Monday, April 14, 2025

Latest Posts

‘ರಕ್ಷಿತ್, ರಿಷಬ್ ಬಳಿಯೂ ನಾನೆಂದೂ ಒಂದು ಚಾನ್ಸ್ ಕೊಡಿ ಅಂತಾ ಕೇಳಿಲ್ಲಾ’

- Advertisement -

ಕಿರಿಕ್ ಪಾರ್ಟಿ, ರಿಚಿ, ರಂಗೀತರಂಗ ಸೇರಿಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ, ಹೆಚ್ಚಾಗಿ ಶೆಟ್ರ ಗ್ಯಾಂಗ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ಪ್ರಮೋದ್ ತಮ್ಮ ಸಿನಿ ಪಯಣದ ಕಥೆಯನ್ನೇ ಬಿಚ್ಚಿಟ್ಟಿದ್ದಾರೆ.

ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ ಪ್ರಮೋದ್, ನಾನು ಸಿನಿರಂಗಕ್ಕೆ ಬಂದಿದ್ದೇ ಆಕ್ಸಿಡೆಂಟಲ್ ಅಂದಿದ್ದಾರೆ. ಬರಬೇಕು ಅಂತಾ ನಾನು ಸಿನಿರಂಗಕ್ಕೆ ಬಂದಿಲ್ಲ, ಬದಲಾಗಿ ಅಚಾನಕ್ಕಾಗಿ ಸಿನಿ ರಂಗಕ್ಕೆ ಬಂದಿದ್ದು. ಆದ್ರೆ ನಾನು ಎಲ್ಲರಿಗಿಂತ ಲಕ್ಕಿ ಅಂತಾ ತಿಳಿದುಕೊಂಡಿದ್ದೀನಿ. ಯಾಕಂದ್ರೆ ಇದುವರೆಗೂ ನಾನು ರಿಷಬ್, ರಕ್ಷಿತ್ ಸೇರಿ ಯಾವ ಡೈರೆಕ್ಟರ್ ಬಳಿಯೂ ಒಂದು ಚಾನ್ಸ್ ಕೊಡಿ ಅಂತಾ ಕೇಳಲಿಲ್ಲ. ಬದಲಾಗಿ ಅವಕಾಶಗಳು ಸಿಕ್ಕಿದಾಗ, ನಾನು ನಟ್ಸಿದ್ದೇನೆ ಅಂತಾರೆ ಪ್ರಮೋದ್.

ಅಲ್ಲದೇ ರಿಷಬ್, ರಕ್ಷಿತ್ ನನ್ನ ಬೆಸ್ಟ್ ಫ್ರೆಂಡ್ಸ್ ಆದ್ರೂ, ನಾನ್ಯಾವತ್ತೂ ಅವರ ಬಳಿಯೂ ಅವಕಾಶ ಕೇಳಲಿಲ್ಲ. ನಿನ್ನ ನೆಕ್ಸ್ಟ್ ಸಿನಿಮಾ ಯಾವ್ದು..? ಅದರಲ್ಲಿ ನನ್ನ ಪಾತ್ರವೇನು..? ನಿನ್ನ ನೆಕ್ಸ್ಟ್ ಸಿನಿಮಾದಲ್ಲಿ ನಾನು ಇದಿನಾ ಇಲ್ವಾ..? ಈ ಥರದ್ದೆಲ್ಲಾ ಮಾತು ಬಂದೇ ಇಲ್ಲ. ಕೆಲ ದಿನಗಳ ಹಿಂದೆ ನನಗೆ ಬೆಸ್ಟ್ ವಿಲನ್ ಅವಾರ್ಡ್ ಸಿಕ್ತು. ಅದು ನಾನು ಬಯಸಿ ಬಂದಿದ್ದಲ್ಲ. ಅದು ಕೂಡ ನನಗೆ ಬಯಸದೇ ಬಂದ ಭಾಗ್ಯ ಅಂತಾರೆ ಪ್ರಮೋದ್.

ಇನ್ನು ಪ್ರಮೋದ್ ಕಾಲೇಜು ದಿನಗಳಲ್ಲಿದ್ದಾಗ, ಅವರಿಗೆ ರೇಸರ್ ಆಗ್ಬೇಕು ಅಂತಾ ಮನ್ಸಿತ್ತಂತೆ. ಆವಾಗ್ ಗಾಡಿ ಓಡಿಸುವ ಕ್ರೇಜ್ ಜೋರಾಗಿತ್ತು. ಹತ್ತನೇ ಕ್ಲಾಸಿನಲ್ಲೇ ಪ್ರಮೋದ್ ಮನೆಯಲ್ಲಿ ಸುಳ್ಳು ಹೇಳಿ, ಚೆನ್ನೈಗೆ ಹೋಗಿ, ರೇಸ್ ಪ್ರಾಕ್ಟೀಸ್ ಮಾಡೋದು ಹೇಗೆ ಅಂತಾ ನೋಡಿಕೊಂಡು ಬರ್ತಿದ್ರಂತೆ. ಏಳನೇ ಕ್ಲಾಸಿನಲ್ಲೇ ಮನೆಯಲ್ಲಿರುವ ಕಾರ್‌ ಡ್ರೈವರ್ ಸಹಾಯದಿಂದ , ಪ್ರಮೋದ್ ಕಾರ್ ಕಲ್ತಿದ್ರಂತೆ.

- Advertisement -

Latest Posts

Don't Miss