Sunday, September 8, 2024

Latest Posts

ಕರ್ನಾಟಕ ರತ್ನ ಪ್ರಶಸ್ತಿ ಪಡೆಯುತ್ತಿರುವ 10 ನೇ ವ್ಯಕ್ತಿ ಪುನೀತ್ ರಾಜ್ ಕುಮಾರ್

- Advertisement -

ಕನ್ನಡದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನಗಲಿ ಇಂದಿಗೆ 19 ದಿನಗಳು ಕಳೆದಿವೆ. ಈ ಕಾರಣದಿಂದಾಗಿ ಪುನೀತ್ ಅವರಿಗೆ ಭಾವಂಜಲಿ ಸಲ್ಲಿಸಲು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿವತಿಯಿಂದ ಪುನೀತ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು “ನಾನು ಹಲವಾರು ಜನರ ಜೊತೆ ಚರ್ಚೆಮಾಡಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪುನೀತ್ ರಾಜಕುಮಾರ್ ಗೆ ಕೊಡಬೇಕು ಅನ್ನುವಂತ ಘೋಷಣೆಯನ್ನು ಇಂದು ನಾನು ಮಾಡ್ತಿದ್ದೆನೇ” ಎಂಬ ಮಾತುಗಳನ್ನು ಹೇಳಿದ್ದಾರೆ, ಹಾಗೂ ಅದಲ್ಲದೇ ಇನ್ನೂ ಹಲವಾರು ಸಲಹೆಗಳಿದ್ದವೆ ಬೇರೆ ಬೇರೆ ರಾಷ್ಟ್ರಮಟ್ಟದ ಪ್ರಶಸ್ತಿಗಳ ಬಗ್ಗೆ , ಅವುಗಳ ಬಗ್ಗೆ ನಮ್ಮ ಸರ್ಕಾರ ಬಹಳ ಮುಕ್ತವಾಗಿದೆ, ಬರುವಂತ ಸಂಪುಟ ಸಚಿವ ಸಭೆಯಲ್ಲಿ ಆ ನಿರ್ಣಯವನ್ನು ನಾವು ತೆಗೆದುಕೊಳ್ಳುತ್ತೇವೆ ಎಂಬ ಮಾತುಗಳನ್ನು ಹೇಳಿದ್ದಾರೆ.ಬಸವರಾಜ ಬೊಮ್ಮಾಯಿ ಯವರು ಅಪ್ಪುಗೆ ಕರ್ನಾಟಕ ರತ್ನ ಕೊಡುವುದರ ಬಗ್ಗೆ ಪುನೀತ ನಮನ ಕಾರ್ಯಕ್ರಮದಲ್ಲಿ ಅಧಿಕೃತ ಘೋಷಣೆ ಮಾಡಿಯೂ ಮತ್ತೆ ಟ್ಟೀಟ್‌ ಮಾಡಿ ಅಧಿಕೃತ ಮಾಹಿತಿ ತಿಳಿಸಿದ್ದಾರೆ. ‘ಕನ್ನಡನಾಡಿನ ಜನಪ್ರಿಯ ಕಲಾವಿದ ದಿವಂಗತ ಶ್ರೀ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ’ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.ಕರ್ನಾಟಕ ರತ್ನ ಪ್ರಶಸ್ತಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಇಲ್ಲಿಯವರೆಗೆ 9 ಜನ ಗಣ್ಯರಿಗೆ ಈ ಪ್ರಶಸ್ತಿ ಸಂದಿದೆ. ಪುನೀತ್‌ ರಾಜ್‌ಕುಮಾರ್‌ ಈ ಪ್ರಶಸ್ತಿ ಪಡೆಯುತ್ತಿರುವ 10ನೇ ಸಾಧಕರಾಗಿದ್ದಾರೆ.1992ರಲ್ಲಿ ಜ್ಞಾನಪೀಠ ಕವಿ ಕುವೆಂಪು ಹಾಗೂ ಡಾ. ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಂತರದ ದಿನಗಳಲ್ಲಿ ಎಸ್‌. ನಿಜಲಿಂಗಪ್ಪ, ಸಿಎನ್‌ಆರ್‌ ರಾವ್‌, ಡಾ. ದೇವಿಶೆಟ್ಟಿ, ಭೀಮಸೇನ್‌ ಜೋಶಿ, ಡಾ. ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡ, ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಈ ಗೌರವ ನೀಡಲಾಗಿತ್ತು.ಈಗ ಪುನೀತ್ ಅವರಿಗೆ ಗೌರವ ಸಲ್ಲುತ್ತಿರುವುದು ಅತ್ಯುತ್ತಮ ವಿಷಯವಾಗಿದೆ.ಪುನೀತ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಅಪ್ಪು ನೆನಪುಗಳು ಅಜರಾಮರ.

ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.

- Advertisement -

Latest Posts

Don't Miss