Sunday, April 20, 2025

Latest Posts

Political News: ಕೇಂದ್ರ ಸರ್ಕಾರದ ಡಿಲಿಮಿಟೇಶನ್ ಯೋಜನೆ ಬಗ್ಗೆ ತಮಿಳುನಾಡು ಸಿಎಂ ವ್ಯಂಗ್ಯ

- Advertisement -

Political News: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೇಂದ್ರದ ಉದ್ದೇಶಿತ ಡಿಲಿಮಿಟೇಶನ್ ಯೋಜನೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ರಾಜ್ಯದ ನವವಿವಾಹಿತರು ತಕ್ಷಣವೇ ಮಕ್ಕಳನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಈ ಮೊದಲು ನಾನು ನವ ವಿವಾಹಿತರು ಸಮಯ ಹೊಂದಾಣಿಕೆ ಮಾಡಿಕೊಂಡು ಮಕ್ಕಳನ್ನು ಪಡೆಯಿರಿ ಎಂದು ಹೇಳುತ್ತಿದ್ದೆ. ಆದರೆ ಈಗ ಹಾಗೆ ಹೇಳುವ ಪರಿಸ್ಥಿತಿ ಇಲ್ಲ. ಏಕೆಂದರೆ, ಕೇಂದ್ರ ಸರ್ಕಾರ ಡಿಲಿಮಿಟೇಶನ್ ಯೋಜನೆ ಜಾರಿಗೆ ತರಲು ಸಜ್ಜಾಗುತ್ತಿದೆ. ಹಾಗಾಗಿ ಈಗ ನಾವು ಸಮಯ ಹೊಂದಾಣಿಕೆ ಮಾಡಿಕೊಂಡು ಮಕ್ಕಳು ಮಾಡಿಕೊಳ್ಳಿ ಎಂದು ಹೇಳಲಾಗುವುದಿಲ್ಲ. ಬದಲಿಗೆ ಮನ ವಿವಾಹಿತರು ಹೆಚ್ಚು ತಡ ಮಾಡದೇ, ಬೇಗ ಮಕ್ಕಳು ಮಾಡಿಕೊಂಡು, ಆ ಮಕ್ಕಳಿಗೆ ತಮಿಳು ಹೆಸರುಗಳನ್ನೇ ನಾಮಕರಣ ಮಾಡಬೇಕು ಎಂದು ಕೇಂದ್ರದ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಈ ಮೂಲಕ ಜನಸಂಖ್ಯಾ ಆಧಾರದ ಬದಲಾವಣೆಗಳ ಮೇಲೆ ಸಂಸದೀಯ ಮತ್ತು ವಿಧಾನ ಸಭಾ ಕ್ಷೇತ್ರಗಳ ಗಡಿಗಳನ್ನು ಪುನರ್‌ರಚಿಸುವುದನ್ನು ಒಳಗೊಂಡಿರುವ ಕೇಂದ್ರದ ಡಿಲಿಮಿಟೇಶನ್ ಯೋಜನೆಗಳನ್ನು ತಮಿಳುನಾಡಿನ ಡಿಎಂಕೆ ಪಕ್ಷ ವಿರೋಧಿಸಿದೆ.

- Advertisement -

Latest Posts

Don't Miss