Friday, November 22, 2024

Latest Posts

Mysore ವಿವಿಯಿಂದ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ವಿತರಣೆ..!

- Advertisement -
ನಟ ಪುನೀತ್ ರಾಜ್‍ಕುಮಾರ್ (Puneet Rajkumar) ಅವರಿಗೆ ಮರಣೋತ್ತರ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ‘ಅಪ್ಪು’ ಪತ್ನಿ ಅಶ್ವಿನಿಯವರು (Ashwini) ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ (University of Mysore) ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ (Doctorate) ಪದವಿ ಪ್ರದಾನ ವೇಳೆ ಇಡೀ ಡಾ.ರಾಜ್ ಕುಮಾರ್ ಕುಟುಂಬದವರು ಉಪಸ್ಥಿತರಿದ್ದರು. ಈ ವಿಶೇಷ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಕುಟುಂಬದಿಂದ 2 ಚಿನ್ನದ ಪದಕ(Gold Medals)ಘೋಷಣೆ ಮಾಡಲಾಯಿತು. ಪಾರ್ವತಮ್ಮ ರಾಜ್‍ಕುಮಾರ್ ಹೆಸರಿನಲ್ಲಿ ಬಿಸಿನೆಸ್‌ ಮ್ಯಾನೆಜ್‌ಮೆಂಟ್‌ (Business Management) ವಿಭಾಗಕ್ಕೆ ಚಿನ್ನದ ಪದಕ ಮತ್ತು ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ಲಲಿತಾಕಲಾ ವಿಭಾಗಕ್ಕೆ ಚಿನ್ನದ ಪದಕ (Gold Medal for Lalitakala Division) ನೀಡಲಾಗಿದ್ದು, 2 ಚಿನ್ನದ ಪದಕವನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರೇ ವಿತರಿಸಲಿದ್ದಾರೆ. ಇನ್ನು ನಟ ರಾಘವೇಂದ್ರ ರಾಜ್‍ಕುಮಾರ್ (Raghavendra Rajkumar) ಮಾತನಾಡಿ, ‘ಜೀವನ ಒಂದು ಚಕ್ರ ಇದ್ದಂತೆ. ನಮ್ಮ ತಂದೆಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿದ್ರು. ಇಂದು ನನ್ನ ತಮ್ಮನಿಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಸಿಕ್ಕಿದೆ. ನನಗೆ ಇದು ವೇದಿಕೆ ರೀತಿ ಕಾಣಿಸುತ್ತಿಲ್ಲ, ಸರಸ್ವತಿಯ ಮಂದಿರ ತರ ಕಾಣ್ತಿದೆ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ರೆ ಪ್ರಶಸ್ತಿಗಳು ಹುಡುಕಿ ಬರುತ್ತವೇ ಎಂದು ಪುನೀತ್ ಯಾವಾಗಲೂ ಹೇಳ್ತಿದ್ದ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ನನ್ನ ತಮ್ಮನಿಂದ ನಾನು ಸ್ವರ್ಗ ನೋಡುತ್ತಿದ್ದೇನೆ. ಈ ಗೌರವ ಡಾಕ್ಟರೇಟ್‌ ನಮ್ಮ ಕುಟುಂಬದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಅಶ್ವಿನಿ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಮಾಜಿಕ ಸೇವೆ ಮುಂದುವರೆಸುತ್ತೇವೆ’ ಎಂದು ಹೇಳಿದರು. ಇನ್ಮುಂದೆ ಡಾ.ಪುನೀತ್‌ ರಾಜ್‍ಕುಮಾರ್. ನಮ್ಮ ನಿಮ್ಮೆಲ್ಲರ  ಪ್ರೀತಿಯ ‘ಅಪ್ಪು’ಗೆ ಡಾಕ್ಷರೇಟ್‌ ಗೌರವ ಸಿಕ್ಕಿರೋದು ಅಭಿಮಾನಿಗಳಿಗೆ ಸಂತಸ ಕೊಟ್ಟಿದೆ.
- Advertisement -

Latest Posts

Don't Miss