Political News: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜನಾತದರ್ಶನ ಮಾಡಲಾಯಿತು.
ಈ ವೇಳೆ ಓರ್ವ ವ್ಯಕ್ತಿ ಕೆಎಸ್‌ಆರ್‌ಟಿಸಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸನೇ ಬೇಕು ಎಂದು ಕೇಳಿದ್ದಾನೆ. ಆದರೆ ಆತನಿಗೆ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಹುದ್ದೆ ನೀಡಲು ಮುಂದಾಗಿದೆ. ಹಾಗಾಗಿ ಆ ವ್ಯಕ್ತಿ ಸಚಿವ ಸಂತೋಷ್ ಲಾಡ್ ಮುಂದೆ ನನಗೆ ಸೆಕ್ಯುರಿಟಿ ಕೆಲಸನೇ ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಅದಕ್ಕೆ ಬುದ್ಧಿ ಹೇಳಿರುವ ಲಾಡ್,
ಕೈಯಿಗೆ ಬಂದಿರೋ ಸರಕಾರಿ ಕೆಲಸ ಕಳಕೋಬೇಡ. ಕಂಡಕ್ಟರ್ ಆಗೋದು ಬೇಡ, ನಾವು ವಾಚಮನ್ ಆಗಬೇಕು. ಕಂಡಕ್ಟರ್ ಆದ್ರೆ ಇವನ ಮರಿಯಾದೆ ಹೋಗುತ್ತೆ. ನಿನಗೆ ವಾಚಮನ್ ಕೆಲಸ ಬೇಕೆಂದ್ರೆ 6 ವರ್ಷ ವೇಟ್ ಮಾಡು. ವಾಚಮನ್ ಕೆಲಸ ಸಿಕ್ಕಾಗ ವಾಚಮನ ಕೆಲಸ ಮಾಡು. ನಿನಗೆ ದೇವರು ಒಳ್ಳೆಯದು ಮಾಡಲಿ ಹೋಗು. ನಿನಗೆ ಎನಾದ್ರೂ ಬುದ್ದಿ ಇದೆನಾ..? ಸರಕಾರ ಕೆಲಸವನ್ನ ಕಾಲಿಲೆ ಒದ್ದು ಹೋಗ್ತಿಯಾ..? ಮನೆಯ ಮುಂದೆ ಬಂದು ಸರಕಾರಿ ಕೆಲಸ ಕೊಡ್ತಾರೆ ಅಂತ ಬಂದ್ರೆ ಒದ್ದೋಗ್ತಿಯಾ..? ಹೋಗಪ್ಪ ಹೋಗು ಎಲ್ಲಿ ಕೊಡ್ತಾರೆ ಅಲ್ಲು ಹೋಗಿ ಕೆಲಸ ಮಾಡು ಎಂದು ಸಚಿವ ಸಂತೋಷ ಲಾಡ್ ಗರಂ ಆಗಿದ್ದಾರೆ.
ಇದಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿರುವ ಲಾಡ್, 2016 ರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕನಸ್ಸಾಗಿತ್ತು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣ ಮಾಡಬೇಕು ಅಂದಿದ್ದರು. ನಮ್ಮ ಜಿಲ್ಲೆಯಲ್ಲಿ ತಡವಾಗಿ ಅರಂಭವಾಗಿದೆ. ಗಾಂಧಿಜೀ ಇಹಾಸವನ್ನ ಈ ಭವನದಲ್ಲಿ ಪೇಂಟಿಂಗ್ ಮಾಡಿದ್ದಾರೆ. ಹಿಸ್ಟರಿ ಜನರಿಗೆ ಅರ್ಥ ಆಗಬೇಕು, ಶಾಲಾ ಕಾಲೇಜು ಮಕ್ಕಳು ಗಾಂಧೀಜಿ ಬಗ್ಗೆ ಮಾಹಿತಿ ಪಡೆದುಕ್ಕೊಳ್ಳಬೇಕು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಧಾರವಾಡದಲ್ಲಿ ಜನಿವಾರ ಪ್ರಕರಣ ಬೆಳಕಿಗೆ ಬಂದ ವಿಚಾರದ ಬಗ್ಗೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ನಾವು ಸಿರಿಯಸ್ ಆಗಿ ತೆಗೆದುಕ್ಕೊಂಡಿದ್ದೇವೆ, ಸಂಪೂರ್ಣವಾಗಿ ಮಾಹಿತಿ ಇಲ್ಲ ನಾವು ಸಿರಿಯಸ್ ಆಗಿ ಪ್ರಕರಣವನ್ನ ಕೈಗೊತ್ತಿಕ್ಕೊಳ್ಳುತ್ತೇವೆ. ಸಂಭಂದಪಟ್ಟವರ ಮೆಲೆ ನಾವು ಪ್ರಕರಣ ದಾಖಲಿಸುತ್ತೇವೆ. 2025 ರಲ್ಲಿ ಇಂತಹ ಘಟನೆಗಳು ಅಗಬಾರದು. ಜನಿವಾರ ಪ್ರಕರಣವನ್ನ ನಾವು ಸಿರಿಯಸ್ ಆಗಿ ತೆಗೆದುಕ್ಕೊಂಡಿದ್ದೇವೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಜನಿವಾರ ಬಗ್ಗೆ ರಿಯಾಕ್ಷನ್ ಮಾಡುತ್ತಿಲ್ಲ, ಎಂದು ಬೆಲ್ಲದ ಗಂಭೀರ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಲಾಡ್, ಬೆಲ್ಲದ ಅವರಿಗೆ ಹೋಗಿ ಸಿಎಂಗೆ ಕೇಳಲಿಕ್ಕೆ ಹೇಳಿ ಸಿಎಂ ಉತ್ತರ ಕೊಡುತ್ತಾರೆ ಎಂದಿದ್ದಾರೆ.