Wednesday, May 29, 2024

Latest Posts

Prajwal Pen drive Case: ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ, ನೆಂಟರ ಮನೆಯಲ್ಲಿದ್ದೆ ಎಂದ ಸಂತ್ರಸ್ತೆ

- Advertisement -

Political News: ಪ್ರಜ್ವಲ್ ರೇವಣ್ಣ ರಾಸಲೀಲೆ ನಡೆಸಿದ ವೀಡಿಯೋ ಒಳಗೊಂಡಿರುವ ಪೆನ್‌ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಒಂದೊಂದೆ ಪ್ರಕರಣಗಳು ಹೊರಬೀಳುತ್ತಿದೆ.

ಅದೇ ರೀತಿ ಹೆಚ್.ಡಿ.ರೇವಣ್ಣ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆಂಬ ಆರೋಪದ ಮೇಲೆ ಎಸ್ಐಟಿ ಅವರನ್ನು ಅರೆಸ್ಟ್ ಮಾಡಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಇದೀಗ ಸಂತ್ರಸ್ತೆ ವೀಡಿಯೋ ರಿಲೀಸ್ ಮಾಡಿದ್ದು, ನಾನು ನಾಲ್ಕು ದಿನದ ಮಟ್ಟಿಗೆ ನೆಂಟರ ಮನೆಗೆ ಹೋಗಿದ್ದೆ. ವಾಪಸ್ ಊರಿಗೆ ಬರುವಷ್ಟರಲ್ಲಿ ಏನೇನೋ ವೀಡಿಯೋ ಮಾಡಿ, ಹರಿಬಿಟ್ಟು, ಕಿಡ್ನ್ಯಾಪ್‌ ಎಂದು ಸುದ್ದಿ ಹಬ್ಬಿಸಿದ್ದಾರೆಂದು ಹೇಳಿಕೆ ನೀಡಿದ್ದಾಳೆ.

ರೇವಣ್ಣ, ಪ್ರಜ್ಜಣ್ಣ, ಭವಾನಿ ಅಕ್ಕ ನನ್ನನ್ನು ಏನೂ ಮಾಡಿಲ್ಲ. ಅವರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ವೀಡಿಯೋಗೂ ನನಗೂ ಸಂಬಂಧವೇ ಇಲ್ಲ. ಯಾರೂ ಕಿಡ್ನ್ಯಾಪೂ ಮಾಡಿಲ್ಲ. ನಾನು ನನ್ನ ಸಂಬಂಧಿಕರ ಮನೆಯಲ್ಲಿದ್ದೆ. ನನ್ನ ಮಗನಿಗೆ ಹೇಳುವುದಿಷ್ಟೇ, ನೀನು ಹೆದರಬೇಡ. ನಾನು ಇನ್ನು ಒಂದೆರಡು ದಿನಗಳಲ್ಲೇ ಬರುತ್ತೇನೆ. ನಾನು ಚೆನ್ನಾಗಿದ್ದೇನೆ ಎಂದಿದ್ದಾರೆ.

ಅಲ್ಲದೇ, ನಮ್ಮ ಮನೆಯ ಬಳಿ ಪೊಲೀಸರನ್ನೆಲ್ಲ ಕಳಿಸಿ, ತೊಂದರೆ ಕೊಡಬೇಡಿ. ಮಕ್ಕಳು ಮರಿ ಎಲ್ಲರೂ ಇರುತ್ತಾರೆ, ಅವರು ಹೆದರುತ್ತಾರೆ. ನಾವು ಕೂಲಿ ಮಾಡಿಕೊಂಡು ಬದುಕುವವರು, ನಮ್ಮ ಹೊಟ್ಟೆಯ ಮೇಲೆ ಹೊಡೆಯಬೇಡಿ. ನೆಮ್ಮದಿಯಾಗಿರಲು ಬಿಡಿ. ನಮಗೆನೂ ತೊಂದರೆಯಾಗಿಲ್ಲ. ತೊಂದರೆಯಾದರೆ, ನಾವೇ ಬಂದು ಹೇಳುತ್ತೇವೆ. ನನ್ನ ಮಗ ಸುಮ್ಮನೆ ಗಾಬರಿಯಾಗಿದ್ದ. ನನಗ್ಯಾರೂ ತೊಂದರೆ ಕೊಟ್ಟಿಲ್ಲವೆಂದು ವೀಡಜಿಯೋ ಮೂಲಕ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ.

ಭಾರತಕ್ಕೆ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು

ಚಿಕನ್ ಶವರ್ಮಾ ತಿಂದು ಓರ್ವ ಯುವಕ ಸಾವು: ಐವರ ಸ್ಥಿತಿ ಗಂಭೀರ

Kidnap case: ಮೇ 14ರವರೆಗೆ ಹೆಚ್.ಡಿ.ರೇವಣ್ಣಗೆ ನ್ಯಾಯಾಂಗ ಬಂಧನ

- Advertisement -

Latest Posts

Don't Miss