ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು ಅವರು ಮೊದಲವರಾಗಿದ್ದು, 1970ರಲ್ಲಿ ರಾಷ್ಟ್ರಪತಿ ವಿ.ವಿ. ಗಿರಿ ಭೇಟಿ ನೀಡಿದ ನಂತರ ಶಬರಿಮಲೆಗೆ ಬಂದ ಎರಡನೇ ರಾಷ್ಟ್ರಪತಿಯಾಗಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಪಂಪಾ ತಲುಪಿದ ಮುರ್ಮು, ಪಂಪಾ ನದಿಯಲ್ಲಿ ಕಾಲು ತೊಳೆದು ಗಣಪತಿ ದೇಗುಲ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದರು. ಮೇಲ್‌ಶಾಂತಿ ವಿಷ್ಣು ನಂಬೂದರಿಯವರಿಂದ ಇರುಮುಡಿ ಕಟ್ಟಿಸಿಕೊಂಡು, ಕಪ್ಪು ಸೀರೆ ಧರಿಸಿ ದರ್ಶನಕ್ಕೆ ತೆರಳಿದರು.
ನಂತರ ವಿಶೇಷ ವಾಹನದಲ್ಲಿ ಸನ್ನಿಧಾನ ತಲುಪಿ, 18 ಮೆಟ್ಟಿಲುಗಳನ್ನು ಏರಿ ಶ್ರೀ ಅಯ್ಯಪ್ಪನ ದರ್ಶನ ಪಡೆದರು. ದೇವಸ್ವಂ ಸಚಿವ ವಿ.ಎನ್. ವಾಸವನ್ ಮತ್ತು ಟಿಡಿಬಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರಿಂದ ಸ್ವಾಗತಿಸಲ್ಪಟ್ಟ ರಾಷ್ಟ್ರಪತಿಗೆ ತಂತ್ರಿ ಕಂದರಾರು ಮಹೇಶ್ ಮೊಹನಾರುವರಿಂದ ಪೂರ್ಣಕುಂಭ ಸ್ವಾಗತ ಲಭಿಸಿತು. ದರ್ಶನದ ಬಳಿಕ ಅವರು ಮಲಿಕಪ್ಪುರಂ ಸೇರಿದಂತೆ ಸುತ್ತಮುತ್ತಲಿನ ದೇವಾಲಯಗಳಿಗೂ ಭೇಟಿ ನೀಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ