Kerala News: ಯಾವ್ಯಾವ ಥರದಲ್ಲಿ ಜನರನ್ನು ಯಾಮಾರಿಸುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಭಕ್ತರೊಬ್ಬರು ಪೂಜಾರಿಗೆ ಪೂಜೆಗೆಂದು ತಮ್ಮ ಚಿನ್ನದುಂಗುರ ಕೊಟ್ಟು ಮೋಸಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ. ತಿರುಮೂಳಿಕ್ಕುಳಂ ದೇವಸ್ಥಾನದಲ್ಲಿ ಪೂಜಾರಿಯೊಬ್ಬರು ಭಕ್ತನ ಬಳಿ ನೀವು 21 ದಿನ ನಿಮ್ಮ ಕೈಯಲ್ಲಿರುವ ನವರತ್ನ ಉಂಗುರುವನ್ನು ದೇವರ ಪಾದಗಳ ಬಳಿ ಇಟ್ಟು ಪೂಜೆ ಮಾಡಿದರೆ ನಿಮ್ಮ ಕಷ್ಟಗಳೆಲ್ಲವೂ ದೂರವಾಗುವುದು ಎಂದು ಹೇಳಿ ಅವರ ಕೈಲಿದ್ದ ನವರತ್ನ ಉಂಗುರುವನ್ನು ತೆಗೆದುಕೊಂಡಿದ್ದಾರೆ.
ಅದು 1.5 ಲಕ್ಷ ರೂ. ಮೌಲ್ಯದ ಉಂಗುರುವಾಗಿದೆ, ಈ ಉಂಗುರ ಅನಿವಾಸಿ ಮಲಯಾಳಿ ಕುಟುಂಬಕ್ಕೆ ಸೇರಿದ್ದಾಗಿತ್ತು. ಪೂಜಾರಿ ಕೆಪಿ ವಿನೀಶ್ ಎಂಬುವವರು ತಮಗೆ ಆರ್ಥಿಕ ಸಂಕಷ್ಟ ಇತ್ತೆಂದು ಆ ಉಂಗುರವನ್ನು ಗಿರವಿ ಇಟ್ಟಿದ್ದಾರೆ.
21 ದಿನ ಕಳೆದಿತ್ತು ಅಂದು ಉಂಗುರವನ್ನು ವಾಪಾಸ್ ಕೊಡಬೇಕಿತ್ತು ಆದರೆ ಪ್ರಸಾದ ಮಾತ್ರ ಕೊಟ್ಟಿದ್ದರು, ಅದಕ್ಕೆ ಭಕ್ತರು ಉಂಗುರವೆಲ್ಲಿ ಎಂದು ಕೇಳಿದಾಗ ಇಲ್ಲೆಲ್ಲೋ ಬಿದ್ದಿರಬೇಕು ಎಂದು ಹುಡುಕಾಡಿದಂತೆ ಮಾಡಿದರು. ಬಳಿಕ ಸಿಕ್ಕಿಲ್ಲವೆಂದರು.
ಈ ದೇವಾಲಯವು ತಿರುವಾಂಕೂರು ದೇವಸ್ವಂ ಮಂಡಳಿಯ ವೈಕಂ ಡೆಪ್ಯೂಟಿ ಕಮಿಷನರ್ ಕಚೇರಿಯ ವ್ಯಾಪ್ತಿಗೆ ಒಳಪಟ್ಟಿದೆ. ಬಳಿಕ ಕುಟುಂಬದವರು ಪೂಜಾರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ, ಆಗ ಅವರು ತಾನು ಉಂಗುರವನ್ನು ಗಿರವಿ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಉಂಗುರವನ್ನು ಹಿಂದಿರುಗಿಸಿದ್ದಾರೆ. ಪೂಜಾರಿಯನ್ನು ದೇವಸ್ಥಾನದಿಂದ ಅಮಾನತುಗೊಳಿಸಲಾಗಿದೆ.
ನಾವು ಯಾರ ಕೈಗೊಂಬೆ ಆಗಿ ಕೆಲಸ ಮಾಡಲ್ಲ ಅಂದಿದ್ದಾರೆ. ಹೀಗಾಗಿ ನಮಗೆ ನ್ಯಾಯ ಸಿಗೋ ಭರವಸೆ ಇದೆ: ನಿರಂಜನ್
ಅಂಜಲಿ ಹಂತಕ ಗಿರೀಶ್‌ಗೆ ಕಠಿಣ ಶಿಕ್ಷೆಯಾಗಬೇಕು: ವಿಚಾರಣೆ ಬಳಿಕ ಸಂತ್ರಸ್ತೆ ಹೇಳಿಕೆ
ಅಂಜಲಿ ಹಂತಕ ಗಿರೀಶ್‌ಗೆ ಕಠಿಣ ಶಿಕ್ಷೆಯಾಗಬೇಕು: ವಿಚಾರಣೆ ಬಳಿಕ ಸಂತ್ರಸ್ತೆ ಹೇಳಿಕೆ