Saturday, April 5, 2025

Latest Posts

Political news: ಇನ್‌ ಆಗ್ತಾರಾ ಯತ್ನಾಳ್‌..? : ವರ್ಕೌಟ್‌ ಆಗುತ್ತಾ ಫಡ್ನವೀಸ್‌ ಫಾರ್ಮುಲಾ..?

- Advertisement -

Political news: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಕ್ರಿಯೆ ಶುರುವಾದ ಬೆನ್ನಲ್ಲೇ ಗೋಕಾಕ್‌ ಶಾಸಕ ಹಾಗೂ ರೆಬಲ್‌ ನಾಯಕ ರಮೇಶ್‌ ಜಾರಕಿಹೊಳಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಮಹಾರಾಷ್ಟ್ರಕ್ಕೆ ತೆರಳಿರುವ ಅವರು ನಾಗಪುರದಲ್ಲಿ ಫಡ್ನವೀಸ್‌ ಅವರೊಂದಿಗೆ ರಾಜ್ಯ ಬಿಜೆಪಿಯ ಆಂತರಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಪ್ರಮುಖವಾಗಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ನಮ್ಮ ಪಕ್ಷದ ಹಿರಿಯರಾಗಿದ್ದು ಅವರನ್ನು ಉಚ್ಚಾಟನೆ ಮಾಡಿರುವುದು ಬೇಸರದ ವಿಚಾರವಾಗಿದೆ. ನಮ್ಮ ರಾಜ್ಯದಲ್ಲಿ ಅವರನ್ನು ಬಿಜೆಪಿಯಲ್ಲಿಯೇ ಮುಂದುವರೆಸುವುದು ಪಕ್ಷದ ದೃಷ್ಟಿಯಿಂದ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನಮ್ಮ ಪಕ್ಷಕ್ಕೆ ಮರಳಿ ಕರೆತರುವಂತೆ ನೀವು ಹೈಕಮಾಂಡ್‌ ನಾಯಕರ ಮೇಲೆ ಒತ್ತಡ ಹೇರಬೇಕು. ಅಲ್ಲದೆ ಯತ್ನಾಳ್ ನಮ್ಮ ಬಣದ ಪ್ರಮುಖ ನಾಯಕರಾಗಿದ್ದಾರೆ‌, ಈ ಎಲ್ಲ ವಿಚಾರಗಳನ್ನು ನೀವು ಗಂಭೀರವಾಗಿ ಪರಿಗಣಿಸಿ ಅವರಿಗೆ ನ್ಯಾಯ ಕೊಡಿಸಬೇಕಿದೆ ಎಂದು ಅವರು ಫಡ್ನವೀಸ್‌ ಬಳಿ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ವಿಜಯೇಂದ್ರ ಕೆಳಗಿಳಿಸಿ..

ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಹುದ್ದೆಯಿಂದ ಕೊಕ್‌ ನೀಡಲೇಬೇಕೆಂದು ನಡೆಸಿರುವ ಬಂಡಾಯದ ಯಾಗವು ಇನ್ನೂ ಮುಂದುವರೆದಿದೆ. ಈ ವಿಚಾರವನ್ನೂ ಚರ್ಚಿಸಿರುವ ರಮೇಶ್‌, ವಿಜಯೇಂದ್ರ ಕುರಿತು ಪಕ್ಷದ ಕೆಲ ನಾಯಕರಲ್ಲಿ ಅಸಮಾಧಾನವಿದೆ. ಹೀಗಾಗಿ ಅವರನ್ನು ಆ ಹುದ್ದೆಯಿಂದ ಇಳಿಸಿ ಆ ಜಾಗಕ್ಕೆ ಪಕ್ಷದಲ್ಲಿನ ಅನುಭವಕ್ಕೆ ತಕ್ಕ ನಾಯಕರನ್ನು ನೇಮಕ ಮಾಡಬೇಕು. ಇದಕ್ಕಾಗಿ ನಮ್ಮಲ್ಲಿ ಹಲವರು ಸೂಕ್ತರಿದ್ದಾರೆ ಎಂದು ಮನವರಿಕೆ ಮಾಡಿದ್ದಾರೆ. ಇನ್ನೂ ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳನ್ನು ಆಂತರಿಕ ಲೋಪಗಳನ್ನು ಸರಿಪಡಿಸಲು ಮುಂದಾಗುವಂತೆ ಜಾರಕಿಹೊಳಿ ಫಡ್ನವೀಸ್‌ ಅವರಲ್ಲಿ ಕೇಳಿಕೊಂಡಿದ್ದಾರೆ. ಈ ಮೂಲಕ ಯತ್ನಾಳ್‌ ಘರ್‌ ವಾಪ್ಸಿಗೆ ಸಾಹುಕಾರ್‌ ದೇವೇಂದ್ರ ಫಡ್ನವೀಸ್‌ ಫಾರ್ಮುಲಾ ಅನುಸರಿಸುತ್ತಿದ್ದಾರೆ.

ಸ್ಪಷ್ಟತೆ ನೀಡದ ಮಹಾ ಸಿಎಂ..

ಇನ್ನೂ ತಮ್ಮ ಕಾರ್ಯಕ್ರಮಗಳ ಒತ್ತಡದಲ್ಲಿಯೇ ರಮೇಶ್‌ ಮಾತು ಆಲಿಸಿದ ಫಡ್ನವೀಸ್‌, ರಮೇಶ್‌ ಜೊತೆ ರಾಜಕೀಯ ಉತ್ಸುಕತೆಯಿಂದ ಮಾತನಾಡಿಲ್ಲ, ಅಲ್ಲದೆ ರಾಜ್ಯದ ಬಿಜೆಪಿ ಕುರಿತು ದೂರು ನೀಡಿರುವುದಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಅಂದಹಾಗೆ ಈ ವಿಚಾರದಲ್ಲಿ ದೇವೇಂದ್ರ ಫಡ್ನವೀಸ್‌ ಯಾವುದೇ ಸ್ಪಷ್ಟತೆಯನ್ನೂ ನೀಡದಿರುವುದು ರೆಬಲ್‌ ನಾಯಕನಿಗೆ ಸ್ಷಲ್ಪ ನಿರಾಶೆ ಮೂಡಿಸಿದೆ. ಅಲ್ಲದೆ ಇದೇ ವಿಚಾರವಾಗಿ ಸಿಎಂ ಫಡ್ನವೀಸ್‌ ಅವರ ಜೊತೆ ವಿಸ್ತ್ರತ ಚರ್ಚೆ ನಡೆಸಲು ಮತ್ತೊಮ್ಮೆ ಸಮಯ ಪಡೆಯುವ ಯೋಚನೆಯಲ್ಲಿ ರಮೇಶ್‌ ಜಾರಕಿಹೊಳಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯಡಿಯೂರಪ್ಪ ಸರ್ಕಾರಕ್ಕೆ ನೆರವಾಗಿದ್ದ ಫಡ್ನವೀಸ್..

ಅಂದಹಾಗೆ‌ ಈ ಮೊದಲಿನಿಂದಲೂ ಫಡ್ನವೀಸ್‌ ಜೊತೆಗೆ ರಮೇಶ್ ಜಾರಕಿಹೊಳಿ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಕಳೆದ 2019ರಲ್ಲಿ‌ ರಾಜ್ಯದಲ್ಲಿ ನಡೆದಿದ್ದ ಆಪರೇಷನ್‌ ಕಮಲದ ವೇಳೆ ಆಗ ಮಹಾರಾಷ್ಟ್ರದಲ್ಲಿದ್ದ ಫಡ್ನವೀಸ್‌ ಸರ್ಕಾರವೇ ಎಲ್ಲ ಕೈ ಶಾಸಕರಿಗೆ ರಕ್ಷಣೆಯನ್ನು ನೀಡಿತ್ತು. ಈ ಮೂಲಕ ಫಡ್ನವೀಸ್‌ ಹಾಗೂ ರಮೇಶ್‌ ಜಾರಕಿಹೊಳಿ ನಡುವಿನ ಬಾಂಧವ್ಯ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಲು ಕಾರಣವಾಗಿತ್ತು. ಆದರೆ ಅದೇ ದೋಸ್ತಿಯಿಂದಲೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪದಚ್ಯುತಿಗೆ ರಮೇಶ್‌ ಜಾರಕಿಹೊಳಿ ಪ್ಲಾನ್‌ ಮಾಡಿದ್ದಾರೆ. ಹೈಕಮಾಂಡ್‌ ನಾಯಕರೊಂದಿಗೆ ಫಡ್ನವೀಸ್‌ ಅವರು ಉತ್ತಮ ಒಡನಾಟ ಹೊಂದಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರಿಂದ ವಿಜಯೇಂದ್ರ ಹಣಿಯಲು ಸಾಧ್ಯವಾಗಲಿದೆ ಎನ್ನುವುದು ಜಾರಕಿಹೊಳಿ ಲೆಕ್ಕಾಚಾರವಾಗಿದೆ.

- Advertisement -

Latest Posts

Don't Miss