ಎ.ಆರ್.ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಪೊಲೀಸರ ಎಂಟ್ರಿ, ಅರ್ಧಕ್ಕೆ ನಿಂತ ಕಾರ್ಯಕ್ರಮ..

ಪುಣೆ: ನಿನ್ನೆ ಪುಣೆಯಲ್ಲಿ ಸಂಗೀತ ನಿರ್ದೇಶಕ ಎ.ಆರ್. ರೇಹಮಾನ್ ರ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ಬಂದು, ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಎ.ಆರ್.ರೆಹಮಾನ್ ಸಂಗೀತ ಕಾರ್ಯಕ್ರಮ ಎಂದರೆ, ಬರೀ ದಕ್ಷಿಣ ಭಾರತದವರಿಗಷ್ಟೇ ಅಲ್ಲ. ಉತ್ತರ ಭಾರತದವರಿಗೂ ಕ್ರೇಜ್ ಹೆಚ್ಚಾಗಿರತ್ತೆ. ಅದೇ ರೀತಿ ಪುಣೆಯಲ್ಲಿ ಇವರ ಸಂಗೀತ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಅಭಿಮಾನಿಗಳು ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ, ಪುಣೆ ಪೊಲೀಸರು ಈ ಕಾರ್ಯಕ್ರಮಕ್ಕೆ ಬಂದು, ಸ್ಟೇಜ್ ಹತ್ತಿ, ಅಲ್ಲೇ ಹಾಡುತ್ತಿದ್ದ ರೆಹಮಾನ್ ಹಾಡನ್ನ ನಿಲ್ಲಿಸಿ, ಕಾರ್ಯಕ್ರಮವನ್ನ ನಿಲ್ಲಿಸುವುದಕ್ಕೆ ಹೇಳಿದ್ದಾರೆ.

ಇದಕ್ಕೆ ಕಾರಣವಿಷ್ಟೇ, ಅವರು ನಿಗದಿ ಪಡಿಸಿದ್ದ ಸಮಯ ಮೀರಿತ್ತು. ಆದರೂ ಕೂಡ ಅಲ್ಲಿ ಕಾರ್ಯಕ್ರಮ ಮುಂದುವರೆದಿತ್ತು. ಹಾಗಾಗಿ ಕಾರ್ಯಕ್ರಮ ನಿಲ್ಲಿಸಿ ಎಂದು ಪೊಲೀಸರು ಹೇಳಿದ್ದಾರೆ. ಬೇರೆ ದಾರಿ ಇಲ್ಲದೇ, ಕಾರ್ಯಕ್ರಮವನ್ನ ನಿಲ್ಲಿಸಲಾಗಿದೆ. ಈ ಬಗ್ಗೆ ರೆಹಮಾನ್ ತಮ್ಮ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದು, ಪುಣೆ, ಕಳೆದ ರಾತ್ರಿ ನೀವು ಕೊಟ್ಟ ಪ್ರೀತಿಗೆ ಮತ್ತು ಪಟ್ಟ ಸಂಭ್ರಮಕ್ಕೆ ಧನ್ಯವಾದಗಳು. ಇದು ಅಷ್ಟು ಅದ್ಭುತ ಸಂಗೀತ ಕಚೇರಿಯಾಗಿತ್ತು. ಶಾಸ್ತ್ರೀಯ ಸಂಗೀತಕ್ಕೆ ಇದು ತವರೂರೆಂದರೂ ಆಶ್ಚರ್ಯವಿಲ್ಲ. ನಿಮ್ಮೆಲ್ಲರೊಂದಿಗೆ ಮತ್ತೆ ಹಾಡಲು ನಾನು ಶೀಘ್ರದಲ್ಲೇ ಬರುತ್ತೇನೆಂದು ಟ್ವೀಟ್ ಮಾಡಿದ್ದಾರೆ.

‘ಕಾಂಗ್ರೆಸ್ ಪಕ್ಷ ಹಿಂದೆಯೂ ಶ್ರಮಿಕರ ಜೊತೆ ನಿಂತಿತ್ತು, ಮುಂದೆಯೂ ನಿಲ್ಲಲಿದೆ. ‘

ಬಿಜೆಪಿ ಪ್ರಣಾಲಿಕೆ ರಿಲೀಸ್, ಪ್ರತಿದಿನ ನಂದಿನಿ ಹಾಲು ವಿತರಣೆಗೆ ನಿರ್ಧಾರ..

ಸಿರಿಯಲ್ ನಟಿಯರೊಂದಿಗೆ ಸಚ್ಚಿದಾನಂದ ಅಬ್ಬರದ ಪ್ರಚಾರ..

About The Author