ಗಳಿಸಿವೆ.

ಪ್ರಯಾಣಿಕ ಸ್ನೇಹಿಯಾಗಿರುವುದರಿಂದ ಪಾಯಿಂಟ್ ಟು ಬಸ್ ಗಳ ವ್ಯವಸ್ಥೆಯನ್ನು ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಂತಹ ಪ್ರಮುಖ ಸ್ಥಳಗಳಿಗೆ ಒದಗಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿತ್ತು.ಅದಕ್ಕೆ ಪೂರಕವಾಗಿ ಹುಬ್ಬಳ್ಳಿ-ಕಲಘಟಗಿ, ಹುಬ್ಬಳ್ಳಿ-ಲಕ್ಷ್ಮೀಶ್ವರ, ಹುಬ್ಬಳ್ಳಿ-ಶಿರಹಟ್ಟಿ, ಹುಬ್ಬಳ್ಳಿ-ಶಿರ್ಸಿ, ನವಲಗುಂದ-ಧಾರವಾಡ, ನವಲಗುಂದ – ಗದಗ, ಕಲಘಟಗಿ-ಧಾರವಾಡ ಮತ್ತಿತರ ಸ್ಥಳಗಳ ನಡುವೆ ಪಾಯಿಂಟ್ ಟು ಪಾಯಿಂಟ್, ತಡೆರಹಿತ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ. ಈ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇತರೆ ಮಾರ್ಗಗಳಿಗೂ ಸಹ ವಿಸ್ತರಿಸುವಂತೆ ಬೇಡಿಕೆ ಬರುತ್ತಿದೆ. ಮಾರ್ಗವಾರು ಪ್ರಯಾಣಿಕರ ಸಂಖ್ಯೆಯ ಸಮೀಕ್ಷೆ ನಡೆಸಿ ಬಸ್ ಗಳನ್ನು ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಮನಗೌಡರ ಮಾಹಿತಿ ನೀಡಿದ್ದಾರೆ.

Anjali Case: ಅಂಜಲಿ ಪ್ರಕರಣದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿ ಅಮಾನತು

G.Parameshwar Press Meet: ಹೆಚ್ಡಿಕೆ ಫೋನ್ ಟ್ರ್ಯಾಪ್ ಆರೋಪಕ್ಕೆ ತಿರುಗೇಟು ನೀಡಿದ ಗೃಹಸಚಿವರು

ಹುಬ್ಬಳ್ಳಿಯ ಕೊ* ಕೇಸ್: ನೇಹಾ ಮತ್ತು ಅಂಜಲಿ ಮನೆಗೆ ಭೇಟಿ ನೀಡಿದ ಗೃಹಸಚಿವ ಜಿ.ಪರಮೇಶ್ವರ್

- Advertisement -

Latest Posts

Don't Miss