Wednesday, July 2, 2025

Latest Posts

Political News: ಲವ್‌ ಜಿಹಾದ್‌ ತಪ್ಪಿಸಲು ಬೇಗ ಹೆಣ್ಮಕ್ಕಳ ಮದುವೆ ಮಾಡಿ : ಕೇರಳ ಬಿಜೆಪಿ ನಾಯಕನ ವಿವಾದ

- Advertisement -

Political News: ದೇಶದಲ್ಲಿ ಅಗಾಗ್ಗೆ ಲವ್‌ ಜಿಹಾದ್‌ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅದು ಹಿಂದೂ ಯುವತಿಯರನ್ನ ಪ್ರೀತಿಸಿ ಅಥವಾ ಪುಸಲಾಯಿಸಿ ಮುಸ್ಲಿಂ ಯುವಕರು ಮದುವೆಯಾಗುವುದಾಗಿದೆ. ಈ ವಿಚಾರಕ್ಕೆ ಸಾಕಷ್ಟು ಸಂಪ್ರದಾಯವಾದಿಗಳು, ಹಿಂದೂಪರ ಸಂಘಟನೆಗಳು ಹಾಗೂ ಬಹುತೇಕ ಹಿಂದೂ ಪೋಷಕರೂ ಸಹ ವಿರೋಧ ವ್ಯಕ್ತಪಡಿಸುತ್ತಾರೆ. ಅಲ್ಲದೆ ಈ ಲವ್‌ ಜಿಹಾದ್‌ ವಿಚಾರಕ್ಕೆ ಅನೇಕ ಸಾವು-ನೋವುಗಳೂ ಸಂಭವಿಸಿವೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ವಿಚಾರಕ್ಕೆ ಹಲವಾರು ಕೋಮು ಗಲಭೆಗಳು ನಡೆದಿವೆ. ಇನ್ನೂ ರಾಜಕೀಯವಾಗಿ ನಾವು ನೋಡಿದಾಗ ಕಟ್ಟರ್‌ ಹಿಂದುತ್ವವಾದಿ ಬಿಜೆಪಿಯು ಇದಕ್ಕೆ ಕಠೋರವಾಗಿ ವಿರೋಧಿಸುತ್ತದೆ. ಇಷ್ಟೆಲ್ಲ ಇರುವಾಗ ಇದೀಗ ಬಿಜೆಪಿ ನಾಯಕರೊಬ್ಬರು ಈ ಲವ್‌ ಜಿಹಾದ್‌ ವಿಚಾರಕ್ಕೆ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಯಾರವರು..? ಕಾಂಟ್ರವರ್ಸಿಯಾಗುವಂತೆ ಅಂಥದ್ದೇನಿದೆ ಅವರ ಮಾತಲ್ಲಿ..? ದೇವರ ನಾಡಲ್ಲಿ ಏನಿದು ಲವ್‌ ಜಿಹಾದ್‌ ಮ್ಯಾಟರ್‌..? ಇನ್ನೋ ಈ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಲು ತಪ್ಪದೇ ಕೊನೆಯವರೆಗೂ ಈ ವಿಡಿಯೋ ವೀಕ್ಷಿಸಿ..

ಎಸ್‌.. ಲವ್‌ ಜಿಹಾದ್‌ ಅಂದ್ರೆ ಅದೆಷ್ಟೋ ಹಿಂದುಗಳು ಉರಿದುಬೀಳ್ತಾರೆ, ಅದೆಷ್ಟೋ ಸನಾತನಿಗಳು ಕೆಂಡಕಾರುತ್ತಾರೋ, ಮತ್ತದೆಷ್ಟೋ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೋ.. ಅನ್ನೋದರ ಬಗ್ಗೆ ನಮ್ಮ ರಾಜ್ಯದಲ್ಲಿ ನಡೆದ ಲವ್‌ ಜಿಹಾದ್‌ ಕೇಸ್‌ಗಳನ್ನೇ ನೋಡಿದಾಗ ನಮಗೆ ಗೊತ್ತಾಗುತ್ತೆ. ನಮ್ಮ ರಾಜ್ಯದಲ್ಲಿ ಇರೋ ಮೂರು ರಾಜಕೀಯ ಪಕ್ಷಗಳಲ್ಲಿ ಒಂದು ಅಹಿಂದದ ಪರವಾಗಿದ್ದರೆ, ಇದರ ಆಡಳಿತದ ಅವಧಿಯಲ್ಲಿ ಇಂಥ ಪ್ರಕರಣಗಳಿಗೇನೋ ಕೊಂಚ ರಕ್ಷಣೆ ಸಿಗಬಹುದು. ಆದರೆ ಇನ್ನೊಂದು ಸರ್ಕಾರ ಅಧಿಕಾರಕ್ಕೆ ಬಂತಂದ್ರೆ ಅಲ್ಲಿ ಈ ಲವ್‌ ಜಿಹಾದ್‌ಗೆ ಅವಕಾಶವೇ ಇಲ್ಲ. ಅದರ ಜೊತೆಗೆ ಮೂರನೇ ಸರ್ಕಾರ ಅಧಿಕಾರಕ್ಕೆ ಈ ಎರಡಕ್ಕೂ ಅದರಲ್ಲಿ ಅವಕಾಶಗಳು ವಿರಳ ಅಂದ್ರೆ ಲವ್‌ ಜಿಹಾದ್‌ ನಡೆಯಬಹುದು ಅಥವಾ ಇಲ್ಲ ಅನ್ನೋ ಸ್ಥಿತಿಯಾಗಿರುತ್ತೆ. ಅಷ್ಟಕ್ಕೂ ಲವ್‌ ಜಿಹಾದ್‌ಗಳು ಯಾವುದೇ ಸರ್ಕಾರವನ್ನು ಅವಲಂಬಿಸಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ, ಆದರೆ ಇದರಿಂದ ಗಲಭೆಗಳಾಗುವುದನ್ನ ನಾವು ಒಪ್ಪಲೇಬೇಕು.

ಹೌದು ಅಷ್ಟಕ್ಕೂ ಎಲ್ಲವೂ ಶಾಂತವಾಗಿರೋವಾಗ ಮತ್ಯಾಕೆ ಈ ಲವ್‌ ಜಿಹಾದ್‌ ಟಾಪಿಕ್‌ ಅಂತ ನೀವ್‌ ಅಂದುಕೊಳ್ಳಬಹುದು.. ಆದ್ರೆ ಇಲ್ಲೇ ಇದೇ ನೋಡಿ ಅಸಲಿ ವಿಷಯ, ಇದೇ ವಿಚಾರಕ್ಕೆ ಕೇರಳದ ನಾಯಕರೊಬ್ಬರು ನೀಡಿರುವ ಹೇಳಿಕೆಯೊಂದು ವಿವಾದವನ್ನ ಹುಟ್ಟುಹಾಕುವಂತೆ ಮಾಡಿದೆ.. ಅಂದಹಾಗೆ ರಾಜಕೀಯ ನಾಯಕರು ಯಾರೇ ಆಗಿರಲಿ, ಅವರ ನಾಲಿಗೆಯಿಂದ ಹೊರಬರುವ ಪ್ರತಿಯೊಂದು ಮಾತೂ ಸಹ ವಿವೇಚನೆಯಿಂದ ಕೂಡಿರಬೇಕು. ಆದರೆ ಕೇರಳದ ಬಿಜೆಪಿಯ ಪಿ.ಸಿ. ಜಾರ್ಜ್ ಮಾತಿನ ಭರದಲ್ಲಿಯೋ ಹೇಗೋ ಗೊತ್ತಿಲ್ಲ.. ಒಟ್ಟಿನಲ್ಲಿ ತಮ್ಮ ನಾಲಿಗೆಯನ್ನ ಹರಿಬಿಟ್ಟಿದ್ದಾರೆ. ಇನ್ನೂ ಪೋಷಕರು ತಮ್ಮ ಹೆಣ್ಣುಮಕ್ಕಳನ್ನ 24 ವರ್ಷ ತುಂಬುವ ಮೊದಲೇ ಮದುವೆ ಮಾಡಬೇಕೆಂದು ಅಲ್ಲಿನ ಕ್ರಿಶ್ಚಿಯನ್ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಅವರು ಪರೋಕ್ಷವಾಗಿ ಬಾಲ್ಯ ವಿವಾಹವನ್ನ ಬೆಂಬಲಿಸಿದ್ರಾ ಅನೋ ಪ್ರಶ್ನೆ ಮೂಡುತ್ತೆ.

ಅಲ್ದೆ ಮೀನಚಿಲ್ ತಾಲ್ಲೂಕಿನಲ್ಲಿಯೇ 400 ಹುಡುಗಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ಅವರಲ್ಲಿ ಕೇವಲ 41 ಮಂದಿ ಮಾತ್ರ ಹಿಂದಿರುಗಿದ್ದಾರೆ. ನಾನು ಪೋಷಕರಿಗೆ ಹೇಳುವುದೇನೆಂದರೆ, ತಮ್ಮ ಹೆಣ್ಣುಮಕ್ಕಳಿಗೆ 24 ವರ್ಷ ತುಂಬುವ ಮೊದಲೇ ಮದುವೆ ಮಾಡಿಸಿ. ಮದುವೆಯ ನಂತರವೂ ಅವಳು ತನ್ನ ವಿದ್ಯಾಭ್ಯಾಸವನ್ನ ಮುಂದುವರಿಸಬಹುದು ಎಂದು ಹೇಳಿದ್ದಾರೆ. ಇನೂ ಕ್ರೈಸ್ತರು ತಮ್ಮ ಹೆಣ್ಣುಮಕ್ಕಳಿಗೆ 25ನೇ ವಯಸ್ಸಿಗೆ ಏಕೆ ಮದುವೆ ಮಾಡುತ್ತಿಲ್ಲ? ನೀವು ಅವರನ್ನ ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಕಳೆದೆರಡು ದಿನಗಳ ಹಿಂದಷ್ಟೇ 25 ವರ್ಷದ ಹುಡುಗಿಯೊಬ್ಬಳು ರಾತ್ರಿ 9:30ಕ್ಕೆ ಕಾಣೆಯಾಗಿದ್ದಾಳೆ. ಅಲ್ದೆ 25 ವರ್ಷ ವಯಸ್ಸಿನವರೆಗೂ ಅವಳಿಗೆ ಮದುವೆ ಮಾಡದಿರಲು ಅವಳ ತಂದೆಯೇ ಹೊಣೆಯಾಗಬೇಕು. ಇದು ಮಾತನಾಡಲೇಬೇಕಾದ ವಿಷಯ ಅಂತ ಜಾರ್ಜ್‌ ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಲವ್‌ ಜಿಹಾದ್ ವಿರುದ್ಧ ಅಬ್ಬರಿಸಿದ್ದರು.

ಹುಡುಗಿಯರಿಗೆ 22 ಅಥವಾ 23 ವರ್ಷ ವಯಸ್ಸಾಗುವ ಮೊದಲೇ ಮದುವೆ ಮಾಡಿ, ಆ ಘನತೆಯನ್ನ ಪೋಷಕರು ಕಾಪಾಡಿಕೊಳ್ಳಬೇಕು. ಅವಳು 28 ಅಥವಾ 29 ವರ್ಷ ವಯಸ್ಸಿನವಳಾಗಿ ಸಂಪಾದಿಸಲು ಪ್ರಾರಂಭಿಸಿದರೆ, ಅವಳು ಮದುವೆಯಾಗುವುದಿಲ್ಲ ಮತ್ತು ಅವಳ ಗಳಿಕೆಯನ್ನೂ ಸಹ ಅವಳ ಕುಟುಂಬವು ವ್ಯರ್ಥ ಮಾಡುತ್ತೆ ಇದೊಂದು ಸಮಸ್ಯೆಯಾಗಿದೆ ಎಂದು ಜಾರ್ಜ್‌ ಹೇಳಿದ್ದಾರೆ.

ವಿದೇಶಗಳಲ್ಲಿ ಯುವತಿಯರಿಂದ ಸೆಕ್ಸ್‌ ವರ್ಕ್..!

ಇನ್ನೂ ಕೇರಳ ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ಹಾಗೂ ಲವ್ ಜಿಹಾದ್‌ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ನಮ್ಮ ರಾಜ್ಯದಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಯುವತಿಯರು ನಾಪತ್ತೆಯಾಗಿದ್ದಾರೆ. ಅಲ್ದೆ ಅವರಲ್ಲಿ ಬಹುತೇಕರು ಈ ಲವ್‌ ಜಿಹಾದ್‌ಗೆ ಬಲಿಯಾಗಿದ್ದಾರೆ ಅನ್ನೋ ಸ್ಫೋಟಕ ಅಂಶವನ್ನ ಜಾರ್ಜ್‌ ಹೊರಹಾಕಿದ್ದಾರೆ. ಗಮನಾರ್ಹ ಸಂಗತಿ ಅಂದ್ರೆ ಹೀಗೆ ಕಾಣೆಯಾದವರೆಲ್ಲ ಮುಸ್ಲಿಂ ಯುವಕರ ಜೊತೆಗೆಯೇ ಹೋಗಿದ್ದಾರೆ. ಅಲ್ದೆ ಮುಖ್ಯವಾಗಿ ಈ ಯುವತಿಯರು ಮುಸ್ಲಿಂ ರಾಷ್ಟ್ರಗಳಾದ ಸಿರಿಯಾ, ಜೋರ್ಡಾನ್‌, ಅಪ್ಘಾನಿಸ್ತಾನಂತಹ ದೇಶಗಳಲ್ಲಿ ಲೈಂಗಿಕ ಗುಲಾಮರಾಗಿ ಜೀವಿಸುತ್ತಿದ್ದಾರೆ ಅನ್ನೋ ಆತಂಕಕಾರಿ ಮಾಹಿತಿಯನ್ನ ಜಾರ್ಜ್‌ ಬಿಚ್ಚಿಟ್ಟಿದ್ದಾರೆ. ಇನ್ನೂ ಇದಕ್ಕೆ ಬೇಕಾದ ಪುರಾವೆಗಳೂ ಸಹ ತಮ್ಮ ಬಳಿ ಇವೆ ಎಂಬುದಾಗಿ ಅವರು ಹೇಳಿದ್ದಾರೆ.

ಒಟ್ನಲ್ಲಿ.. ಅಹಿಂದಪರವಾದ ಸರ್ಕಾರ ಪ್ರಸ್ತುತ ಕೇರಳದಲ್ಲಿರುವುದು ಈ ರೀತಿಯ ಘಟನೆಗಳಿಗೆ ಕಾರಣಗಳಲ್ಲಿ ಒಂದಾಗಿರಬಹದು, ಅಲ್ದೆ ಹೇಳಿ ಕೇಳಿ ಅಲ್ಲಿ ಅಧಿಕಾರದಲ್ಲಿರುವುದು ಸೆಕ್ಯೂಲರ್‌ ಆಡಳಿತ. ಆದ್ರೆ ಇಂಟ್ರೆಸ್ಟಿಂಗ್‌ ವಿಚಾರ ಅಂದ್ರೆ ಮತಾಂತರದ ಆರೋಪ ಹೊತ್ತಿರುವ ಕ್ರಿಶ್ಚಿಯನ್ನ ಸಮುದಾಯದಲ್ಲಿಯೇ ಈ ರೀತಿಯ ಲವ್‌ ಜಿಹಾದ್‌ ಪ್ರಕರಣಗಳು ನಡೆಯುತ್ತಿರುವುದು ಅಲ್ಲಿನ ನಾಯಕರನ್ನ ನಿದ್ದೆಗೆಡುವಂತೆ ಮಾಡಿದೆ. ಆದ್ರೆ ಈ ವಿಚಾರದಲ್ಲಿ ಅಲ್ಲಿನ ಸರ್ಕಾರದ ನಿಲುವನ್ನ ನಾವಿಲ್ಲಿ ಗಮನಿಸಬೇಕಿದೆ. ನಾಲ್ಕು ಸಾವಿರಕ್ಕೂ ಅಧಿಕ ಯುವತಿಯರ ನಾಪತ್ತೆಯಾಗಿದ್ದರೂ ಸುಮ್ಮನಿದ್ದರೆ ಏನು ಅರ್ಥವಾಗುತ್ತೆ..? ಅನ್ನೋದು ಕೂಡ ಒಂದು ಸಹಜ ಪ್ರಶ್ನೆಯಾಗಿದೆ. ಅದೇನೆ ಇರಲಿ.. ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಾರ್ಜ್‌ ಅವರು ತಮ್ಮ ಸುದೀರ್ಘ ರಾಜಕೀಯ ಅನುಭವದಿಂದ ಈ ಮಾತುಗಳನ್ನ ಹೇಳಿದ್ದಾರೋ..? ಅಥವಾ ತಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯ ಇಳಿಕೆ ಹಾಗೂ ಧರ್ಮ ರಕ್ಷಣೆಯ ಚಿಂತನೆಯಿಂದ ಹೇಳಿದ್ದಾರೋ..? ಅಲ್ದೆ ಸರ್ಕಾರದ ವಿರುದ್ಧ ಆರೋಪ ಮಾಡುವ ಉದ್ದೇಶದಿಂದ ರಾಜಕೀಯವಾಗಿ ಹೇಳಿದ್ದಾರೋ ಅನ್ನೋದು ಗೊತ್ತಿಲ್ಲ. ಆದರೆ ಸದಾ ವಿವಾದಗಳಿಂದಲೇ ಸದ್ದು ಮಾಡುವ ಈ ಪಿ ಸಿ ಜಾರ್ಜ್‌ ಹೆಣ್ಣು ಮಕ್ಕಳ ಬಗ್ಗೆ ಮಾತನಾಡೋ ಮೂಲಕ ಮತ್ತೊಂದು ಹೊಸ ಬೆಂಕಿಯನ್ನ ಮೈ ಮೇಲೆ ಎಳೆದುಕೊಂಡಿರೋದನ್ನ ನಾವಿಲ್ಲಿ ಅಲ್ಲಗಳೆಯುವಂತಿಲ್ಲ..

- Advertisement -

Latest Posts

Don't Miss