ಬಾಲಿವುಡ್ ಸಿನಿಮಾಗಳು ಇತ್ತೀಚೆಗೆ ಸೌಂಡ್ ಮಾಡೋದೇ ಕಡಿಮೆಯಾಗಿದೆ. ಸೂಪರ್‌ಸ್ಟಾರ್‌ಗಳ ಸಿನಿಮಾಗಳೂ ಕೂಡ ಬಾಕ್ಸಾಫೀಸಲ್ಲಿ ಗೆಲ್ಲೋದು ಕಷ್ಟವಾಗ್ತಿದೆ. ಆದ್ರೆ ಗೆಲ್ತಾ ಇರೋ ಒಬ್ಬರೇ ಸ್ಟಾರ್ ಅಂದ್ರೆ ಅಕ್ಷಯ್‌ಕುಮಾರ್. ಇದೇ ಕಾರಣಕ್ಕೆ ರಜಿನಿಕಾಂತ್ ಅಭಿನಯದ ರೋಬೋ ೨.೦ ಸಿನಿಮಾದ ವೇದಿಕೆ ಏರಿದ ಸಲ್ಮಾನ್ ಖಾನ್ ಒಂದು ಮಾತು ಹೇಳಿದ್ರು, ಬಾಲಿವುಡ್ ನಟರು ನಾವೆಲ್ಲಾ ಸಿನಿಮಾ ಮಾಡ್ತಿದ್ದೀವಿ ಆದ್ರೆ ಅಕ್ಷಯ್ ಕುಮಾರ್ ಮಾತ್ರ ಪ್ರತೀ ಸಿನಿಮಾಗೂ ಬೆಳೆಯುತ್ತಾ ಇದ್ದಾರೆ ಅಂತ. ಹೌದು ಈಗ ಅಕ್ಕಿ ಆಯ್ಕೆ ಮಾಡಿಕೊಳ್ಳೋ ಸಬ್ಜೆಕ್ಟ್ಗಳೇ ಹಾಗರ‍್ತವೆ. ಈಗ ಅಕ್ಷಯ್ ಮಾಡಿರೋ ಸಾಮ್ರಾಟ್ ಪೃಥ್ವಿರಾಜ್ ಚೌಹಾನ್ ಸಿನಿಮಾ ಬಗ್ಗೆ ಕನ್ನಡದ ಒಳ್ಳೆ ಹುಡ್ಗ ಪ್ರಥಮ್ ಒಳ್ಳೆ ಮಾತಾಡಿದ್ದಾರೆ.
ಒಳ್ಳೆ ಹುಡ್ಗ ಪ್ರಥಮ್ ದೇಶಭಕ್ತಿಯ ಸಿನಿಮಾಗಳನ್ನು ಮೆಚ್ಚಿಕೊಳ್ತಾರೆ. ಹಲವು ಬಾರಿ ಸಾಮಾಜಿಕ ಕಳಕಳಿಯ ವಿಷಯಗಳಲ್ಲಿ ಮುಂದಾಗಿ ಸಹಾಯಕ್ಕೆ ನಿಲ್ಲೋ ಪ್ರಥಮ್ ಇತ್ತೀಚೆಗೆ ಕೊಲೆಯಾದ ಹರ್ಷ ಅವರ ಕುಟಂಬಕ್ಕೆ ಧನಸಹಾಯ ಮಾಡಿದ್ದರು. ಕೊರೋನಾ ಬಡವರಿಗೆ ಸಂಕಷ್ಟದಲ್ಲಿದ್ದವರಿಗೆ ನೂರಾರು ರೇಷನ್ ಕಿಟ್‌ಗಳನ್ನು ಕೊಡುವ ಮೂಲಕ ನೆರವಾಗಿದ್ರು. ನಟಭಯಂಕರ ಸಿನಿಮಾದ ರಿಲೀಸ್ ಹೊಸ್ತಿಲಲ್ಲಿರುವ ಪ್ರಥಮ್ ಸದ್ಯ ಚಿತ್ರಕ್ಕಾಗಿ ಅದ್ಧೂರಿ ವಿಎಫ್‌ಎಕ್ಸ್ ಕೆಲಸ ಮುಗಿಸಿದ್ದಾರೆ.
ರಜಪೂತ ಸಾಮ್ರಾಟ್ ಪೃಥ್ವಿರಾಜ್ ಚೌಹಾನ್ ಮೊಘಲರನ್ನು ಹಳ್ದಿಘಾಟ್ ಯುದ್ಧದಲ್ಲಿ ಸದೆಬಡಿದ ಇತಿಹಾಸ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಇತಿಹಾಸದ ಪಠ್ಯದಲ್ಲಿ ಒಂದು ಪುಟವಾಗಿ ಹೋದ ಮಹಾವೀರನನ್ನು ನೆನಪಿಸುವ ಈ ಸಿನಿಮಾವನ್ನು ನೋಡಿ ದೇಶದ ಇತಿಹಾಸದ ಬಗ್ಗೆ ಹೆಮ್ಮೆಪಡಿ ಅಂತ ಹೇಳಿದ್ದಾರೆ ಬಿಗ್‌ಬಾಸ್ ವಿನ್ನರ್ ಪ್ರಥಮ್. ಅಷ್ಟು ಮಾತ್ರವಲ್ಲ ಸಾಮ್ರಾಟ್ ಪೃಥ್ವಿರಾಜ್ ಚೌಹಾನ್ ಚಿತ್ರವನ್ನು ಎಷ್ಟು ಮೆಚ್ಚಿಕೊಂಡಿದ್ದಾರೆ ಅಂದ್ರೆ ತಮ್ಮ ವಾಟ್ಸಾö್ಯಪ್ ಡಿಪಿಯಲ್ಲೂ ಅದೇ ಫೋಟೋ ಹಾಕಿಕೊಂಡಿದ್ದಾರೆ.