Saturday, October 5, 2024

Latest Posts

‘ರಾಜೀನಾಮೆ ಕೊಟ್ರೆ ಸಿಎಂ ಕೂಡ ಮಾತುಕೇಳ್ತಾರೆ, ಅವರಪ್ಪಾನೂ ಕೇಳ್ತಾರೆ’- ಸಿಎಂ ವಿರುದ್ಧ ಸ್ವಾಮೀಜಿ ಕಿಡಿ

- Advertisement -

ಬೆಂಗಳೂರು: ರಾಜೀನಾಮೆ ಕೊಟ್ಟು ಸರ್ಕಾರವನ್ನ ಉರುಳಿಸಿ ಅಂತ ವಾಲ್ಮೀಕಿ ಸಮಾಜದ ಪ್ರಸನ್ನಾನನಂದ ಪುರಿ  ಸ್ವಾಮೀಜಿ ಹೇಳಿಕೆ ನೀಡೋ ಮೂಲಕ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕುರಿತಾಗಿ ಇಂದು ವಿಧಾನಸೌಧದೆರುರು ನಡೆಯುತ್ತಿರೋ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪ್ರಸನ್ನಾನಂದಪುರಿ ಸ್ವಾಮೀಜಿ, ಕಾಂಗ್ರೆಸ್ ನ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರ ಉರುಳಿಸಿ.ನನ್ನ ಕೈಗೆ ರಾಜೀನಾಮೆ ಕೊಡಿ ಅಂತ ಹೇಳಿದ್ರು. ಅಲ್ಲದೆ ವಾಲ್ಮೀಕಿ ಸಮುದಾಯದ 8 ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ. ಒಂದು ವೇಳೆ ಅವರು ರಾಜೀನಾಮೆ ಕೊಡೋಕೆ ಮುಂದಾದ್ರೆ ಸರ್ಕಾರ ಉಳಿಸಿಕೊಳ್ಳೋದಕ್ಕೆ ಕಾಲು ಹಿಡೀತಿರಿ ಅಂತ ಸಿಎಂ ಕುಮಾರಸ್ವಾಮಿ ವಿರುದ್ಧ ಸ್ವಾಮೀಜಿ ಹರಿಹಾಯ್ದರು.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸೋ ನಿಟ್ಟಿನಲ್ಲಿ ಸಮುದಾಯದ ಶಾಸಕರು ರಾಜೀನಾಮೆಗೆ ಮುಂದಾದ್ರೆ ಹೈಕಮಾಂಡ್ ಫೋನ್ ಮಾಡದೇ ಇದ್ರೂ ಸಿಎಂ ಕುಮಾರಸ್ವಾಮಿಯವರೇ, ಅಣ್ಣಾ ನಿಮಗೇನು ಬೇಕು ಹೇಳಿ ಅಂತ ಫೋನ್ ಮಾಡ್ತಾರೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಕೂಡ ಮಾತು ಕೇಳ್ತಾರೆ, ಅವರಪ್ಪಾನೂ ಮಾತು ಕೇಳ್ತಾರೆ ಅಂತ ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ರು.

ಸಿದ್ದು ಅಸಲಿ ಆಟ ಈಗ ಶುರುವಾಗುತ್ತಾ..? ಸಿದ್ದರಾಮಯ್ಯ ಮಾಡಿರೋ ಮಾಸ್ಟರ್ ಪ್ಲ್ಯಾನ್ ಏನು..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=H5kgDBoq3y0

- Advertisement -

Latest Posts

Don't Miss