ಪ್ರೊ ಕಬಡ್ಡಿ ಸೀಸನ್ 8 (Pro Kabaddi Season 8) ಪ್ರಾರಂಭವಾಗಿ ಈಗಾಗಲೇ ಮುಕ್ಕಾಲು ಭಾಗ ಪಂದ್ಯಗಳು ಮುಗಿದಿದೆ. ನಿನ್ನೆ ಎರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯ ಗುಜರಾತ್ ಜೈಂಟ್ಸ್ vs ಪಿಂಕ್ ಪ್ಯಾಂಥರ್ಸ್ (Gujarat Giants vs Pink Panthers) ನಡುವೆ ನಡೆದಿದ್ದು 31- 36 ಮೂಲಕ ಗುಜರಾತ್ ಜೈಂಟ್ಸ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಐದು ಅಂಕಗಳ ಸೋಲನ್ನು ಅನುಭವಿಸಿತು. ಇನ್ನು ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ (Bengals Warriors) ಹಾಗೂ ತೆಲುಗು ಟೈಟನ್ಸ್ (Telugu Titans) ನಡುವೆ ಕಾದಾಟ ನಡೆದಿದ್ದು 32-32 ಅಂಕಗಳ ಮೂಲಕ ಟೈಮ್ ಆಗಿದೆ. ಇಂದು ಸಹ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ತಮಿಳ್ ತಲೈವಾಸ್ vs ಹರಿಯಾಣ ಸ್ಟೀಲರ್ಸ್ (Tamil Talaivas vs Haryana Steelers) ತಂಡಗಳ ನಡುವೆ ನಡೆಯಲಿದೆ. ತಮಿಳ್ ತಲೈವಾಸ್ ಒಟ್ಟು 16 ಪಂದ್ಯಗಳನ್ನಾಡಿದ್ದು ಐದು ಪಂದ್ಯಗಳನ್ನು ಗೆದ್ದು ಇದರಲ್ಲಿ ಸೋತು 45 ಅಂಕಗಳೊಂದಿಗೆ ಎಂಟನೇ ಸ್ಥಾನ ಪಡೆದುಕೊಂಡಿದೆ. ತಮಿಳ್ ತಲೈವಾಸ್ ಪ್ಲೇ ಆಫ್ (Play of) ಹಂತಕ್ಕೆ ಹೋಗಬೇಕಾದರೆ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಇನ್ನು ಹರಿಯಾಣ ಸ್ಟೀಲರ್ಸ್ 17 ಪಂದ್ಯಗಳನ್ನು ಹಾಡಿದ್ದು ಎಂಟರಲ್ಲಿ ಗೆದ್ದು 6ರಲ್ಲಿ ಸೋತು 53 ಅಂಕಗಳಿಸಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಎರಡನೇ ಪಂದ್ಯ ಯು ಮುಂಬಾ vs ಪಟ್ನಾ ಪೈರೇಟ್ಸ್ (U Mumba vs Patna Pirates) ವಿರುದ್ಧ ನಡೆಯಲಿದ್ದು ಯು ಮುಂಬೈ 16 ಪಂದ್ಯಗಳನ್ನಾಡಿದ್ದು,6ರಲ್ಲಿ ಗೆದ್ದು, ಐದು ಪಂದ್ಯಗಳಲ್ಲಿ ಸೋತು 48 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಇನ್ನು ಪಟ್ನಾ ಪೈರೇಟ್ಸ್ ತಂಡದವರು 16 ಪಂದ್ಯಗಳನ್ನಾಡಿದ್ದು 11 ಪಂದ್ಯದಲ್ಲಿ ಗೆದ್ದು ಕೇವಲ 4 ಪಂದ್ಯಗಳಲ್ಲಿ ಸೋತು 60 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇಂದು ಯಾವ ತಂಡಗಳು ಗೆಲ್ಲುತ್ತವೆ ಎಂಬುದನ್ನು ನಾವು ಕಾದುನೋಡಬೇಕಿದೆ.

