Sunday, September 8, 2024

Latest Posts

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ : ಪ್ರೀಕ್ವಾರ್ಟರ್‍ಗೆ ಲಕ್ಷ್ಯ, ಪ್ರಣಾಯ್

- Advertisement -

ಲಂಡನ್: ಅಗ್ರ ಆಟಗಾರ ಎಚ್.ಎಸ್.ಪ್ರಣಾಯ್ ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್‍ನಲ್ಲಿ  ವಿಶ್ವದ 2ನೇ ರ್ರಾಂಕ್ ಅಟಗಾರ ಕೆಂಟೊ ಮೊಮೊಟಾ ಅವರನ್ನು ಸೋಲಿಸಿದ್ದಾರೆ.

ಎರಡನೆ ಸುತ್ತಿನಲ್ಲಿ ಎಚ್.ಎಸ್.ಪ್ರಣಾಯ್ ಎರಡನೆ ಸುತ್ತಿನಲ್ಲಿ ವಿಶ್ವದ ನಂ.2 ನೇ ಆಟಗಾರ ಕೆಂಟೊ ಮೊಮೆಂಟೊ ವಿರುದ್ಧ 21-17, 21-16 ಅಂಕಗಳಿಂದ ಗೆದ್ದರು.

ಮತ್ತೊಂದು ಸಿಂಗಲ್ಸ್ ವಿಭಾಗದಲ್ಲಿ ಮಾಜಿ ನಂ.1 ಆಟಗಾರ ಕಿದಂಬಿ ಶ್ರೀಕಾಂತ್ ಸೋಲು ಕಂಡರೆ ಲಕ್ಷ್ಯ ಸೇನ್ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದಾರೆ.

12ನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್ ಚೀನಾದ ಶ್ರೇಯಾಂಕಿತ ಆಟಗಾರ ಜಾಹೊ ಜನ್ ಪೆಂಗ್ ವಿರುದ್ಧ 21-9,21-17 ಅಂಕಗಳಿಂದ ಸೋತರು. 2021ರ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿದ್ದರು.

ಜಾಹೊ ಪೆಂಗ್ ವಿರುದ್ಧ ಶ್ರೀಕಾಂತ್ ಮೂರನೇ ಬಾರಿ ಸೋತಿದ್ದಾರೆ.ಮತ್ತೊಂದು ಪುರುಷರ ಸಿಂಗಲ್ಸ್ ನಲ್ಲಿ ಲಕ್ಷ್ಯ ಸೇನ್ ಸ್ಪೇನ್ ಲೂಹಿಸ್ ಎನ್ರಿಕ್ ಪೆನಾಲ್ವರ್ ವಿರುದ್ಧ 21-17, 21-10 ಅಂಕಗಳಿಂದ  ಗೆದ್ದು ಪ್ರೀ ಕ್ವಾರ್ಟರ್ಗೆ ಪ್ರವೇಶ ಪಡೆದರು. ಮಹಿಳಾ ಡಬಲ್ಸ್ ನಲ್ಲಿ ಗಾಯತ್ರಿ ಗೋಪಿಚಂದ್ ಜಾಲಿ ಟ್ರೆಸ್ಸಾ ಸೋಲು ಕಂಡಿದ್ದಾರೆ.

 

 

 

 

- Advertisement -

Latest Posts

Don't Miss