ದೊಡ್ಡಬಳ್ಳಾಪುರ : ಡಾ. ಬಿಆರ್.ಅಂಬೇಡ್ಕರ್(Dr B .R. Ambedkar) ಅವರ ಭಾವ ಚಿತ್ರ ತೆಗೆಸಿದ ರಾಯಚೂರು ಜಿಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ(Raichur District Judge Mallikarjuna Gowda)ಅವರನ್ನು ಈ ಕೂಡಲೇ ಕಡ್ಡಾಯ ನಿವೃತ್ತಿಗೊಳಿಸಿ ಗಡಪಾರು ಮಾಡಬೇಕು ಎಂದು ಸಂವಿಧಾನ ರಕ್ಷಣೆಗಾಗಿ ನಾಗರೀಕ ವೇದಿಕೆ ದೊಡ್ಡಬಳ್ಳಾಪುರ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ನಂತರ ತಾಲೂಕಿನ ತಹಶಿಲ್ದಾರ್ ಮೋಹನ ಕುಮಾರಿ(Tahsildar Mohan Kumari)ಇವರಿಗೆ ಸಂವಿಧಾನ ರಕ್ಷಣೆಗಾಗಿ ನಾಗರೀಕ ವೇದಿಕೆ ವತಿಯಿಂದ ಮನವಿಗೆ ಪತ್ರವನ್ನು ನೀಡಿದರು. ನಂತರ ಮಾತನಾಡಿದ ಛಲವಾದಿ ಮಹಾಸಭ ಅಧ್ಯಕ್ಷ ಗುರುರಾಜಪ್ಪ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಕ್ಕೆ ಅವಮಾನ ಅನಾಗರಿಕತನದಿಂದ ನಡೆದುಕೊಂಡ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತು ನ್ಯಾಯ ಮಾಡಲು ಅರ್ಹರಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಸಂದರ್ಭದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರಿಕ ವೇದಿಕೆಯ ಸಂಚಾಲಕ ರಾಜುಸಣ್ಣಕ್ಕಿ, ತಾಲ್ಲೂಕು ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯ್ಕ್ ,ಪಿವಿಸಿ ಜಿಲ್ಲಾಧ್ಯಕ್ಷ ಗೂಳ್ಯ ಹನುಮಣ್ಣ ದಲಿತಪರ ಸಂಘಟನೆಯ ಎಲ್ಲಾ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.