ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಆತ್ಮೀಯ ಗೆಳೆತನ ಹೊಂದಿದ್ದರು ಪಂಚಭಾಷ ತಾರೆ ಪ್ರಿಯಾಮಣಿ. ಪುನೀತ್ ನಿಧನದ ಕಾರಣ, ಪುನೀತ್ ಹಾಗೂ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಹಿಂದೆ ಅಪ್ಪು ಜೊತೆಗೆ ‘ಅಣ್ಣಾ ಬಾಂಡ್’ ಮತ್ತು ‘ರಾಮ್’ ಚಿತ್ರಗಳಲ್ಲಿ ನಟಿ ಪ್ರಿಯಾಮಣಿ ಅಭಿನಯಸಿದ್ದರು. ಸಿನಿಮಾಗಳ ಹೊರತಾಗಿ ಅಪ್ಪು ಜೊತೆಗೆ ಉತ್ತಮ ಭಾಂದವ್ಯವನ್ನು ಪ್ರಿಯಾಮಣಿ ಹೊಂದಿದ್ದರು. ಪುನೀತ್ ಗೆ ಪ್ರಿಯಾಮಣಿ ಡ್ಯಾನ್ಸ್ ಎಂದರೆ ಬಹಳ ಇಷ್ಟವಾಗಿತ್ತು. ಈ ಬಗ್ಗೆ ಒಮ್ಮೆ ‘ರಾಮ್’ ಚಿತ್ರದ ಪ್ರಚಾರ ವೇಳೆ ಪುನೀತ್ ಹೇಳಿದ್ದರು.
ಪ್ರಿಯಾಮಣಿ ಜೊತೆಗೆ ಪತಿ ಮುಸ್ತಫಾ ಸಹ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಇಬ್ಬರೂ ಶಿವಣ್ಣನವರೊಟ್ಟಿಗೆ ಮಾತನಾಡಿದರು. ಇನ್ನೂ ಇದೇ ಸಮಯದಲ್ಲಿ ಪಂಚಭಾಷಾ ನಟಿ, ಹಿರಿಯ ಕಲಾವಿದೆ ಗೀತಾ ಅವರು ಸಹ ಪುನೀತ್ ಹಾಗೂ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಗೀತಾ ಅವರು ಹಲವು ಸಿನಿಮಾಗಳಲ್ಲಿ ನಟಸಾರ್ವಭೌಮ ರಾಜ್‌ಕುಮಾರ್ ಅವರೊಟ್ಟಿಗೆ ನಟಿಸಿದ್ದಾರೆ.
ಅಪ್ಪು ಅಕಾಲಿಕ ನಿಧನರಾದ ಬಳಿಕ ಅಂತಿಮ ದರ್ಶನಕ್ಕೆ ಪ್ರಿಯಾಮಣಿ ಬರಲಾಗಿರಲಿಲ್ಲವಾದ್ದರಿಂದ ಈಗ ಬಂದಿದ್ದಾರೆ ಹಾಗೂ ಗೀತಾ ಸಹ ಅಂದು ಬರಲಾಗಿರಲಿಲ್ಲ. ಪುನೀತ್ ಜೊತೆ ನಟಿಸಿದ್ದ ಅನೇಕ ನಟಿಯರು, ಅಪ್ಪು ಜೊತೆ ಒಳ್ಳೆಯ ಭಾಂದವ್ಯ ಹೊಂದಿದ್ದರು. ರಮ್ಯಾ, ರಕ್ಷಿತಾ, ಮಿಲನದ ನಟಿ ಪಾರ್ವತಿ, ಮೀರಾ ಜಾಸ್ಮಿನ್, ಪ್ರಿಯಾಮಣಿ, ರಾಧಿಕಾ ಪಂಡಿತ್, ರಚಿತಾ ರಾಮ್ ಇನ್ನೂ ಹಲವರು ಪುನೀತ್‌ಗೆ ಆತ್ಮೀಯರಾಗಿದ್ದರು. ಅಪ್ಪು ನಿಧನದ ಬಳಿಕ ಅಂತಿಮ ದರ್ಶನಕ್ಕೆ ಬರಲಾಗದ ಹಲವು ಸ್ಟಾರ್ ನಟ-ನಟಿಯರು ಈಗ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಬೇಟಿನೀಡಿ ಸಾಂತ್ವಾನ ಹೇಳುತ್ತಿದ್ದಾರೆ. ತೆಲುಗಿನ ನಟ ನಾಗಾರ್ಜುನ, ನಟ ರಾಮ್ ಚರಣ್ ತೇಜ, ಪುನೀತ್ ಅವರ ಆತ್ಮೀಯ ಗೆಳೆಯರಾಗಿದ್ದ ನಟ ಸೂರ್ಯ, ಶಿವಕಾರ್ತಿಕೇಯ, ರಾಜೇಂದ್ರ ಪ್ರಸಾದ್, ನಕ್ಕೀರನ್ ಗೋಪಾಲ್ ಇನ್ನೂ ಹಲವರು ಪುನೀತ್ ಹಾಗೂ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು.