Friday, August 29, 2025

Latest Posts

Public Tv ವಿದ್ಯಾಪೀಠ: ಶಿಕ್ಷಣ ಮೇಳದಲ್ಲಿ ಭಾಗವಹಿಸಿ, ನೆಚ್ಚಿನ ಕೋರ್ಸ್ ಸೇರಲು ಅತ್ಯುತ್ತಮ ಅವಕಾಶ

- Advertisement -

Bengaluru News: ಎಲ್ಲ ಪರೀಕ್ಷೆಗಳು ಮುಗಿದಿವೆ, ಫಲಿತಾಂಶವೂ ಬಂದಿದೆ. ಇದೀಗ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಾಲೇಜುಗಳ ಹುಡುಕಾಟ ನಡೆಸುತ್ತಿದ್ದಾರೆ. ಯಾವ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಸಿಗತ್ತೆ ಅನ್ನೋ ಕನ್‌ಫ್ಯೂಶನ್‌ನಲ್ಲಿದ್ದಾರೆ. ಆದರೆ ನಿಮಗೆ ಉತ್ತಮ ಶಿಕ್ಷಣ ಸಂಸ್ಥೆಗಳ ಆಯ್ಕೆ ಬೇಕಾಗಿದ್ದಲ್ಲಿ, ಒಂದೇ ಮಳಿಗೆಯಲ್ಲಿ ನೀವು ಈ ಬಗ್ಗೆ ಮಾಹಿತಿ ಪಡೆಯಲು ಬಯಸಿದ್ದಲ್ಲಿ ನೀವು ಕೂಡ ಕೂಡ ಪಬ್ಲಿಕ್ ಟಿವಿ ನೇತೃತ್ವದಲ್ಲಿ ನಡೆಯಲಿರುವ ಶಿಕ್ಷಣ ಮೇಳದಲ್ಲಿ ಭಾಗವಹಿಸಬಹುದು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಶನಿವಾರ ಮತ್ತು ಭಾನುವಾರದ ದಿನ ಈ ಶಿಕ್ಷಣ ಮೇಳ ನಡೆಯಲಿದೆ. ಈ ಮೇಳದಲ್ಲಿ 120ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿಯಾಗಲಿದೆ. ವಿದ್ಯಾಪೀಠ ಶೈಕ್ಷಣಿಕ ಮೇಳ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದ್ದು, ಪೋಷಕರು ಮತ್ತು ಮಕ್ಕಳಿಗೆ ಪ್ರವೇಶ ಉಚಿತವಿದೆ.

ಬೆಂಗಳೂರಿನ ಅರಮನೆ ಮೈದಾನದ ಗೇಟ್‌ ನಂ.4ರ ಗಾಯತ್ರಿ ವಿಹಾರದಲ್ಲಿ ಈ ಮೇಳ ನಡೆಯಲಿದೆ. ಈ ಮೇಳಕ್ಕೆ ಬರುವ ಮಕ್ಕಳು ಮತ್ತು ಪೋಷಕರು ತಮಗೆ ಬೇಕಾದ ಕೋರ್ಸ್ ಬಗ್ಗೆ ಮಾಹಿತಿ ಪಡೆಯಬಹುದು. ಈ ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ. ಇನ್ನು ನಿಮಗೆ ಯಾವುದಾದರೂ ಕೋರ್ಸ್ ಇಷ್ಟವಾಗಿದ್ದಲ್ಲಿ, ತಕ್ಷಣದಲ್ಲೇ ನೀವು ಆ ಕೋರ್ಸ್‌ಗೆ ಪ್ರವೇಶಾತಿ ಪಡೆಯಬಹುದು.

- Advertisement -

Latest Posts

Don't Miss