ಧಾರವಾಡ: ಈ ಅವಳಿ ಜಿಲ್ಲೆಗಳಾದ ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಪ್ರತಿದಿನ ಒಂದಿಲ್ಲೊಂದು ಘಟನೆಗಳ ನಡೆಯುತ್ತಿರುತ್ತವೆ. ಕೊಲೆ, ಅತ್ಯಾಚಾರ, ಬೆದರಿಕೆ, ದರೋಡೆಗಳು ನಡೆಯುತ್ತಿರುತ್ತವೆ ಅದರಂತೆ ನಿನ್ನೆ ಧಾರವಾಡದ ಎಲ್ ಐಸಿ ಕಛೇರಿ ಬಳಿ ಯುವಕರ ಮೇಲೆ ಚಾಕು ಇರಿದಿರುವ ಘಟನೆ ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಣ್ಣಿನಿಂದಲೇ ಜನನ ಹೆಣ್ಣಿನಿಂದಲೇ ಮರಣ ಎನ್ನುವ ಗಾದೆ ಯಾವ ಕಾಲಕ್ಕೂ ಸುಳ್ಳಾಗುವುದಿಲ್ಲ ಅನಿಸುತ್ತದೆ ಯಾಕೆಂದರೆ ನಿನ್ನೆ ನಗರದ ಎಲ್ ಐಸಿ ಕಛೇರಿ ಬಳಿ ನಡೆದುರುವ ಚಾಕು ಇರಿತ ಒಂದು ಹೆಣ್ಣಿನ ವಿಚಾರಕ್ಕೆ ಎಂದು ಹೇಳಲಾಗುತ್ತಿದೆ. ಯುವತಿಯ ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಜಗಳ ಆಸ್ಪತ್ರೆಯಲ್ಲಿ ದಾಖಲಿಸುವುದರಿಂದ ಕೊನೆಯಾಗಿದೆ.
ಕಿರಣ್, ಆಸಿಫ್ ಮತ್ತು ಶಾನವಾಜ್ ಎನ್ನುವ ಮೂವರು ಯುವಕರಿಗೆ ನಗರದ ಎಲ್ ಐ ಸಿ ಆಫೀಸ್ ಬಳಿ ನಡೆದಿದೆ. ಚಾಕು ಇರಿತದಿಂದ ಯುವಕರಿಗೆ ಗಂಭಿರ ಗಾಯಗಳಾಗಿದ್ದು ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರವಾಗಿ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಗೋಪಾಲಯ್ಯ ಕಿಕ್ ಬ್ಯಾಕ್ ಆರೋಪ
ಗೃಹಲಕ್ಷ್ಮೀ ಯೋಜನೆ ಉದ್ಘಾಟನೆಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ – ಸಿಎಂ ಸಿದ್ದರಾಮಯ್ಯ