National news:
Feb:25: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಛತ್ತೀಸಗಡಕ್ಕೆ ಆಗಮಿಸುವ ಮುನ್ನ ವಿಮಾನ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಕೆಂಪು ಗುಲಾಬಿ ಹೂವುಗಳ ದಪ್ಪನೆಯ ಹಾಸು ನಿರ್ಮಿಸಲಾಗಿತ್ತು. ಅದರ ಎರಡೂ ಬದಿಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಪಕ್ಷದ ಬಾವುಟಗಳೊಂದಿಗೆ ಘೋಷಣೆಗಳನ್ನು ಕೂಗುವ ವಿಡಿಯೋ ವೈರಲ್ ಆಗಿದೆ.
6,000 ಕೆಜಿಗೂ ಅಧಿಕ ತೂಕದ ಗುಲಾಬಿ ಹೂವುಗಳನ್ನು ಸುಮಾರು ಎರಡು ಕಿಮೀವರೆಗೂ ರಸ್ತೆಯನ್ನು ಅಲಂಕರಿಸಲು ಬಳಸಲಾಗಿತ್ತು. ಈ ಮಾರ್ಗಗಳ ಉದ್ದಕ್ಕೂ, ವರ್ಣರಂಜಿತ ಸಾಂಪ್ರದಾಯಿಕ ದಿರಿಸುಗಳನ್ನು ತೊಟ್ಟ ಜಾನಪದ ಕಲಾವಿದರು ತಮ್ಮ ಕಲಾವಂತಿಕೆ ಪ್ರದರ್ಶಿಸುವುದು ಕಂಡುಬಂದಿದೆ.ಇದೀಗ ಈ ವೀಡಿಯೋ ಫುಲ್ ವೈರಲ್ ಆಗುತ್ತಿದೆ.
#WATCH | Chhattisgarh: Flower petals were laid on the streets to welcome Congress general secretary Priyanka Gandhi Vadra and other Congress leaders in Raipur for the 85th Plenary Session of the party. pic.twitter.com/Z4hozwKDl8
— ANI MP/CG/Rajasthan (@ANI_MP_CG_RJ) February 25, 2023