Bengaluru: ಗೋಬಿ ಮಂಚೂರಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು, ವಯಸ್ಸಾದವರವರೆಗೂ ಹಲವರು ಗೋಬಿ ಮಂಚೂರಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ನೀವು ಹೀಗೆ ಇಷ್ಟಪಟ್ಟು ತಿನ್ನುವ ಗೋಬಿ ಮಂಚೂರಿ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಗೊತ್ತೇ..? ಬಾಯಲ್ಲಿಟ್ಟರೆ ಮಂಜಿನಂತೆ ಕರಗುವ ಕಾಟನ್ ಕ್ಯಾಂಡಿ ಕೂಡ, ಅನಾರೋಗ್ಯಕರವೆಂದು ಸಾಬೀತಾಗಿದೆ. ಹಾಗಾಗಿ ಇವೆರಡೂ ಪದಾರ್ಥದಲ್ಲಿ ಬಳಸುವ ಬಣ್ಣಗಳನ್ನು ಬ್ಯಾನ್ ಮಾಡಲಾಗಿದೆ.
ಗೋಬಿ ಮತ್ತು ಕಾಟನ್ ಕ್ಯಾಂಡಿಗಳಲ್ಲಿ ಬಳಸುವ ಬಣ್ಣಗಳಲ್ಲಿ ಕೆಮಿಕಲ್ಸ್ ಇರುತ್ತದೆ. ಇದರ ಸೇವನೆಯಿಂದ ಕ್ಯಾನ್ಸರ್‌ನಂಥ ಮಾರಕ ಖಾಯಿಲೆ ಬರಲು ಸಂಭವವಿದೆ. ಕೆಲವರು ಪ್ರತಿದಿನ ಈ ಆಹಾರ ತಿನ್ನುವವರಿರುತ್ತಾರೆ. ಹಾಗಾಗಿ ಕೆಮಿಕಲ್ ಭರಿತವಾದ ಬಣ್ಣದ ಬಳಕೆ ಮಾಡಬಾರದು ಅಂತಾ ಆರೋಗ್ಯ ಇಲಾಖೆ ನಿರ್ಬಂಧ ಹೇರಿದೆ. ಹಾಗೇನಾದರೂ, ಸರ್ಕಾರದ ಮಾತು ಮೀರಿ, ಬಣ್ಣದ ಬಳಕೆ ಮಾಡಿದ್ರೆ, ಅಂಥವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಗೋವಾದ ಮಾಪ್ಸಾದಲ್ಲಿ, ತಮಿಳುನಾಡು, ಪುದುಚೇರಿಯಲ್ಲಿ ಈಗಾಗಲೇ ಈ ರೂಲ್ಸ್ ಜಾರಿಗೆ ಬಂದಾಗಿದೆ. ಪುದುಚೇರಿ, ತಮಿಳುನಾಡಿನಲ್ಲಿ ಬಣ್ಣ ಬಳಕೆಗೆ ನಿಷೇಧ ಹೇರಿದರೆ, ಗೋವಾದ ಮಾಪ್ಸಾದಲ್ಲಿ ಗೋಬಿ ಮಂಚೂರಿ ಮಾರಾಟವನ್ನೇ ನಿಷೇಧಿಸಿದ್ದಾರೆ. ಹಾಗಾಗಿ ಗೋಬಿ ಮಂಚೂರಿ ಪ್ರೀಯರು ಕೆಂಪು ಕೆಂಪಾದ ಗೋಬಿ ಮಂಚೂರಿ ನೋಡಿ, ಎಚ್ಚೆತ್ತುಕೊಳ್ಳಬೇಕಿದೆ. ಮಾರುಕಟ್ಟೆಯಲ್ಲಿ ಸಿಗುವ ಗೋಬಿ ಸವಿಯುವ ಬದಲು, ನೀವೇ ಮನೆಯಲ್ಲಿ ಗೋಬಿ ತಯಾರಿಸಿ ತಿನ್ನುವುದು ಉತ್ತಮ.
ಗೋಬಿ ಮಂಚೂರಿ ಹಾಗು ಕಾಟನ್ ಕ್ಯಾಂಡಿಗಳಲ್ಲಿ ಕಳಪೆ ಗುಣಮಟ್ಟ ಹಾಗು ಕೃತಕ ಬಣ್ಣಗಳ ಬಳಕೆಯಾಗುತ್ತಿದ್ದಿದ್ದು ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ರೋಡಮೈನ್-ಬಿ ಸೇರಿದಂತೆ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಇನ್ನುಮುಂದೆ ನಿಷೇಧಿತ ಈ ಕೃತಕ ಬಣ್ಣಗಳ ಬಳಕೆ ಮಾಡುವವರಿಗೆ 7 ವರ್ಷಗಳವರೆಗೆ ಜೈಲು ಹಾಗು 10 ಲಕ್ಷದವರೆಗೆ ದಂಡ… pic.twitter.com/3bX9d2mDNB
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 11, 2024
ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ: ಓವೈಸಿ
ಮಂಡ್ಯದಲ್ಲಿ ಮುಂದಿನ ವರ್ಷದ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ