Friday, March 29, 2024

Latest Posts

ದಾನದ ಮಹತ್ವವೇನು..? ಎಂಥವರು ದಾನ ಮಾಡಬೇಕು..? ಎಂಥವರು ದಾನ ಮಾಡಬಾರದು..?

- Advertisement -

ಎಲ್ಲ ಧರ್ಮದಲ್ಲೂ ದಾನಕ್ಕೆ ಮಹತ್ತರ ಸ್ಥಾನವಿದೆ. ಏಕೆಂದರೆ, ದಾನವೆಂಬುದು ಒಂದು ಪುಣ್ಯದ ಕೆಲಸ. ಇದರಿಂದ ಇನ್ನೊಬ್ಬರ ಜೀವನ ಉದ್ಧಾರವಾಗಬಹುದು. ಇನ್ನೊಬ್ಬರ ಹೊಟ್ಟೆ ತುಂಬಬಹುದು. ಆದರೆ ದಾನ ಮಾಡುವುದಕ್ಕೂ ಕೆಲ ನಿಯಮಗಳಿದೆ. ಗರುಡ ಪುರಾಣದ ಪ್ರಕಾರ, ಕೆಲವರು ದಾನ ಮಾಡಬಹುದು. ಇನ್ನು ಕೆಲವರು ದಾನ ಮಾಡಬಾರದು. ಹಾಗಾದ್ರೆ ಯಾರು ದಾನ ಮಾಡಬೇಕು..? ಯಾರು ದಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ದಾನ ಮಾಡಿ ದರಿದ್ರನಾಗಬೇಡ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಗರುಡ ಪುರಾಣದಲ್ಲೂ ಈ ರೀತಿಯ ಉಲ್ಲೇಖವಿದೆ. ದಾನ ಮಾಡುವಾಗ, ಇನ್ನೊಬ್ಬರು ತನ್ನನ್ನು ಹೊಗಳಲಿ, ತನ್ನ ಬಳಿ ಎಷ್ಟೆಲ್ಲ ದುಡ್ಡಿದೆ ಅನ್ನುವುದು ಇನ್ನೊಬ್ಬರಿಗೆ ಗೊತ್ತಾಗಲಿ ಎನ್ನುವ ಅಹಂಕಾರ, ಅಥವಾ ಪ್ರತಿಷ್ಠೆಯ ಸಲುವಾಗಿ, ದಾನ ಮಾಡಬೇಡಿ. ಹೀಗೆ ಮಾಡಿದ್ದಲ್ಲಿ, ನೀವು ದಾನ ಮಾಡಿಯೂ ಪ್ರಯೋಜನವಾಗುವುದಿಲ್ಲ. ದಾನ ಮಾಡುವುದಿದ್ದರೂ, ಎಡಗೈಗೆ ಗೊತ್ತಾಗದ ಹಾಗೆ, ದಾನ ಮಾಡಬೇಕು. ಅಂದರೆ, ದಾನ ಮಾಡಿದ್ದನ್ನ ಎಲ್ಲಿಯೂ ಹೇಳಿಕೊಳ್ಳಬಾರದು.

ಇನ್ನು ನಿಮ್ಮ ಬಳಿ ಹೆಚ್ಚು ಹಣವಿಲ್ಲ. ಆದರೂ ನೀವು ದಾನ ಮಾಡುತ್ತಿದ್ದಲ್ಲಿ, ಯೋಚಿಸಿ ದಾನ ಮಾಡಿ. ಏಕೆಂದರೆ, ಬಡವ ದಾನ ಮಾಡಿದರೆ, ಅವನು ಮತ್ತಷ್ಟು ಬಡವನಾಗುತ್ತಾನೆ. ಹಾಗಾಗಿ ನೀವು ದಾನ ಮಾಡಿಯೂ, ನೆಮ್ಮದಿಯಾಗಿ ಬದುಕುತ್ತೀರಿ ಎಂಬುವಂತಿದ್ದರೆ ಮಾತ್ರ ದಾನ ಮಾಡಿ. ಹಿರಿಯರ ಮಾತಿನಂತೆ ದಾನ ಮಾಡಿ ದರಿದ್ರರಾಗಬೇಡಿ. ಅದೇ ರೀತಿ ದುಡ್ಡಿದ್ದಾಗ, ಜಿಪುಣತನ ಮಾಡದೇ, ನಿರ್ಗತಿಕರಿಗೆ ನಿಮ್ಮ ಕೈಲಾದಷ್ಟು ದಾನ ಮಾಡಿ.

ನಿಮಗೆ ದಾನ ಮಾಡಲೇಬೇಕೆಂಬ ಮನಸ್ಸಿದ್ದಲ್ಲಿ,. ನೀವು ಗಳಿಸುವ ಹಣದಲ್ಲಿ, ಕೊಂಚ ಭಾಗ ದಾನ ಮಾಡಿ, ಕೊಂಚ ಭಾಗ ನಿಮ್ಮ ಖರ್ಚಿಗಾಗಿ ತೆಗೆದಿಡಿ, ದೊಡ್ಡ ಭಾಗ, ನಿಮ್ಮ ಭವಿಷ್ಯಕ್ಕಾಗಿ ಉಳಿಸಿ. ಆಗ ನೀವು ಉದ್ಧಾರವಾಗಬಹುದು.

ಬ್ರಾಹ್ಮಿ ಮುಹೂರ್ತದಲ್ಲಿ ಇಂಥ ತಪ್ಪನ್ನ ಎಂದಿಗೂ ಮಾಡಬೇಡಿ..

ಇಂಥ ಜನರನ್ನು ಎಂದಿಗೂ ಮನೆಗೆ ಬರಮಾಡಿಕೊಳ್ಳಬೇಡಿ..

ನಿಮ್ಮ ಹಣೆಬರದಲ್ಲಿರುವ ಈ 5 ವಿಚಾರವನ್ನು ಯಾರೂ ಬದಲಾಯಿಸಲಾಗುವುದಿಲ್ಲ..

- Advertisement -

Latest Posts

Don't Miss