Wednesday, October 15, 2025

Latest Posts

ಕಾಡಾನೆ ಸಮಸ್ಯೆ ಗಂಭೀರವಾಗಿ ಪರಿಗಣಿಸದಿದ್ದರೆ ಸಿಎಂ ವಿರುದ್ಧ ಪ್ರತಿಭಟನೆ…!

- Advertisement -

ಸಕಲೇಶಪುರ: ಬಿಜೆಪಿ ಜನಸಂಕಲ್ಪ ಯಾತ್ರೆಗೆ ಡಿ.13ರಂದು ತಾಲೂಕಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಡಾನೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಎದುರಾಗುವ ಸಾಧ್ಯತೆಯಿದೆ.

ಶಾನ್ವಿ ಶ್ರೀವತ್ಸ ಬರ್ತಡೇ ಸೆಲೆಬ್ರೆಷನ್…!

ಕಾಡಾನೆ ಸಂತ್ರಸ್ತರ ಹೋರಾಟ ಸಮಿತಿಯ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ಕಾಡಾನೆ ಟಾಸ್ಕ್ ಪೋರ್ಸ್ ಪ್ರಾರಂಭವಾಗಿದೆ. ಇದರಿಂದ ತೋಟ ಗದ್ದೆಗಳಲ್ಲಿ ದಾಂದಲೆ ಮಾಡುವ ಕಾಡಾನೆಗಳನ್ನು ಓಡಿಸಲು ಅನುಕೂಲವಾಗುತ್ತದೆಂದು ಟಾಸ್ಕ್ ಪೋರ್ಸ್ ನ ಮೊಬೈಲ್ ಸಂಖ್ಯೆಯನ್ನು ಎಲ್ಲೆಡೆ ಶೇರ್ ಮಾಡಿದ್ದೆವು. ಇದೀಗ ಈ ಸಂಖ್ಯೆ ಕಾರ್ಯನಿರ್ವಹಿಸುತ್ತಿಲ್ಲದಿರುವುದು ಟಾಸ್ಕ್ ಪೋರ್ಸ್ ನ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಮಂಗಳವಾರ ಸಂಜೆ ಕಾಡಾನೆ ಟಾಸ್ಕ್ ಪೋರ್ಸ್ ಕಚೇರಿಯನ್ನು ತರಾತುರಿಯಲ್ಲಿ ಆರಂಭಿಸಲಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ಮತ್ತು ಉದ್ಯೋಗಾವಕಾಶಗಳು.. FREE WEBINAR

ಕೂಡಲೇ ಸಮಸ್ಯೆಯನ್ನು ಬಗೆಹರಿಸಿಕೊಂಡು ಟಾಸ್ಕ್ ಪೋರ್ಸ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಮುಖ್ಯಮಂತ್ರಿಗಳ ಬಳಿಯೇ ಅರಣ್ಯ ಖಾತೆ ಇರುವುದರಿಂದ ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ, ಡಿ.12 ರಿಂದಲೇ‌ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.

- Advertisement -

Latest Posts

Don't Miss