ಹಾಸನ- ಸೋತ ಬಳಿಕ ಮೊದಲ ಬಾರಿ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಮಾಜಿ ಶಾಸಕ ಪ್ರೀತಂಗೌಡ, ಒಂದು ವರ್ಗ ನಮ್ಮಪರವಾಗಿ ಇಲ್ಲಾ ಅವರಿಗೆ ನಾನು ಯಾರೆಂದು ತೋರಿಸುತ್ತೇನೆಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ್ದಾರೆ.
ನಾನು ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿಲ್ಲ. ನಾನು ಹೇಳಿರೋದು ಕಾಂಗ್ರೆಸ್ ಗೆ ಒಂದು ವರ್ಗ ಬೆಂಬಲ ನೀಡುತ್ತಿತ್ತು. ಅದು ಈ ಬಾರಿ ಬದಲಾಗಿದೆ ಎಂದು ಹೇಳಿದ್ದೆ. ಆ ವರ್ಗ ಎನ್ನೊ ಮಾತಿನ ಹಿಂದೆ, ಎಲ್ಲಾ ಸಮುದಾಯದ, ಬಡವ ಶ್ರೀಮಂತ ಎಲ್ಲರೂ ಇದಾರೆ. ತಾವು ಮುಸ್ಲಿಂ ರನ್ನು ಗುರಿಯಾಗಿಸಿ ಹೇಳಿಕೆ ನೀಡಿಲ್ಲ ಎಂದು ಪ್ರೀತಂಗೌಡ ಹೇಳಿದ್ದಾರೆ.
ನಾನು ಏನೋ ಆಗಲು ಬಂದವನಲ್ಲ,ಇದಿಲ್ಲ ಅಂದರೆ ಇನ್ನೊಂದು ಆಗಬೇಕು ಎನ್ನೋ ಕಾತರ ನನಗಿಲ್ಲ. ಅಧಿಕಾರ ಇದ್ದರೆ ಮಾತ್ರ ಜನಸೇವೆ ಮಾಡಬಹುದು ಎನ್ನೋ ನಂಬಿಕೆ ಕೂಡ ನನ್ನದಲ್ಲ. ಹಾಸನದ ಅಭಿವೃದ್ಧಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ನಾನು ಹಾಸನ ಕ್ಷೇತ್ರದಲ್ಲಿ ತಳಪಾಯಹಾಕಿ, ಗೋಡೆಕಟ್ಟಿ, ಆರ್.ಸಿಸಿ ಹಾಕಿದ್ದೇನೆ ಎಂದು ಹೇಳಿದ್ದಾರೆ.
ಹಾಲಿ ಶಾಸಕರು ಆವೇಷಕ್ಕೆ ಒಳಗಾಗದೆ ಸ್ವಂತ ವಿವೇಚನಾ ಶಕ್ತಿಯಲ್ಲಿ ಕೆಲಸ ಮಾಡಲಿ ಎಂದು ಶುಭ ಕೋರುತ್ತೇನೆ. ಮೂರು ವರ್ಷದ ಕೆಲಸವನ್ನು ಮೂರೇ ದಿನದಲ್ಲಿ ಮಾಡ್ತಿನಿ ಎಂದು ಅಧಿಕಾರಿಗಳು, ಗುತ್ತಿಗೆದಾರರ ಜೊತೆ ಮಾತಾಡೋದು ಬೇಡಾ. ಅಕ್ಕ ಪಕ್ಕದ ಕ್ಷೇತ್ರದ ಯಾರು ಏನೆ ಹೇಳಿದರೂ ಕೇಳದೆ ಸ್ವಂತ ವಿವೇಚನೆ ಬಳಸಲಿ ಎಂದು ಪ್ರೀತಂಗೌಡ, ಸ್ವರೂಪ್ ಗೌಡರಿಗೆ ಸಲಹೆ ನೀಡಿದ್ದಾರೆ.
‘ಮುಸ್ಲಿಂ ಬಂಧುಗಳನ್ನು ಅತ್ಯಂತ ಹೆಚ್ಚು ಪ್ರೀತಿಸೊ ವ್ಯಕ್ತಿ ಪ್ರೀತಂಗೌಡ’